ಹೊಸ ಕಾರು ಖರೀದಿ ಪ್ಲ್ಯಾನ್ ಇದೆಯಾ? ಹಾಗಾದ್ರೆ ಡಿಸೆಂಬರ್ 31ರ ಒಳಗಾಗಿ ಖರೀದಿ ಮಾಡಿ ಬಿಡಿ..!

2018ರ ಮುಗಿದು 2019ಕ್ಕೆ ಕಾಲಿಡಲು ಇನ್ನೇನು ದಿನಗಣನೆ ಆರಂಭವಾಗಿದ್ದು, ಹೊಸ ವರ್ಷದ ಆರಂಭದಲ್ಲೇ ಬಹುತೇಕರು ತಮ್ಮ ಇಷ್ಟದ ವಸ್ತುಗಳನ್ನು ಖರೀದಿಸುವ ಯೋಜನೆಯಲ್ಲಿ ಇರುತ್ತಾರೆ. ಹೀಗಿರುವಾಗ ಹೊಸ ವಾಹನ ಖರೀದಿ ಮಾಡ್ಬೇಕು ಎಂದುಕೊಂಡಿರುವ ಜನತೆಗೆ ವಾಹನ ಉತ್ಪಾದನಾ ಸಂಸ್ಥೆಗಳು ಶಾಕಿಂಗ್ ಸುದ್ದಿ ನೀಡುತ್ತಿವೆ.

ಹೊಸ ಕಾರು ಖರೀದಿ ಪ್ಲ್ಯಾನ್ ಇದೆಯಾ? ಹಾಗಾದ್ರೆ ಡಿಸೆಂಬರ್ 31ರ ಒಳಗಾಗಿ ಖರೀದಿ ಮಾಡಿ ಬಿಡಿ..!

ಹೌದು, ವಿದೇಶಿ ಮಿನಿಮಯ ಮತ್ತು ಬಿಡಿಭಾಗಗಳ ಆಮದು ಮೇಲಿನ ಆಮದು ಸುಂಕಗಳು ಹೆಚ್ಚಳಗೊಂಡಿರುವ ಹಿನ್ನೆಲೆಯಲ್ಲಿ ಬಹುತೇಕ ವಾಹನ ಉತ್ಪಾದನಾ ಸಂಸ್ಥೆಗಳು ತಮ್ಮ ಉತ್ಪನ್ನಗಳ ಮೇಲಿನ ಬೆಲೆ ಏರಿಕೆಗೆ ನಿರ್ಧರಿಸಿದ್ದು, ಜನವರಿ 1 ರಿಂದಲೇ ಬೆಲೆ ಹೆಚ್ಚಳವಾಗುವುದು ಬಹುತೇಕ ಖಚಿತವಾಗಿದೆ.

ಹೊಸ ಕಾರು ಖರೀದಿ ಪ್ಲ್ಯಾನ್ ಇದೆಯಾ? ಹಾಗಾದ್ರೆ ಡಿಸೆಂಬರ್ 31ರ ಒಳಗಾಗಿ ಖರೀದಿ ಮಾಡಿ ಬಿಡಿ..!

ಮಾಹಿತಿಗಳ ಪ್ರಕಾರ, ಹೊಸ ಕಾರುಗಳ ಬೆಲೆಯಲ್ಲಿ ಶೇ. 3 ರಿಂದ ಶೇ.4 ರಷ್ಟು ಹೆಚ್ಚಳ ಮಾಡುವ ಸುಳಿವು ನೀಡಿದ್ದು, ಎಂಟ್ರಿ ಲೆವಲ್ ಕಾರುಗಳ ಬೆಲೆಯಲ್ಲಿ ರೂ. 10 ಸಾವಿರದಿಂದ 30 ಸಾವಿರ ಮತ್ತು ಮಧ್ಯಮ ಗಾತ್ರದ ಕಾರುಗಳ ಬೆಲೆಯಲ್ಲಿ 20 ಸಾವಿರದಿಂದ 40 ಸಾವಿರ ಹಾಗೂ 30 ಲಕ್ಷಕ್ಕೂ ಮೇಲ್ಪಟ್ಟ ಐಷಾರಾಮಿ ಕಾರುಗಳ ಬೆಲೆಯಲ್ಲಿ ರೂ. 50 ಸಾವಿರದಿಂದ ರೂ. 3 ಲಕ್ಷ ಬೆಲೆ ಹೆಚ್ಚಳವಾಗುವ ಸಾಧ್ಯತೆಗಳಿವೆ.

ಹೊಸ ಕಾರು ಖರೀದಿ ಪ್ಲ್ಯಾನ್ ಇದೆಯಾ? ಹಾಗಾದ್ರೆ ಡಿಸೆಂಬರ್ 31ರ ಒಳಗಾಗಿ ಖರೀದಿ ಮಾಡಿ ಬಿಡಿ..!

ಕಾರುಗಳ ಉತ್ಪಾದನೆ ಮತ್ತು ಮಾರಾಟ ಪ್ರಕ್ರಿಯೆಯಲ್ಲಿ ಹೆಚ್ಚುತ್ತಿರುವ ಖರ್ಚುಗಳನ್ನು ನಿಭಾಯಿಸಲು ಬೆಲೆ ಏರಿಕೆ ಅನಿವಾರ್ಯ ಎಂದಿರುವ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು, ಹೊಸ ವರ್ಷದ ಆರಂಭದಲ್ಲಿ ವಾಹನ ಖರೀದಿಯ ಯೋಜನೆಯಲ್ಲಿರುವ ಗ್ರಾಹಕರಿಗೆ ಬೆಲೆ ಏರಿಕೆಯ ಶಾಕ್ ನೀಡುತ್ತಿವೆ.

ಹೊಸ ಕಾರು ಖರೀದಿ ಪ್ಲ್ಯಾನ್ ಇದೆಯಾ? ಹಾಗಾದ್ರೆ ಡಿಸೆಂಬರ್ 31ರ ಒಳಗಾಗಿ ಖರೀದಿ ಮಾಡಿ ಬಿಡಿ..!

ಮಾರುತಿ ಸುಜುಕಿ ಸಂಸ್ಥೆಯು ಕಾರಿನ ಬೆಲೆಯಲ್ಲಿ ಶೇ. 3 ರಿಂದ ಶೇ.4 ರಷ್ಟು ಹೆಚ್ಚಳ ಮಾಡುವ ಸುಳಿವು ನೀಡಿದ್ದು, ಎಂಟ್ರಿ ಲೆವಲ್ ಕಾರು ಮಾದರಿಯಾದ ಆಲ್ಟೋ 800 ಬೆಲೆಯಲ್ಲಿ ರೂ. 10 ಸಾವಿರದಿಂದ 12 ಸಾವಿರ ಮತ್ತು ಟಾಪ್ ಎಂಡ್ ಮಾದರಿಯಾದ ಎಸ್-ಕ್ರಾಸ್ ಎಸ್‌ಯುವಿ ಬೆಲೆಯಲ್ಲಿ ರೂ. 30 ಸಾವಿರದಿಂದ ರೂ. 40 ಸಾವಿರ ಬೆಲೆ ಏರಿಕೆಯಾಗಲಿದೆ.

ಹೊಸ ಕಾರು ಖರೀದಿ ಪ್ಲ್ಯಾನ್ ಇದೆಯಾ? ಹಾಗಾದ್ರೆ ಡಿಸೆಂಬರ್ 31ರ ಒಳಗಾಗಿ ಖರೀದಿ ಮಾಡಿ ಬಿಡಿ..!

ಹಾಗೆಯೇ ಕ್ಯಾಬ್ ಸೇವೆಗಳಿಗಾಗಿ ಹೆಚ್ಚಾಗಿ ಬಳಕೆಯಾಗುವ ಡಿಜೈರ್ ಟೂರ್ ಕಾರುಗಳ ಬೆಲೆಯು ರೂ. 25 ಸಾವಿರ ಹೆಚ್ಚಳವಾಗಲಿದ್ದರೆ, ಸ್ವಿಫ್ಟ್ ಬೆಲೆಯಲ್ಲಿ 20 ಸಾವಿರ, ವ್ಯಾಗನ್ ಆರ್, ಬಲೆನೊ, ಇಗ್ನಿಸ್, ಸೆಲೆರಿಯೊ ಬೆಲೆಗಳಲ್ಲಿ 15 ಸಾವಿರದಿಂದ 20 ಸಾವಿರ ಮತ್ತು ಸಿಯಾಜ್ ಕಾರುಗಳ ಬೆಲೆಯಲ್ಲಿ ರೂ.20 ಸಾವಿರದಿಂದ ರೂ.25 ಸಾವಿರ ಹೆಚ್ಚಳವಾಗುವುದು ಖಚಿತವಾಗಿದೆ.

ಹೊಸ ಕಾರು ಖರೀದಿ ಪ್ಲ್ಯಾನ್ ಇದೆಯಾ? ಹಾಗಾದ್ರೆ ಡಿಸೆಂಬರ್ 31ರ ಒಳಗಾಗಿ ಖರೀದಿ ಮಾಡಿ ಬಿಡಿ..!

ಇನ್ನು ಕಳೆದ ವಾರವಷ್ಟೇ ಬಿಡುಗಡೆಯಾಗಿರುವ ನ್ಯೂ ಜನರೇಷನ್ ಎರ್ಟಿಗಾ ಕಾರುಗಳ ಬೆಲೆಯಲ್ಲೂ ದರಕ್ಕೆ ಅನುಗುಣವಾಗಿ ಶೇ. 4 ರಷ್ಟು ಹೆಚ್ಚಳವಾಗಲಿದ್ದು, ಹೊಸ ವರ್ಷದ ಆರಂಭದಲ್ಲಿ ಕಾರು ಖರೀದಿಯ ಯೋಜನೆಯಲ್ಲಿರುವ ಗ್ರಾಹಕರಿಗೆ ಮತ್ತಷ್ಟು ಬೆಲೆ ಏರಿಕೆಯ ಬಿಸಿ ತಟ್ಟಲಿದೆ.

ಹೊಸ ಕಾರು ಖರೀದಿ ಪ್ಲ್ಯಾನ್ ಇದೆಯಾ? ಹಾಗಾದ್ರೆ ಡಿಸೆಂಬರ್ 31ರ ಒಳಗಾಗಿ ಖರೀದಿ ಮಾಡಿ ಬಿಡಿ..!

ಟೊಯೊಟಾ ಸಂಸ್ಥೆಯು ಸಹ ಕಾರಿನ ಬೆಲೆಯಲ್ಲಿ ಶೇ. 4ರಷ್ಟು ಹೆಚ್ಚಳ ಮಾಡುವ ಸುಳಿವು ನೀಡಿದ್ದು, ಎಂಟ್ರಿ ಲೆವಲ್ ಕಾರು ಮಾದರಿಯ ಇಟಿಯಾಸ್ ಲಿವಾ ಬೆಲೆಯಲ್ಲಿ ರೂ. 22 ಸಾವಿರ ಹೆಚ್ಚಳವಾಗಲಿದ್ದರೇ, ಹೈ ಎಂಡ್ ಮಾದರಿಯಾದ ಲ್ಯಾಂಡ್ ಕ್ರೂಸರ್ ಪ್ರಾಡೋ ಮಾದರಿಯ ಬೆಲೆಯಲ್ಲಿ ರೂ. 3.60 ಲಕ್ಷ ಹೆಚ್ಚಳಲಾಗಲಿದೆ.

ಹೊಸ ಕಾರು ಖರೀದಿ ಪ್ಲ್ಯಾನ್ ಇದೆಯಾ? ಹಾಗಾದ್ರೆ ಡಿಸೆಂಬರ್ 31ರ ಒಳಗಾಗಿ ಖರೀದಿ ಮಾಡಿ ಬಿಡಿ..!

ಇದರಲ್ಲಿ ಕ್ಯಾಬ್ ಸೇವೆಗಳಿಗಾಗಿ ಹೆಚ್ಚಾಗಿ ಬಳಕೆಯಾಗುವ ಇಟಿಯಾಸ್ ಸೆಡಾನ್ ಕಾರುಗಳ ಬೆಲೆಯು ರೂ. 25 ಸಾವಿರ ಹೆಚ್ಚಳವಾಗಲಿದ್ದರೆ, ಯಾರಿಸ್ ಬೆಲೆಯಲ್ಲಿ 35 ಸಾವಿರದಿಂದ 45 ಸಾವಿರ ಹಾಗೂ ಇನೋವಾ ಕ್ರಿಸ್ಟ್ರಾ ಕಾರುಗಳ ಬೆಲೆಯು ರೂ. 50 ಸಾವಿರದಿಂದ 65 ಸಾವಿರ ತನಕ ಹೆಚ್ಚಳವಾಗುವುದು ಖಚಿತವಾಗಿದೆ.

MOST READ: ಅಯ್ಯೋ ದೇವರೇ.. ಜಿಪಿಎಸ್ ನಂಬಿಕೊಂಡು ಹೋದ್ರೆ ಹೀಗಾ ಆಗೋದು..!

ಹೊಸ ಕಾರು ಖರೀದಿ ಪ್ಲ್ಯಾನ್ ಇದೆಯಾ? ಹಾಗಾದ್ರೆ ಡಿಸೆಂಬರ್ 31ರ ಒಳಗಾಗಿ ಖರೀದಿ ಮಾಡಿ ಬಿಡಿ..!

ಫಾರ್ಚೂನರ್ ಎಸ್‌ಯುವಿ, ಪ್ರಿಯಸ್, ಕ್ಯಾಮ್ರಿ ಮತ್ತು ಕರೊಲ್ಲಾ ಆಲ್ಟಿಸ್ ಸೆಡಾನ್ ಕಾರುಗಳ ಬೆಲೆಯಲ್ಲೂ ದರಕ್ಕೆ ಅನುಗುಣವಾಗಿ ಶೇ. 4 ರಷ್ಟು ಹೆಚ್ಚಳವಾಗಲಿದ್ದು, ಹೊಸ ವರ್ಷದ ಆರಂಭದಲ್ಲಿ ಕಾರು ಖರೀದಿಯ ಯೋಜನೆಯಲ್ಲಿರುವ ಗ್ರಾಹಕರಿಗೆ ಮತ್ತಷ್ಟು ಬೆಲೆ ಏರಿಕೆಯ ಬಿಸಿ ತಟ್ಟಲಿದೆ.

ಹೊಸ ಕಾರು ಖರೀದಿ ಪ್ಲ್ಯಾನ್ ಇದೆಯಾ? ಹಾಗಾದ್ರೆ ಡಿಸೆಂಬರ್ 31ರ ಒಳಗಾಗಿ ಖರೀದಿ ಮಾಡಿ ಬಿಡಿ..!

ಇದಲ್ಲದೇ, ಸ್ಕೋಡಾ ಇಂಡಿಯಾ, ಬಿಎಂಡಬ್ಲ್ಯು, ಇಸುಝು ಮೋಟಾರ್ಸ್ ಸಂಸ್ಥೆಗಳು ಸಹ ಈಗಾಗಲೇ ಪ್ರತಿಶತ 3ರಿಂದ 4ರಷ್ಟು ಬೆಲೆ ಹೆಚ್ಚಳ ಮಾಡುವ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದ್ದು, ಕಾರಿನ ಬೆಲೆಗಳಿಗೆ ಅನುಗುಣವಾಗಿ ಪರಿಷ್ಕೃತ ದರ ಪಟ್ಟಿಗಳು ನಿಗದಿಯಾಗಲಿವೆ.

MOST READ: ಹೆದ್ದಾರಿ ದರೋಡೆಕೋರರ ಹೆಡೆಮುರಿ ಕಟ್ಟಲು ಡಿಸಿಪಿ ಅಣ್ಣಾಮಲೈ ಮಾಡಿದ ಪ್ಲ್ಯಾನ್ ಹೇಗಿತ್ತು ಗೊತ್ತಾ?

ಹೊಸ ಕಾರು ಖರೀದಿ ಪ್ಲ್ಯಾನ್ ಇದೆಯಾ? ಹಾಗಾದ್ರೆ ಡಿಸೆಂಬರ್ 31ರ ಒಳಗಾಗಿ ಖರೀದಿ ಮಾಡಿ ಬಿಡಿ..!

ಒಟ್ಟಿನಲ್ಲಿ ಹೊಸ ವರ್ಷದ ವೇಳೆ ಕಾರು ಖರೀದಿ ಯೋಜನೆಯಲ್ಲಿರುವ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟುವುದು ಖಚಿತವಾಗಿದ್ದು, ಒಂದು ವೇಳೆ ನೀವು ಕೂಡಾ ಹೊಸ ವರ್ಷದ ಹೊತ್ತಿಗೆ ಕಾರು ಖರೀದಿಸುವ ಯೋಜನೆಯಲ್ಲಿದ್ದರೆ ಈಗಲೇ ಖರೀದಿ ಮಾಡಿ ಬೆಲೆ ಹೆಚ್ಚಳ ಹೊಡೆತದಿಂದ ತಪ್ಪಿಸಿಕೊಳ್ಳಬಹುದು.

Most Read Articles

Kannada
English summary
New cars prices increasing from January 2019. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X