ಸ್ಕೋಡಾ ಕಂಪನಿಯ 30 ಲಕ್ಷದ ಫಾಬಿಯಾ ಕಾರು

ಸ್ಕೋಡಾ ಕಂಪನಿಯು ಇದೀಗ ಜೆಕ್ ಗಣರಾಜ್ಯದಲ್ಲಿ ತನ್ನ 30 ಲಕ್ಷದ ಕಾರನ್ನು ಉತ್ಪಾದಿಸಿದೆ. ಕಂಪನಿಯು ಇಲ್ಲಿವರೆಗೆ ಜಾಗತಿಕವಾಗಿ ಇಷ್ಟೊಂದು ಪ್ರಮಾಣದಲ್ಲಿ ಫಾಬಿಯಾ ಹ್ಯಾಚ್ ಬ್ಯಾಕ್ ಕಾರು ಮಾರಾಟ ಮಾಡಿದೆ. ಫಾಬಿಯಾ ಕಾರು ಫೋಕ್ಸ್ ವ್ಯಾಗನ್ ಪೊಲೊ ಮತ್ತು ಸೀಟ್ ಐಬಿಝಾ ಕಾರುಗಳಿಗೆ ಪರ್ಯಾಯ ಆಯ್ಕೆಯಾಗಿದೆ.

ಕಂಪನಿಯು ತನ್ನ 30 ಲಕ್ಷದ ಯುನಿಟನ್ನು ಕೊಂಚ ವಿಶೇಷವಾಗಿ ವಿನ್ಯಾಸ ಮಾಡಿದೆ. ಅಂದರೆ ಇದರಲ್ಲಿ ಸಣ್ಣಪುಟ್ಟ ಮೆಕಾನಿಕಲ್ ಮತ್ತು ವಿನ್ಯಾಸದಲ್ಲಿ ಬದಲಾವಣೆ ಮಾಡಲಾಗಿದೆ. ಇದರ ಮೈಲೇಜ್ ಕೂಡ ಕೊಂಚ ಜಾಸ್ತಿಯಾಗಿದೆಯಂತೆ. ಈ ಕಾರನ್ನು ಜರ್ಮಿನಿಯ ಗ್ರಾಹಕರೊಬ್ಬರಿಗೆ ರಫ್ತು ಮಾಡಲಾಗುವುದೆಂದು ಕಂಪನಿ ಪ್ರಕಟಿಸಿದೆ.

ಸ್ಕೋಡಾ ಕಂಪನಿಯು 1999ರಲ್ಲಿ ಫಾಬಿಯಾ ಹ್ಯಾಚ್ ಬ್ಯಾಕ್ ಕಾರನ್ನು ಹೊರತಂದಿತ್ತು. ಜಾಗತಿಕ ಮಾರುಕಟ್ಟೆಗೆ 2007ರಲ್ಲಿ ಫಾಬಿಯಾ ಪರಿಚಯಿಸಲಾಗಿತ್ತು. ಕಂಪನಿಯು ಫಾಬಿಯಾ ಕಾರುಗಳನ್ನು ಭಾರತ, ಚೀನಾ, ರಷ್ಯಾ ಮತ್ತು ಜೆಕ್ ಗಣರಾಜ್ಯ ಸೇರಿದಂತೆ ಸುಮಾರು 103 ದೇಶಗಳಲ್ಲಿ ಫಾಬಿಯಾ ಕಾರನ್ನು ಮಾರಾಟ ಮಾಡುತ್ತಿದೆ.

ಸ್ಕೋಡಾ ಕಂಪನಿಯ ಒಟ್ಟಾರೆ ವಾಹನ ಮಾರಾಟದಲ್ಲಿ ಫಾಬಿಯಾ ಪಾಲು ಶೇಕಡ 25ರಷ್ಟಿದೆ. ಕಂಪನಿಯು ಶೀಘ್ರದಲ್ಲಿ ಫಾಬಿಯಾ ಕಾರಿನ ಹೊಸ ಆವೃತ್ತಿಯೊಂದನ್ನು ಪರಿಚಯಿಸುವ ಯೋಜನೆಯನ್ನೂ ಹೊಂದಿದೆ.

More from DriveSpark

Article Published On: Thursday, May 10, 2012, 13:10 [IST]
English summary
Skoda rolled off 3 millionth Fabia car at company assembly line in Mlada Boleslav. Fabia first launched back in 1999.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+