ಸುಜುಕಿ ಸೂಪರ್ ಬೈಕ್ ಖರೀದಿಸಿದ ಸಲ್ಮಾನ್ ಖಾನ್
ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ತನ್ನ ನೂತನ ಬೈಕಿನ ಚಿತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ನೂತನ ಸುಜುಕಿ ಇಟ್ರುಡರ್ ಎಂ1800ಆರ್ ಝಡ್ ಲಿಮಿಟೆಡ್ ಎಡಿಷನ್ ಬೈಕನ್ನು ತನ್ನ ಫೇಸ್ ಬುಕ್ ಪುಟದಲ್ಲಿ ಪ್ರಕಟಿಸಿದ್ದಾರೆ.
ಸಲ್ಮಾನ್ ಖಾನ್ ಬೈಕು, ಕಾರುಗಳೆಂದರೆ ಅಚ್ಚುಮೆಚ್ಚು. ತನ್ನ ಪ್ರೀತಿಪಾತ್ರರಿಗೆ ಸಲ್ಮಾನ್ ಖಾನ್ ಆಗಾಗ ವಾಹನ ಉಡುಗೊರೆ ನೀಡುವುದುಂಟು. ಸಲ್ಮಾನ್ ಖಾನ್ ಹೊಸ ಬೈಕ್ ಇಟ್ರುಡರ್ ಬಗ್ಗೆ ಕೊಂಚ ಮಾಹಿತಿ ಪಡೆಯೋಣ ಬನ್ನಿ.

ಸುಜುಕಿ ಇಟ್ರುಡರ್ ಸೂಪರ್ ಬೈಕ್ ರಿವ್ಯೂ
ಸುಜುಕಿ ಇಟ್ರುಡರ್ ಎಂ1800ಆರ್ ಕ್ರೂಷ್ ಬೈಕಾಗಿದ್ದು, ದರ ಸುಮಾರು 13.5 ಲಕ್ಷ ರು. ಇದೆ. ಸಲ್ಮಾನ್ ಖಾನ್ ಖರೀದಿಸಿದ ಲಿಮಿಟೆಡ್ ಅಡಿಷನ್ ಬೈಕ್ ದರ 15.5 ಲಕ್ಷ ರುಪಾಯಿ ಇದೆ. ಇದರ ಶಕ್ತಿಸಾಮರ್ಥ್ಯದ ಬಗ್ಗೆ ತಿಳಿಯಲು ಮುಂದಿನ ಪುಟ ನೋಡಿ.

ಸೂಪರ್ ಪವರಿನ ಸೂಪರ್ ಬೈಕ್
ಸಲ್ಮಾನ್ ಖಾನ್ ಹೊಂದಿರುವ ಸುಜುಕಿ ಇಟ್ರುಡರ್ 1,733ಸಿಸಿಯ ಟ್ವಿನ್ ಸಿಲಿಂಡರ್ ಎಂಜಿನ್ ಹೊಂದಿದೆ. ಇದು 120 ಹಾರ್ಸ್ ಪವರ್ ನೀಡುತ್ತದೆ. ಆದರೆ ಇದರ ಟಾರ್ಕ್ ಪವರ್ ಕಡಿಮೆ. ಇದು 160ಎನ್ಎಂ ಟಾರ್ಕ್ ನೀಡುತ್ತದೆ. ಇದರ ವೇಗದ ಮಾಹಿತಿಗೆ ಮುಂದಿನ ಚಿತ್ರನೋಡಿ.

ಆವೇಗಕ್ಕೆ ಸೆಡ್ಡು ಹೊಡೆಯುವ ಇಟ್ರುಡರ್ ವೇಗ
ಸುಜುಕಿ ಇಟ್ರುಡರ್ ಎಂ1800ಆರ್ ಝಡ್ ಎಂಬ ಭಾರಿ ಬೈಕ್ 347 ಕೆ.ಜಿ. ತೂಕವಿದೆ. ಇದರಲ್ಲಿ ಗಂಟೆಗೆ ಗರಿಷ್ಠ 200 ಕಿ.ಮೀ. ವೇಗದಲ್ಲಿ ಸಾಗಬಹುದಾಗಿದೆ. ಸುಜುಕಿ ಇಟ್ರುಡರ್ ವಿಶೇಷತೆ ಬಗ್ಗೆ ಮುಂದಿನ ಚಿತ್ರದಲ್ಲಿ ಮಾಹಿತಿಯಿದೆ.

ಸುಜುಕಿ ಇಟ್ರುಡರ್ ಎಂ1800ಆರ್ ಝಡ್ ವಿಶೇಷತೆ
ಇತರ ಬೈಕುಗಳಿಗೆ ಹೋಲಿಸಿದರೆ ಸುಜುಕಿ ಇಟ್ರುಡರ್ ಎಂ1800ಆರ್ ಝಡ್ ರಸ್ತೆಯಲ್ಲಿ ದೈತ್ಯವಾಗಿ ಕಾಣುತ್ತದೆ. ಸಲ್ಮಾನ್ ಖಾನಿಗಿಂತೂ ಇದು ಸೂಕ್ತ ಬೈಕ್. ಈ ಬೈಕಿನ ಇನ್ನಷ್ಟು ಮಾಹಿತಿ ಮುಂದಿನ ಪುಟದ ಚಿತ್ರದಲ್ಲಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಇಟ್ರುಡರ್
ಜಾಗತಿಕ ಮಾರುಕಟ್ಟೆಯಲ್ಲಿ ಈ ಬೈಕ್ ಹೆಚ್ಚು ಜನಪ್ರಿಯ. ಕೆಲವು ದೇಶಗಳಲ್ಲಿ ಇದಕ್ಕೆ ಬೊಲ್ವೆರ್ಡ್ ಅಂತ ಹೆಸರಿದೆ.

ಸಲ್ಮಾನ್ ಖಾನ್ ಸೂಪರ್ ಬೈಕ್
ಇದು ಸಲ್ಮಾನ್ ಖಾನ್ ಸೂಪರ್ ಬೈಕ್. ಈ ಲಿಮಿಟೆಡ್ ಅಡಿಷನ್ ಬೈಕನ್ನು ಒಂದಿಷ್ಟು ಮಾಡಿಫೈಡ್ ಮಾಡಲಾಗಿದೆ.
ಸುಜುಕಿ ಇಟ್ರುಡರ್ ಬೈಕ್ ದೇಶದಲ್ಲಿ ಎರಡು ಆವೃತ್ತಿಗಳಲ್ಲಿ ಲಭ್ಯವಿದೆ. ಅದರಲ್ಲಿ ಸಲ್ಮಾನ್ ಖಾನ್ ಖರೀದಿಸಿದ್ದು ಹೆಚ್ಚು ಶಕ್ತಿಶಾಲಿಯಾದ 1.8 ಲೀಟರ್ ಎಂಜಿನಿನ ಬೈಕ್. ಮತ್ತೊಂದು ಆವೃತ್ತಿಯ ಹೆಸರು ಎಂ800ಆರ್. ಇದು 800 ಸಿಸಿಯ ಬೈಕ್.
ಸಲ್ಮಾನ್ ಖಾನ್ ಹೊಂದಿರುವ ನೂತನ ಸುಜುಕಿ ಇಟ್ರುಡರ್ ಎಂ1800ಆರ್ ಝಡ್ ಕ್ರೂಷ್ ಬೈಕಾಗಿದ್ದು 1.8 ಲೀಟರಿನ ಟ್ವಿನ್ ಸಿಲಿಂಡರ್ ಎಂಜಿನ್ ಹೊಂದಿದೆ. ಇದರ ದರ ಸುಮಾರು 15.35 ಲಕ್ಷ ರುಪಾಯಿ ಇದೆ. ವಿಶೇಷವೆಂದರೆ ಸಲ್ಮಾನ್ ಖಾನ್ ಸುಜುಕಿಯ ಹಯಾಟೆ ಬೈಕಿಗೆ ಬ್ರಾಂಡ್ ರಾಯಭಾರಿ.
ಬೈಕ್ ಮಾತ್ರವಲ್ಲದೇ ಸಲ್ಮಾನ್ ಖಾನ್ ಗ್ಯಾರೇಜಿನಲ್ಲಿ ಸಾಕಷ್ಟು ದುಬಾರಿ, ಅದ್ದೂರಿ ಕಾರುಗಳಿವೆ. ಸಲ್ಲುಗೆ ಬಿಎಂಡಬ್ಲ್ಯು ಕಾರುಗಳೆಂದರೆ ಹುಚ್ಚು ಪ್ರೀತಿ. ಈ ಕಂಪನಿಯ ನಾಲ್ಕು ಕಾರುಗಳು ಇವರ ಗ್ಯಾರೇಜಿನಲ್ಲಿ ಸಾಲಾಗಿವೆ. ಒಂದು ಲೆಕ್ಸಾಸ್, ಮತ್ತೊಂದು ಲ್ಯಾಂಡ್ ಕ್ರೂಷರ್, ಮಗದೊಂದು ಮರ್ಸಿಡಿಸ್ ಬೆಂಝ್ ಕಾರು ಕೂಡ ಸಲ್ಮಾನ್ ಖಾನ್ ಬಳಿಯಿದೆ. ಆಡಿ ಎ8 ಕಾರು ಕೂಡ ಸಲ್ಲು ಬಳಿಯಿದೆ.


Click it and Unblock the Notifications








