ಮೂರು ಚಾಲಕ ರಹಿತ ಕಾರುಗಳಿಗೆ ಶುಭಮಸ್ತು

ಸೇಫ್ ರೋಡ್ ಟ್ರೈನ್ಸ್ ಸಂಸ್ಥೆ ಸಾರ್ಟ್ರೆ(SARTRE) ತನ್ನ ಮೂರು ಡ್ರೈವರ್ ರಹಿತ ಕಾರುಗಳನ್ನು ಸ್ಪೈನ್ ದೇಶದಲ್ಲಿ ಯಶಸ್ವಿಯಾಗಿ ಪರೀಕ್ಷಾತ್ಮಕ ಚಾಲನೆ ನಡೆಸಿದೆ. ಇತ್ತೀಚೆಗೆ ಅಮೆರಿಕದ ಅಂತರ್ ಜಾಲ ಕಂಪನಿ ಗೂಗಲ್ ತನ್ನ ಡ್ರೈವರ್ ರಹಿತ ಕಾರುಗಳಿಗೆ ನೇವಡ ರಾಜ್ಯದಲ್ಲಿ ಪರವಾನಿಗೆ ಪಡೆದಿತ್ತು.

ಸಾರ್ಟ್ರೆ ಅಂದರೆ ಯುರೋಪಿನ ಏಳು ಕಂಪನಿಗಳ ಜಂಟಿ ಉದ್ಯಮವಾಗಿದೆ. ಇದರಲ್ಲಿ ವೊಲ್ವೊ ಮಾತ್ರ ವಾಹನ ಕಂಪನಿಯಾಗಿದೆ. ಈ ಮೂರು ಕಾರುಗಳು ಯಾವುದೇ ತೊಂದರೆಯಿಲ್ಲದೇ ಸುಮಾರು 200 ಕಿ.ಮೀ. ದೂರದವರೆಗೆ ಸಂಚರಿಸಿವೆ. ಹೆದ್ದಾರಿಯಲ್ಲಿ ಇತರ ವಾಹನಗಳ ನಡುವೆ ಯಾವುದೇ ಸಮಸ್ಯೆಯಿಲ್ಲದಂತೆ ಈ ಕಾರುಗಳು ಚಲಿಸಿದ್ದು, ನೋಡುಗರಲ್ಲಿ ಅಚ್ಚರಿ ಮೂಡಿಸಿತ್ತು.

ಆದರೆ ಸಾಟ್ರೆ ಮತ್ತು ಗೂಗಲ್ ಚಾಲಕ ರಹಿತ ಕಾರುಗಳ ಕಾರ್ಯನಿರ್ವಹಣೆಯಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ಗೂಗಲ್ ಕಂಪನಿಯ ಚಾಲಕ ರಹಿತ ಕಾರು ಚಾಲಕನ ನೆರವಿಲ್ಲದೇ ಎಲ್ಲಿ ಬೇಕಾದರೂ ಸಾಗಬಹುದು. ಆದರೆ ಸಾಟ್ರೆ ಕಾರಿಗೆ ವೇರ್ ಲೆಸ್ ಸಂಪರ್ಕದ ಅಗತ್ಯವಿದ್ದು, ನಮ್ಮ ಸೂಚನೆಗಳನ್ನು ಪಾಲಿಸಿ ಚಲಿಸುತ್ತದೆ.

ಈ ಕಾರಲ್ಲಿ ಸಾಕಷ್ಟು ವಿಶೇಷತೆಗಳಿವೆ. ಈ ಕಾರು ರೈಲಿನ ಬೋಗಿಯಂತೆ ಕಾರ್ಯನಿರ್ವಹಿಸುತ್ತದೆ. ಈ ಕಾರಿನ ಜೊತೆ ಸಾಗಲು ಇಚ್ಚಿಸುವ ಕಾರುಗಳು ಈ ಕಾರಿಗೆ ಒಂದು ರಿಕ್ವೆಸ್ಟ್(ಫ್ರೆಂಡ್ ರಿಕ್ವೆಸ್ಟ್ ತರಹ) ಕಳುಹಿಸಬೇಕು. ಆ ಕಾರು ಅದನ್ನು ಆಸೆಪ್ಟ್ ಮಾಡಿದ್ಮೆಲೆ ನಮ್ಮ ಕಾರನ್ನು ಮುಖ್ಯ ಕಾರಿನ ವಶಕ್ಕೆಕೊಡಬಹುದು.

ಆದರೆ ಈ ಟೆಸ್ಟಿನಲ್ಲಿ ಮುಖ್ಯ ಕಾರಿನ ಬದಲಿಗೆ ಒಂದು ಟ್ರಕ್ ಬಳಸಲಾಗಿತ್ತು. ಉಳಿದ ಕಾರುಗಳು ಆ ಟ್ರಕ್ ಗೆ ರಿಕ್ವೆಸ್ಟ್ ಕಳುಹಿಸಿ ಚಲಿಸುತ್ತಿದ್ದವು. ಸುಮಾರು 16ರಿಂದ 50 ಅಡಿ ದೂರದ ಕಾರುಗಳನ್ನೂ ಮುಖ್ಯ ವಾಹನ ಹತೋಟಿಗೆ ತೆಗೆದುಕೊಂಡು ಸ್ವಯಂಚಾಲೀತವಾಗಿ ಚಲಿಸುವಂತೆ ಮಾಡುತ್ತದೆ.

ಸುತ್ತಮುತ್ತ ಎಲ್ಲಾದರೂ ಈ ವಾಹನವಿದೆ ಎಂದು ಗೊತ್ತಾದರೆ ಕಾರು ಚಾಲಕರು ಇದಕ್ಕೊಂದು (ಫ್ರೆಂಡ್ ) ರಿಕ್ವೆಸ್ಟ್ ಕಳಹಿಸಿದರೆ ಸಾಕು. ಅಲ್ಲಿಂದ ಅಸೆಪ್ಟ್ ಬಂದ್ಮೆಲೆ ಸ್ಟಿಯರಿಂಗ್ ಬಿಟ್ಟು ಆರಾಮವಾಗಿ ಕುಳಿತುಕೊಳ್ಳಬಹುದು. ನಿಮ್ಮ ಕಾರು ತನ್ನಷ್ಟಕ್ಕೆ ಚಲಿಸುತ್ತದೆ. ಕಾರು ಚಾಲನೆಯನ್ನು ಹೆಚ್ಚು ಸುಲಭ ಮತ್ತು ಸುರಕ್ಷಿತಗೊಳಿಸುವ ಐಡಿಯಾದಿಂದ ಈ ಕಾರನ್ನು ಅಭಿವೃದ್ಧಿಪಡಿಸಲಾಗಿದೆಯಂತೆ.

More from DriveSpark

Article Published On: Thursday, May 31, 2012, 16:12 [IST]
English summary
The SARTRE project, a project for Safe Road Trains for the Environment successfully tested a convoy of three self driving cars in Spain. It was recently only American internet giant Google was licensed to test its self driven cars in the state of Nevada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+