ಎಸ್ ಬಿಐ: ತಿಂಗ್ಳಿಗೆ 21 ಸಾವಿರ ರು. ಸ್ಯಾಲರಿ ಇದ್ರೆ ಮಾತ್ರ ಕಾರು ಸಾಲ!

SBI Hikes Auto Loans Income Requirement
ವಾಹನ ಸಾಲ ಪಡೆಯುವುದು ಸುಲಭ. ತಿಂಗಳಿಗೆ 8-10 ಸಾವಿರ ಸ್ಯಾಲರಿ ಪಡೆಯುವರೆಲ್ಲ ಇಎಂಐ ಮೂಲಕ ವಾಹನ ಸಾಲ ಪಡೆಯಬಹುದು. ಆದರೆ ಇನ್ಮುಂದೆ ಎಲ್ಲರಿಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಈ ರೀತಿ ಸಾಲ ಪಡೆಯಲು ಸಾಧ್ಯವಿಲ್ಲ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಹೊಸ ನೀತಿಯ ಪ್ರಕಾರ ವಾಹನ ಸಾಲ ಪಡೆಯುವರ ವೇತನ ಮಿತಿ ತಿಂಗಳಿಗೆ 21 ಸಾವಿರ ರು. ಅಥವಾ ವರ್ಷಕ್ಕೆ ಎರಡೂವರೆ ಲಕ್ಷ ರುಪಾಯಿ ಇರಬೇಕು. ಈ ಹಿಂದೆ ತಿಂಗಳಿಗೆ 8,300 ರುಪಾಯಿ ವೇತನ ಪಡೆಯುವರು ಅಥವಾ ವರ್ಷಕ್ಕೆ 1 ಲಕ್ಷ ವೇತನ ಪಡೆಯುವ ವ್ಯಕ್ತಿ ಸಾಲ ಪಡೆಯಬಹುದಿತ್ತು.

ಸಾಲ ಮರುಪಾವತಿ ವಿಷ್ಯದಲ್ಲಿ ಅಪ್ರಾಮಾಣಿಕತೆ ತಡೆಯಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ಕಾರ್ಯತಂತ್ರದ ಮೊರೆ ಹೋಗಿದೆ. ವಾರ್ಷಿಕ ಆದಾಯ ಮಿತಿ 2.5 ಲಕ್ಷ ರು. ಇದ್ದರೆ ಗ್ರಾಹಕರು ಮತ್ತು ಬ್ಯಾಂಕಿನ ಆರೋಗ್ಯಕ್ಕೆ ಉತ್ತಮ ಎಂದು ಎಸ್ ಬಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.

"ದ್ವಿಚಕ್ರ ವಾಹನದಿಂದ ಸಣ್ಣಕಾರಿನತ್ತ ಆಗಮಿಸುವ ಗ್ರಾಹಕರು ಪ್ರತಿತಿಂಗಳು ಕನಿಷ್ಠ 1,765 ರುಪಾಯಿಗೂ ಹೆಚ್ಚು ಇಎಂಐ ಪಾವತಿಸಬೇಕಿದೆ. ಆದರೆ ಕಡಿಮೆ ಆದಾಯದ ಗ್ರಾಹಕರು ಸಾಲ ಮರುಪಾವತಿಗೆ ಕಷ್ಟಪಡುವುದು ಸಾಮಾನ್ಯ. ಹೀಗಾಗಿ ಇಂತಹ ನಿರ್ಧಾರ ಕೈಗೊಂಡಿದ್ದೇವೆ" ಎಂದು ಬ್ಯಾಂಕಿನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ಹಿಂದೆ ಏಳು ವರ್ಷಕ್ಕೆ ಪ್ರತಿತಿಂಗಳು 1,765 ರು. ಇಎಂಐನಂತೆ ಸಾಲ ನೀಡುತ್ತಿತ್ತು. ಆದರೆ ಕಳೆದ ಆರು ತಿಂಗಳಲ್ಲಿ ಸಾಲಮರುವಸೂಲಾತಿ ವಿಷ್ಯದಲ್ಲಿ ಬ್ಯಾಂಕ್ ಹಿನ್ನಡೆ ಅನುಭವಿಸಿದೆ. ಪರಿಣಾಮವಾಗಿ ತಿಂಗಳ ವೇತನ ಮಿತಿಯನ್ನು ಹೆಚ್ಚಿಸುವ ಮೂಲಕ ಕಡಿಮೆ ಆದಾಯ ಪಡೆಯುವರ ಕಾರು ಕನಸಿಗೆ ಬ್ಯಾಂಕ್ ಕನ್ನ ಹಾಕಿದೆ. ಎಸ್ ಬಿಐನಿಂದ ವಾಹನ ಸಾಲ ಪಡೆಯುವ ಮುನ್ನ ನಿಮ್ಮ ಸ್ಯಾಲರಿ ಸ್ಲಿಪ್ ನೋಡ್ಕೋಳ್ಳಿ.

More from DriveSpark

Article Published On: Saturday, January 28, 2012, 11:45 [IST]
English summary
State Bank of India now offer car loans only to those individuals who earn at least Rs 2.5 lakh per annum or Rs 21,000 per month.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+