ದೇಶದಲ್ಲಿ ಸಾವಿರ ಕೋಟಿ ಹೂಡಿಕೆ ಮಾಡಲಿರುವ ಸಾಫ್ಲರ್

ದೇಶದಲ್ಲಿ ಸಾಫ್ಲರ್ ಈಗಾಗಲೇ ಮೂರು ಘಟಕಗಳನ್ನು ಹೊಂದಿದೆ. ದೇಶದಲ್ಲಿರುವ ಎಂಜಿನಿಯರುಗಳ ಸಂಖ್ಯೆಯನ್ನು ಹೆಚ್ಚಿಸಲು ಕೂಡ ಕಂಪನಿ ನಿರ್ಧರಿಸಿದೆ. "ಪುಣೆ, ಹೊಸೂರು ಮತ್ತು ವಡೋದರದಲ್ಲಿನ ಮೂರು ಘಟಕಗಳಿಗೆ ಮುಂದಿನ ಮೂರು ವರ್ಷಗಳಲ್ಲಿ ಈ ಹೂಡಿಕೆ ಮಾಡಲು ನಿರ್ಧರಿಸಿದ್ದೇವೆ" ಎಂದು ಕಂಪನಿಯ ಏಷ್ಯಾ ಪೆಸಿಫಿಕ್ ಅಧ್ಯಕ್ಷರಾದ ಮ್ಯಾಥೀಸ್ ಝಿಂಕ್ ಹೇಳಿದ್ದಾರೆ.
ಕಂಪನಿಯು ಮುಂದಿನ ಮೂರು ವರ್ಷಗಳಲ್ಲಿ 1,200 ಜನರನ್ನು ನೇಮಕ ಮಾಡಿಕೊಳ್ಳಲು ಕೂಡ ನಿರ್ಧರಿಸಿದೆ. ಕಂಪನಿಯು ದೇಶದಲ್ಲಿ ಲಕ್, ಐಎನ್ಎ, ಫಾಗ್ ಮುಂತಾದ ಉತ್ಪನ್ನಗಳನ್ನು ಉತ್ಪಾದಿಸುತ್ತಿದೆ. ಇದರೊಂದಿಗೆ ಎಂಜಿನ್ ಬಾಲ್ ಬೇರಿಂಗ್ ಗಳನ್ನು ಕೂಡ ಉತ್ಪಾದಿಸುತ್ತಿದೆ.


Click it and Unblock the Notifications