ಲಕಲಕ ಹೊಳೆಯುವ ಕಾರಲ್ಲಿ ಚೆಲುವೆ ಯಾರಿವಳು?

Written By:

ಇತ್ತೀಚೆಗಷ್ಟೇ ಮುಂಬೈನಲ್ಲಿ ಆಯೋಜನೆಯಾಗಿದ್ದ ಲೋರಿಯಲ್ (L'oreal) ಪ್ಯಾರಿಸ್ ಫ್ಯಾಮಿನಾ ವುಮನ್ ಅವಾರ್ಡ್ಸ್ 2014 ಸಮಾರಂಭಕ್ಕೆ ಚೆಲುವೆಯೊಬ್ಬಾಕೆ ಎಂಟ್ರಿ ಕೊಟ್ಟಿದ್ದರು.

ಕಪ್ಪು ವರ್ಣ ಲಕಲಕ ಹೊಳೆಯುವ ಆಡಿ ಐಷಾರಾಮಿ ಕ್ಯೂ7 ಎಸ್‌ಯುವಿ ಕಾರಲ್ಲಿ ಕೆಂಪುಡುಗೆಯಲ್ಲಿ ಆಗಮಿಸಿದ್ದ ಚೆಂದುಳ್ಳಿ ಯಾರು ಅಂತೀರಾ? ಅದೇ ಚಿಕ್ನಿ ಚಮೇಲಿ ಖ್ಯಾತಿಯ ಕತ್ರಿನಾ ಕೈಫ್. ಈ ಬಾಲಿವುಡ್ ಚೆಲುವೆ ತಮ್ಮ ಆಡಿ ಐಷಾರಾಮಿ ಕಾರಲ್ಲಿ ಸಮಾರಂಭಕ್ಕೆ ಆಗಮಿಸಿದ್ದರು.

ಆಡಿ ಕ್ಯೂ7 ಐಷಾರಾಮಿ ಕಾರಲ್ಲಿ ಕತ್ರಿನಾ ಮಿಂಚು

ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆ ಆಡಿಯಿಂದ ನಿರ್ಮಿತವಾಗಿರುವ ಕ್ಯೂ7 ದೆಹಲಿ ಎಕ್ಸ್ ಶೋ ರೂಂ ದರ 58.49 ಲಕ್ಷ ರು.ಗಳಿಂದ ಆರಂಭವಾಗಿ ಟಾಪ್ ಎಂಡ್ ವೆರಿಯಂಟ್ 80.12 ಲಕ್ಷ ರು.ಗಳಷ್ಟು ದುಬಾರಿಯೆನಿಸಿದೆ.

ಆಡಿ ಕ್ಯೂ7 ಐಷಾರಾಮಿ ಕಾರಲ್ಲಿ ಕತ್ರಿನಾ ಮಿಂಚು

ನಿರ್ವಹಣೆ, ಆರಾಮದಾಯಕ ಹಾಗೂ ಬ್ರಾಂಡ್ ಮೌಲ್ಯ ವಿಚಾರದಲ್ಲಿ ಆಡಿ ಕ್ಯೂ7 ಹೆಚ್ಚು ಜನಪ್ರಿಯವಾಗಿದೆ. ಇದು ಪೆಟ್ರೋಲ್ ಹಾಗೂ ಎರಡು ಡೀಸೆಲ್ ಎಂಜಿನ್ ಆಯ್ಕೆಗಳನ್ನು ಪಡೆದುಕೊಂಡಿದೆ.

ಆಡಿ ಕ್ಯೂ7 ಐಷಾರಾಮಿ ಕಾರಲ್ಲಿ ಕತ್ರಿನಾ ಮಿಂಚು

ಆಡಿ ಕ್ಯೂ 3.0 ಟಿಎಫ್‌ಎಸ್‌ಐ ಕ್ವಾಟ್ರೊ ಪೆಟ್ರೋಲ್ ಹಾಗೂ 3.0 ಟಿಡಿಐ ಹೂಗೂ 4.2 ಟಿಡಿಐ ಡೀಸೆಲ್ ಎಂಜಿನ್‌ಗಳನ್ನು ಪಡೆದುಕೊಳ್ಳಲಿದೆ. ಈ ಪೈಕಿ ಪೆಟ್ರೋಲ್ ವೆರಿಯಂಟ್ ಆಟೋಮ್ಯಾಟಿಕ್ ಹಾಗೂ ಡೀಸೆಲ್ ವೆರಿಯಂಟ್ ಟಿಪ್‌ಟ್ರಾನಿಕ್ ಟ್ರಾನ್ಸ್‌ಮಿಷನ್ ಹೊಂದಿದೆ.

ಆಡಿ ಕ್ಯೂ7 ಐಷಾರಾಮಿ ಕಾರಲ್ಲಿ ಕತ್ರಿನಾ ಮಿಂಚು

ದೇಶದಲ್ಲಿ ಆಡಿ ಕ್ಯೂ 7 ಎಸ್‌ಯುವಿ ಕಾರಿನ ಉತ್ಪಾದನೆ ಔರಾಂಗಬಾದ್‌ನ ಘಟಕದಲ್ಲಿ ನಡೆಯುತ್ತಿದೆ. ಬಾಲಿವುಡ್ ನಟ ಸಲ್ಮಾನ್ ಖಾನ್ ಬಳಿಯೂ ಈ ದುಬಾರಿ ಎಸ್‌ಯುವಿ ಕಾರಿದೆ.

ಆಡಿ ಕ್ಯೂ7 ಐಷಾರಾಮಿ ಕಾರಲ್ಲಿ ಕತ್ರಿನಾ ಮಿಂಚು

ದೇಶದ ಸರ್ವಶ್ರೇಷ್ಠ ಪ್ರೀಮಿಯಂ ಎಸ್‌ಯುವಿಗಳ ಸಾಲಿನಲ್ಲಿ ಆಡಿ ಕ್ಯೂ7 ಗುರುತಿಸಿಕೊಂಡಿದೆ. ಇದು ಅತ್ಯಾಧುನಿಕ ತಂತ್ರಗಾರಿಕೆಯಿಂದ ಸಂಪನ್ನವಾಗಿದೆ.

ಆಡಿ ಕ್ಯೂ7 ಐಷಾರಾಮಿ ಕಾರಲ್ಲಿ ಕತ್ರಿನಾ ಮಿಂಚು

ಇನ್ನು ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಏರ್ ಬ್ಯಾಗ್, ಎಬಿಎಸ್ ಹಾಗೂ ಇಬಿಡಿ ಸೌಲಭ್ಯಗಳು ಇದರಲ್ಲಿದೆ.

ಆಡಿ ಕ್ಯೂ7 ಐಷಾರಾಮಿ ಕಾರಲ್ಲಿ ಕತ್ರಿನಾ ಮಿಂಚು

ಬಾಲಿವುಡ್‌ನ ಇತರ ತಾರೆಗಳನ್ನು ಗಮನಿಸಿದರೆ ಬಿಪಾಶಾ ಬಸು, ದೀಪಿಕಾ ಪಡುಕೋಣೆ ಹಾಗೂ ಜಾನ್ ಅಬ್ರಹಾಂ ಬಳಿಯೂ ಆಡಿ ಕ್ಯೂ 7 ಐಷಾರಾಮಿ ಕಾರುಗಳಿವೆ.

ಆಡಿ ಕ್ಯೂ7 ಐಷಾರಾಮಿ ಕಾರಲ್ಲಿ ಕತ್ರಿನಾ ಮಿಂಚು

ಮಗೆದೊಂದು ಮೂಲದ ವರದಿ ಪ್ರಕಾರ ಈ ಹಿಂದೆ ಕತ್ರಿನಾ ಕೈಫ್‌ಗೆ ಬರ್ತ್ ಡೇ ಗಿಫ್ಟ್ ರೂಪದಲ್ಲಿ ಆಡಿ ಕ್ಯೂ7 ಕಾರನ್ನು ಸಲ್ಮಾನ್ ಖಾನ್ ಉಡುಗೊರೆಯಾಗಿ ನೀಡಿದ್ದಾರಂತೆ!

ಇಂದಿನ ಫೇಸ್‌ಬುಕ್ ವೀಡಿಯೋ

Post by DriveSpark.

English summary
Bollywood actress Katrina Kaif snapped with her Audi Q7 car during the L'Oreal Paris Femina Women Awards 2014.
Story first published: Thursday, April 10, 2014, 6:01 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark