ವಾಹನ ಸಾಲ ನೀಡೋದ್ರಲ್ಲಿ ಎಸ್‌ಬಿಐ ಮೇಲುಗೈ
ಇದೀಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಶೇಕಡ 11.25 ಬಡ್ಡಿದರದಲ್ಲಿ ಎಲ್ಲಾ ಟೆನ್ಯೂರ್ ಅಥವಾ ಅವಧಿಯ ಕಾರು ಸಾಲ ನೀಡುವ ಯೋಜನೆ ಹಮ್ಮಿಕೊಂಡಿದೆ. "ಕಂಪನಿಯ ವಾಹನ ಸಾಲವು ಗಮನಾರ್ಹ ಪ್ರಗತಿ ಸಾಧಿಸುತ್ತಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ರಿಟೇಲ್ ಕಾರು ಸಾಲ ಮಾರುಕಟ್ಟೆಯಲ್ಲಿ ಶೇಕಡ 25ರಷ್ಟು ಪ್ರಗತಿ ಕಾಣುವ ನಿರೀಕ್ಷೆಯಿದೆ" ಎಂದು ಎಸ್‌ಬಿಐ ಎಂಡಿ ಎ. ಕೃಷ್ಣಕುಮಾರ್ ಹೇಳಿದ್ದಾರೆ.
ಪ್ರಸಕ್ತ ವರ್ಷ ಸಂಸ್ಥೆಯು ದೇಶದ ವಾಹನೋದ್ಯಮಕ್ಕೆ ಅತ್ಯಧಿಕ ಪ್ರಮಾಣದಲ್ಲಿ ವಾಹನ ಸಾಲ ನೀಡಿದೆ ಎಂದು ಎಸ್‌ಬಿಐ ಹೇಳಿದೆ. ಉದ್ಯಮ ಮೂಲಗಳ ಪ್ರಕಾರ ಪ್ರಸಕ್ತ ವರ್ಷ ಮಾರ್ಚ್ ತಿಂಗಳವರೆಗೆ ಸುಮಾರು 20 ಸಾವಿರ ಕೋಟಿ ರುಪಾಯಿ ಕಾರು ಸಾಲ ನೀಡಿದೆ.
2011ರ ಡಿಸೆಂಬರ್ ಅಂತ್ಯಕ್ಕೆ ಕೊನೆಗೊಂಡ ತ್ರೈವಾರ್ಷಿಕದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಸುಮಾರು 1,25 ಸಾವಿರ ವಾಹನ ಖರೀದಿಗೆ ಸಾಲ ನೀಡಿತ್ತು. ಬ್ಯಾಂಕ್ ನಡೆಸುವ ವಿವಿಧ ಸಾಲಮೇಳಗಳಿಗೂ ಗ್ರಾಹಕರಿಗೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆಯಂತೆ.
ಆದರೆ ಈ ವರ್ಷದ ಆರಂಭದಲ್ಲಿ ಬಡ್ಡಿದರವನ್ನು ಶೇಕಡ 12ಕ್ಕೆ ನಿಗದಿಗೊಳಿಸಿತ್ತು. ಇದರಿಂದ ವಾಹನ ಸಾಲದ ಪ್ರಮಾಣ ಕಡಿಮೆಯಾಗಲು ಆರಂಭಿಸಿತ್ತು. ಇದೀಗ ಕಂಪನಿಯು ಮತ್ತೆ ಬಡ್ಡಿದರ ಕಡಿಮೆ ಮಾಡುವ ಯೋಜನೆ ಹಮ್ಮಿಕೊಂಡಿದೆ.


Click it and Unblock the Notifications









