ಚಾಲಕ ರಹಿತ ಕಾರುಗಳಿಗೆ ನೋ ಎಂಟ್ರಿ- ಕೇಂದ್ರದಿಂದ ಮಹತ್ವದ ನಿರ್ಧಾರ..!

Written By:

ಇತ್ತೀಚೆಗೆ ಚಾಲಕ ರಹಿತ ಕಾರುಗಳ ಕುರಿತು ಆಟೋಮೊಬೈಲ್ ಜಗತ್ತಿನಲ್ಲಿ ತಹರೇವಾರಿ ಚರ್ಚೆಗಳು ನಡೆಯುತ್ತಿದ್ದು, ಈ ನಡುವೆ ಕೇಂದ್ರ ಸರ್ಕಾರವು ಚಾಲಕ ರಹಿತ ಕಾರುಗಳ ಕಾರ್ಯಚರಣೆಗೆ ಭಾರತದಲ್ಲಿ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲವೆಂದು ಸ್ಪಷ್ಟಪಡಿಸಿದೆ.

ಚಾಲಕ ರಹಿತ ಕಾರುಗಳಿಗೆ ನೋ ಎಂಟ್ರಿ- ಕೇಂದ್ರದಿಂದ ಮಹತ್ವ ನಿರ್ಧಾರ..!

ಚಾಲಕ ರಹಿತ ಕಾರು ಉತ್ಪಾದನೆಗೆ ಈಗಾಗಲೇ ಪ್ರಮುಖ ಕಾರು ಉತ್ಪಾದನಾ ಸಂಸ್ಥೆಗಳು ಬೃಹತ್ ಯೋಜನೆಗಳನ್ನು ರೂಪಿಸುತ್ತಿದ್ದು, ಗೂಗಲ್ ಸೇರಿದಂತೆ ಅನೇಕ ಕಂಪನಿಗಳು 2040ರ ವೇಳೆಗೆ ಮುಂದುವರಿದ ರಾಷ್ಟ್ರಗಳಲ್ಲಿ ಚಾಲಕ ರಹಿತ ಕಾರುಗಳನ್ನು ರಸ್ತೆಗೆ ಇಳಿಸುವ ಸಿದ್ಧತೆಯಲ್ಲಿವೆ.

ಚಾಲಕ ರಹಿತ ಕಾರುಗಳಿಗೆ ನೋ ಎಂಟ್ರಿ- ಕೇಂದ್ರದಿಂದ ಮಹತ್ವ ನಿರ್ಧಾರ..!

ಆದ್ರೆ ಚಾಲಕ ರಹಿತ ಕಾರು ಉತ್ಪಾದನಾ ಯೋಜನೆಗೆ ವಿರೋಧಿಸಿರುವ ಕೇಂದ್ರ ಸರ್ಕಾರದ ಸಾರಿಗೆ ಮತ್ತು ಹೆದ್ದಾರಿ ಸಚಿವ ನೀತಿನ್ ಗಡ್ಕರಿ, ಚಾಲಕ ರಹಿತ ಕಾರುಗಳು ಭಾರತದಲ್ಲಿ ಕಾರ್ಯಚರಣೆ ನಡೆಸುವುದರಿಂದ ಉಪಯೋಗಕ್ಕಿಂತ ನಷ್ಟವೇ ಹೆಚ್ಚು ಎಂದಿದ್ದಾರೆ.

ಚಾಲಕ ರಹಿತ ಕಾರುಗಳಿಗೆ ನೋ ಎಂಟ್ರಿ- ಕೇಂದ್ರದಿಂದ ಮಹತ್ವ ನಿರ್ಧಾರ..!

ಇದಕ್ಕೆ ಹಲವು ಕಾರಣಗಳಿವೆ. ಯಾಕೇಂದ್ರೆ 120 ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಈಗಲೇ ಬಲವಾಗಿ ಕಾಡುತ್ತಿದೆ. ಇಂತಹ ಸಂದರ್ಭದಲ್ಲಿ ಕಾರು ಚಾಲನೆಯನ್ನೇ ನಂಬಿರುವ ಲಕ್ಷಾಂತರ ಜನ ಉದ್ಯೋಗ ಕಳೆದುಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ.

ಚಾಲಕ ರಹಿತ ಕಾರುಗಳಿಗೆ ನೋ ಎಂಟ್ರಿ- ಕೇಂದ್ರದಿಂದ ಮಹತ್ವ ನಿರ್ಧಾರ..!

ಇಂತಹ ಸಂದರ್ಭದಲ್ಲಿ ಈ ರೀತಿಯ ಯೋಜನೆಗಳು ಅತಿ ಜನಸಂಖ್ಯೆಯುಳ್ಳ ಮುಂದುವರಿಯುತ್ತಿರುವ ರಾಷ್ಟ್ರಗಳಲ್ಲಿ ವ್ಯತರಿತ್ತ ಪರಿಣಾಮ ಎದುರಿಸಬೇಕಾಗುತ್ತದೆ. ಅಲ್ಲದೇ ದೇಶದ್ಯಾಂತ ಸುಮಾರು 22 ಲಕ್ಷ ಜನ ಕಾರು ಚಾಲನೆಯ ಮೇಲೆಯೇ ಬದುಕು ಕಂಡುಕೊಂಡಿದ್ದಾರೆ.

ಚಾಲಕ ರಹಿತ ಕಾರುಗಳಿಗೆ ನೋ ಎಂಟ್ರಿ- ಕೇಂದ್ರದಿಂದ ಮಹತ್ವ ನಿರ್ಧಾರ..!

ಈ ಹಿನ್ನೆಲೆ ಬೃಹತ್ ಯೋಜನೆಗೆ ಮನ್ನಣೆ ನೀಡಲು ಸಾಧ್ಯವಿಲ್ಲ ಎಂದಿರುವ ಕೇಂದ್ರ ಸರ್ಕಾರವು, ಇದರ ಬದಲು ವೃತ್ತಿಪರ ಚಾಲಕರನ್ನು ಪ್ರೋತ್ಸಾಹಿಸಲು ಮುಂದಿನ 5 ವರ್ಷಗಳಲ್ಲಿ ದೇಶಾದ್ಯಂತ 100 ಹೊಸ ಕಾರು ಚಾಲನೆ ತರಬೇತಿ ಕೇಂದ್ರಗಳನ್ನು ತೆರೆಯಲು ಮುಂದಾಗಿದೆ.

ಚಾಲಕ ರಹಿತ ಕಾರುಗಳಿಗೆ ನೋ ಎಂಟ್ರಿ- ಕೇಂದ್ರದಿಂದ ಮಹತ್ವ ನಿರ್ಧಾರ..!

ಇದರಿಂದಾಗಿ ಕಾರು ಚಾಲಕರು ಯಾವುದೇ ಕಾರಣಕ್ಕೂ ಎದೆಗುಂದಬೇಕಿಲ್ಲ ಎಂದಿರುವ ಕೇಂದ್ರ ಸಚಿವ ನೀತಿನ್ ಗಡ್ಕರಿ, ಪ್ರತಿಷ್ಠಿತ ಕಾರು ಉತ್ಪಾದನಾ ಸಂಸ್ಥೆಗಳ ಬೃಹತ್ ಯೋಜನೆಯ ಜಾರಿಗೂ ಮುನ್ನವೇ ಶಾಕ್ ನೀಡಿದ್ದಾರೆ.

ಚಾಲಕ ರಹಿತ ಕಾರುಗಳಿಗೆ ನೋ ಎಂಟ್ರಿ- ಕೇಂದ್ರದಿಂದ ಮಹತ್ವ ನಿರ್ಧಾರ..!

ಚಾಲಕ ರಹಿತ ಕಾರುಗಳ ಕಾರ್ಯಾಚರಣೆ ಹೇಗೆ?

ತನ್ನೊಳಗೆ ಅಳವಡಿಸಲಾಗಿರುವ ಸೂಕ್ಷ್ಮ ಸಂವೇದಕಗಳ ಮೂಲಕ ಸುತ್ತಲಿನ ಪರಿಸರವನ್ನು ಗಮನಿಸಿ, ಕಾರು ತಂತಾನೇ ಚಲಿಸುತ್ತದೆ. ಇದಕ್ಕೆ ಚಾಲಕರ ಅವಶ್ಯಕತೆಯೇ ಇಲ್ಲ. ಕಾರಿನಲ್ಲಿ ಅಳವಡಿಸಲಾಗಿರುವ ಅತ್ಯಂತ ಸುಧಾರಿತ ನಿಯಂತ್ರಣ ಸಾಧನಗಳು ರಸ್ತೆಯಲ್ಲಿರುವ ಗುಂಡಿ, ಉಬ್ಬುತಗ್ಗುಗಳು ಹಾಗೂ ರಸ್ತೆಯಲ್ಲಿ ಸುರಕ್ಷಿತ ಚಾಲನೆಗೆ ಹಾಕಿರುವ ಚಿಹ್ನೆಗಳನ್ನು ಕೂಡ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತವೆ.

English summary
Read in Kannada about Union Road Transport and Highways Minister Nitin Gadkari has confirmed that no car can be allowed in India at any stage.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark