ಸ್ಕೋಡಾ ಕಾರು ದರ ಹೆಚ್ಚಳ, ಎಷ್ಟಂತೆ?
ಕಾರುಗಳ ದರ ಹೆಚ್ಚಳ ಕಾರ್ಯಕ್ರಮಕ್ಕೆ ಸ್ಕೋಡಾ ಕೂಡ ಭಾಗವಹಿಸಿದೆ. 2012-13ನೇ ಸಾಲಿನ ಬಜೆಟಿನಲ್ಲಿ ಅಬಕಾರಿ ಸುಂಕ ಹೆಚ್ಚಾದ ನೆಪವನ್ನಿಟ್ಟುಕೊಂಡು ವಾಹನ ಕಂಪನಿಗಳು ದರ ಹೆಚ್ಚಿಸುತ್ತಿವೆ.
ಸ್ಕೋಡಾ ಸೂಪರ್ಬ್ ದರ 94 ಸಾವಿರ ರು. ಹೆಚ್ಚಾಗಿದೆ. ಹೀಗಾಗಿ ಇನ್ನು ಮುಂದೆ ಸೂಪರ್ಬ್ ಕಾರು ದರ 19.6 ಲಕ್ಷ ರುಪಾಯಿ.
ಫೋರ್ಡ್ ಕಂಪನಿಯ ಎಂಟ್ರಿ ಲೆವೆಲ್ ಹ್ಯಾಚ್ ಬ್ಯಾಕ್ ಫಾಬಿಯಾ ದರ ಕೂಡ 14 ಸಾವಿರ ರು.ನಷ್ಟು ಏರಿಕೆ ಕಂಡಿದೆ. ಇತ್ತೀಚೆಗೆ ರಸ್ತೆಗಿಳಿದ ಸ್ಕೋಡಾ ರಾಪಿಡ್ ಕಾರು 15 ಸಾವಿರ ರು.ನಷ್ಟು ದುಬಾರಿಯಾಗಿದೆ. ಎಂಟ್ರಿ ಲೆವೆಲ್ ಪೆಟ್ರೋಲ್ ರಾಪಿಡ್ ದರ ಇನ್ನುಮುಂದೆ 6.9 ಲಕ್ಷ ರು. ಆಸುಪಾಸಿನಲ್ಲಿರಲಿದೆ.
ಸ್ಕೋಡಾ ಲೌರಾ ಸೆಡಾನ್ ಕಾರು ಸುಮಾರು 32 ಸಾವಿರ ರುಪಾಯಿ ದುಬಾರಿಯಾಗಿದೆ. ಸ್ಕೋಡಾ ಲೌರಾ ದರ ಇನ್ನು ಮುಂದೆ 12.9 ಲಕ್ಷ ರುಪಾಯಿ ಇರಲಿದೆ. ಸ್ಕೋಡಾ ಯೆಟಿ ದರ ಕೂಡ 43 ಸಾವಿರ ರು.ವರೆಗೆ ಏರಿಕೆ ಕಂಡಿದೆ. ಇನ್ನುಮುಂದೆ ಯೆಟಿ ಆರಂಭಿಕ ದರ 13.9 ಲಕ್ಷ ರುಪಾಯಿ ಇರಲಿದೆ.


Click it and Unblock the Notifications









