ಹೆಚ್ಚು ಸ್ಥಳಾವಕಾಶವಿರುವ ದೇಶದ ಟಾಪ್ 6 ಕಾರು

By Nagaraja

ಬೆಳೆದು ಬರುತ್ತಿರುವ ಬೇಡಿಕೆಗೆ ಅನುಸಾರವಾಗಿ ಭಾರತದ ಮಾರುಕಟ್ಟೆಯಲ್ಲಿ ಒಂದರ ಬಳಿಕ ಒಂದರಂತೆ ಹಲವು ಆಕರ್ಷಕ ಕಾರುಗಳನ್ನು ದೇಶದ ವಾಹನ ತಯಾರಕ ಕಂಪನಿಗಳು ಪ್ರಕಟಿಸುತ್ತಿವೆ. ಈ ಪೈಕಿ ಗ್ರಾಹಕರುಗಳ ನಡುವೆ ಸಣ್ಣ ಕಾರುಗಳಿಗೆ ಭಾರಿ ಬೇಡಿಕೆಯಿದೆ.

ಇತರ ದುಬಾರಿ ಕಾರುಗಳಿಗೆ ಹೋಲಿಸಿದರೆ ಸ್ವಲ್ಪ ಅಗ್ಗದ ದರದಲ್ಲಿ ದೊರಕುವುದೇ ಇಂತಹ ಬೇಡಿಕೆಗೆ ಕಾರಣವಾಗಿದೆ. ಇದರಿಂದಾಗಿಯೇ ಇಂದಿನ ಈ ಲೇಖನದಲ್ಲಿ ದೇಶದಲ್ಲಿ ಸದ್ಯ ಲಭ್ಯವಿರುವ ಸಣ್ಣ ಕಾರುಗಳ ಪೈಕಿ ಹೆಚ್ಚು ಸ್ಥಳಾವಕಾಶವನ್ನು ಹೊಂದಿರುವ ಟಾಪ್ ಆರು ಕಾರುಗಳ ಬಗ್ಗೆ ಡ್ರೈವ್‌ಸ್ಪಾರ್ಕ್ ಅಭಿಮಾನಿಗಳಿಗೆ ಮಾಹಿತಿ ನೀಡಲಿದ್ದೇವೆ.

ದೇಶದ ಕಾರು ಖರೀದಿ ಗ್ರಾಹಕರು ಪ್ರಮುಖವಾಗಿ ಮೂರು ಅಂಶಗಳಿಗೆ ಪ್ರಾಮುಖ್ಯತೆ ನೀಡುತ್ತಾರೆ. ಮೊದಲನೇಯದಾಗಿ ಕಾರಿನ ದರದ ಬಗ್ಗೆ ತಿಳಿದುಕೊಳ್ಳುತ್ತಾರೆ. ಆ ಬಳಿಕ ಮೈಲೇಜ್ ಹಾಗೂ ಕಾರಿನ ಸ್ಥಳಾವಕಾಶದ ಬಗ್ಗೆ ಅರಿಯಲು ಭಾರಿ ಕುತೂಹಲ ಹೊಂದಿರುತ್ತಾರೆ.

ಕೆಲವು ದಿನಗಳ ಹಿಂದೆಯಷ್ಟೇ ಡ್ರೈವ್ ಸ್ಪಾರ್ಕ್ ತಂಡವು ದೇಶದ ಐದು ಅಗ್ಗದ ಕಾರುಗಳ ಬಗ್ಗೆ ಮಾಹಿತಿ ಕೊಟ್ಟಿದ್ದೆವು. ಇದೀಗ ಟಾಪ್ 6 ಹ್ಯಾಚ್‌ಬ್ಯಾಕ್ ಕಾರುಗಳ ಬಗ್ಗೆ ಮಾಹಿತಿ ನೀಡಲಿದ್ದು, ಇದು ಆಕರ್ಷಕ ಎಂಜಿನ್, ಉತ್ತಮ ಇಂಧನ ದಕ್ಷತೆ ಹಾಗೂ ತಮ್ಮದೇ ಆದ ಬ್ರಾಂಡ್ ಇಮೇಜ್‌ನಿಂದ ಸಾರ್ವತ್ರಿಕವಾಗಿದೆ.

ಷೆವರ್ಲೆಯ ಸೈಲ್ ಯುವಿಎ

ಷೆವರ್ಲೆಯ ಈ ನೂತನ ಅವತಾರ ದೇಶದಲ್ಲಿ ಈಗಾಗಲೇ ಬಿಡುಗಡೆಯಾಗಿದೆ. 1.2 ಲೀಟರ್ ಎಂಜಿನ್ ಹೊಂದಿರುವ ಷೆವರ್ಲೆ ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಭಾರತೀಯ ಮಾರುಕಟ್ಟೆಯಲ್ಲಿ ಷೆವರ್ಲೆ ಸೈಲ್ ಯುವಿಎ ಆರಂಭಿಕ ದರ 4.44 ಲಕ್ಷ ರುಪಾಯಿಗಳಾಗಿದೆ.

ಷೆವರ್ಲೆ ಸೈಲ್ ಯುವಿಎ ಇಂಟಿರಿಯರ್

ಆಕರ್ಷಕ ವಿನ್ಯಾಸದೊಂದಿಗೆ ಷೆವರ್ಲೆ ಸೈಲ್ ಯುವಿಎ ತಯಾರು ಮಾಡಲಾಗಿದೆ. ಅಲ್ಲದೆ ಕಾರಿನ ಒಳಗಡೆ ಉತ್ತಮ ಸ್ಥಳಾವಕಾಶವನ್ನು ಕಲ್ಪಿಸಲಾಗಿದೆ.

ಬೂಟ್ ಸ್ಪೇಸ್- 248 ಲೀಟರ್

ಲೆಗ್ ರೂಂ- 71 ಸೆಂಟಿಮೀಟರ್ ಮಾಕ್ಸಿಮಮ್- 84 ಸೆ. ಮೀ.

ಹೆಡ್ ರೂಂ- 95 ಸೆಂಟಿಮೀಟರ್

ಸೀಟ್ ಅಗಲ- 126 ಸೆ. ಮೀ.

ಫೋರ್ಡ್ ಫಿಗೊ

ಅಮೆರಿಕ ವಾಹನ ತಯಾರಕ ಕಂಪನಿ ಫೋರ್ಡ್ ಫಿಗೊ ದೇಶದಲ್ಲಿ ಉತ್ತಮ ಜನಪ್ರಿಯತೆ ಹೊಂದಿದೆ. ಭಾರತೀಯ ಮಾರುಕಟ್ಟೆಯಲ್ಲಿ ಫೋರ್ಡ್ ಫಿಗೊ ಕಾರಿನ ಆರಂಭಿಕ ದರ 2.84,999 ಲಕ್ಷ ರೂಪಾಯಿಗಳಾಗಿದೆ.

ಫೋರ್ಡ್ ಫಿಗೊ ಇಂಟಿರಿಯರ್

ಫೋರ್ಡ್ ಫಿಗೊ ಇಂಟಿರಿಯರ್ ಭಾಗಗಳಲ್ಲಿ ಹೆಚ್ಚಿನ ಸ್ಥಳಾವಕಾಶವನ್ನು ಒದಗಿಸಲಾಗಿದೆ. ಬನ್ನಿ ಈ ಕಾರಿನ ಒಳಾಂಗಣದ ಬಗ್ಗೆ ಸಂಕ್ಷಿಪ್ತವಾಗಿ ಅರಿಯೋಣ.

ಬೂಟ್ ಸ್ಪೇಸ್- 284 ಲೀಟರ್

ಲೆಗ್ ರೂಂ- ಮಿನಿಮಮ್ 64.5 ಸೆಂಟಿಮೀಟರ್ ಹಾಗೂ ಮಾಕ್ಸಿಮಮ್ 84 ಸೆಂಟಿಮೀಟರ್.

ಹೆಡ್ ರೂಂ- 89 ಸೆಂಟಿಮೀಟರ್

ಸೀಟ್ ಅಗಲ- 131 ಸೆಂಟಿಮೀಟರ್

ಹೊಂಡಾ ಜಾಝ್

ಹೊಂಡಾದ ಪ್ರೀಮಿಯಂ ಕಾರುಗಳಿಗೆ ದೇಶಿಯ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯಿದೆ. ಉತ್ತಮ ಇಂಧನ ಕ್ಷಮತೆ ಹಾಗೂ ಆಕರ್ಷಕ ವಿನ್ಯಾಸ ಹೊಂದಿರುವುದರಿಂದ ಗ್ರಾಹಕರು ಇದನ್ನು ತುಂಬಾನೇ ಇಷ್ಟಪಡುತ್ತಾರೆ. ಭಾರತ ಮಾರುಕಟ್ಟೆಯಲ್ಲಿ ಈ ಕಾರಿನ ಆರಂಭಿಕ ದರ ಸರಿ ಸುಮಾರು 6.5 ಲಕ್ಷ ರುಪಾಯಿಗಳಾಗಿವೆ.

ಹೊಂಡಾ ಜಾಝ್ ಇಂಟಿರಿಯರ್

ಬೂಟ್ ಸ್ಪೇಸ್- 366 ಲೀಟರ್

ಲೆಗ್ ರೂಂ- ಮಿನಿಮಮ್ 67 ಸೆಂಟಿಮೀಟರ್ ಹಾಗೂ ಮಾಕ್ಸಿಮಮ್ 91 ಸೆಂಟಿಮೀಟರ್

ಹೆಡ್ ರೂಂ-98 ಸೆಂಟಿಮೀಟರ್

ಸೀಟ್ ಅಗಲ- 125 ಸೆಂಟಿಮೀಟರ್

ಹ್ಯುಂಡೈನ ಜನಪ್ರಿಯ ಐ20

ದೇಶದ ಎರಡನೇ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಹ್ಯುಂಡೈನ ಐ20 ಹ್ಯಾಚ್‌ಬ್ಯಾಕ್ ಭಾರಿ ಜನಮನ್ನಣೆ ಗಿಟ್ಟಿಸಿಕೊಂಡಿದೆ. ಈ ಕಾರಿನಲ್ಲಿ ಅತ್ಯಾಧುನಿಕ ಫೀಚರ್ಸ್‌ಗಳ ಸಹಿತ ಹೆಚ್ಚಿನ ಸ್ಥಳಾವಕಾಶ ಕಲ್ಪಿಸಲಾಗಿದೆ. ಹ್ಯುಂಡೈ ಐ20 ಆರಂಭಿಕ ಕಾರು ದರ 4.75 ಲಕ್ಷ ರೂಪಾಯಿಗಳಾಗಿವೆ.

ಹ್ಯುಂಡೈ ಐ20 ಇಂಟಿರಿಯರ್

ಬೂಟ್ ಸ್ಪೇಸ್- 295 ಲೀಟರ್

ಲೆಗ್ ರೂಂ- ಮಿನಿಮಮ್ 56 ಸೆಂಟಿಮೀಟರ್ ಮಾಕ್ಸಿಮಮ್ 78 ಸೆ.ಮೀ

ಹೆಡ್ ರೂಂ- 95 ಸೆಂಟಿಮೀಟರ್

ಸೀಟ್ ಅಗಲ- 135 ಸೆಂಟಿಮೀಟರ್

ಟಾಟಾ ಇಂಡಿಕಾ ವಿಸ್ಟಾ

ದೇಶದ ಮುಂಚೂಣಿಯ ವಾಹನ ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್‌ನ ವಿಸ್ಟಾ ಬ್ರಾಂಡ್‌ಗೆ ಎರಡು ಮಾತಿಲ್ಲ. ಇತ್ತೀಚೆಗಷ್ಟೇ ಇಂಡಿಕಾ ವಿಸ್ಟಾ ಅನಾವರಣ ಮಾಡಲಾಗಿತ್ತು. ಭಾರತೀಯ ಮಾರುಕಟ್ಟೆಯಲ್ಲಿ ಇದರ ದರ 4.12 ಲಕ್ಷ ರುಪಾಯಿಗಳಾಗಿವೆ.

ಬೂಟ್ ಸ್ಪೇಸ್- 232 ಲೀಟರ್

ಲೆಗ್ ರೂಂ- ಮಿನಿಮಮ್ 72 ಸೆಂಟಿಮೀಟರ್ ಮಾಕ್ಸಿಮಮ್ 92 ಸೆಂಟಿಮೀಟರ್

ಹೆಡ್ ರೂಂ- 89 ಸೆಂಟಿಮೀಟರ್

ಸೀಟ್ ಅಗಲ- 136 ಸೆಂಟಿಮೀಟರ್.

ಸ್ಕೋಡಾದ ಆಕರ್ಷಕ ಫಾಬಿಯಾ

ಚೆಕ್ ಗಣರಾಜ್ಯದ ಪ್ರಮುಖ ಕಾರು ತಯಾರಕ ಕಂಪನಿಯಾದ ಸ್ಕೋಡಾದ ಫಾಬಿಯಾ ಭಾರತೀಯ ಮಾರುಕಟ್ಟೆಯ ಹ್ಯಾಚ್‌ಬ್ಯಾಕ್ ಪ್ರಿಯರಲ್ಲಿ ಭಾರಿ ಜನಪ್ರಿಯತೆ ಗಿಟ್ಟಿಸಿಕೊಂಡಿದೆ. ಈ ಕಾರಿನ ಆರಂಭಿಕ ದರ 4.96 ಲಕ್ಷ ರುಪಾಯಿಗಳಾಗಿವೆ.

ಸ್ಕೋಡಾ ಫಾಬಿಯಾ ಇಂಟಿರಿಯರ್

ಬೂಟ್ ಸ್ಪೇಸ್- 315 ಲೀಟರ್

ಲೆಗ್ ರೂಂ- ಮಿನಿಮಮ್ 61 ಸೆಂಟಿಮೀಟರ್ ಹಾಗೂ ಮಾಕ್ಸಿಮಮ್ 83 ಸೆಂಟಿಮೀಟರ್

ಹೆಡ್ ರೂಂ- 94 ಸೆಂಟಿಮೀಟರ್

ಸೀಟ್ ಅಗಲ- 131 ಸೆಂಟಿಮೀಟರ್

ಹೆಚ್ಚು ಸ್ಥಳಾವಕಾಶವಿರುವ ದೇಶದ ಟಾಪ್ 6 ಕಾರುಗಳು

ಹೆಚ್ಚು ಸ್ಥಳಾವಕಾಶವಿರುವ ದೇಶದ ಟಾಪ್ 6 ಕಾರುಗಳು

More from DriveSpark

Article Published On: Saturday, November 24, 2012, 9:35 [IST]
English summary
Here are India's 6 most spacious hatchbacks. These spacious small cars offer excellent cabin space, luggage space and legroom despite being compact in size.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+