ಸ್ಕೋಡಾದಿಂದ ಅಗ್ಗದ ದರದ ಫಾಬಿಯಾ ಕಾರು

ಸಣ್ಣಕಾರು ವಿಭಾಗದಲ್ಲಿ ಹೊಸ ಆಟ ಶುರುಹಚ್ಚಲು ಸ್ಕೋಡಾ ಆಲೋಚಿಸುತ್ತಿದೆ. ಜೆಕ್ ಗಣರಾಜ್ಯದ ಕಾರು ಕಂಪನಿಯು ತನ್ನ ಮಾರುಕಟ್ಟೆ ಪಾಲನ್ನು ಹೆಚ್ಚಿಸಲು ಫಾಬಿಯಾ ಹ್ಯಾಚ್ ಬ್ಯಾಕ್ ಕಾರಿನ ದರ ತಗ್ಗಿಸಲು ಯೋಜಿಸಿದೆ. ಕಂಪನಿಯು ಫಾಬಿಯಾ ಉತ್ಪಾದನೆಯನ್ನು ಹೆಚ್ಚು ಸ್ಥಳೀಕರಣ ಮಾಡಲು ಪ್ರಯತ್ನಿಸುತ್ತಿದೆ.

"ಕಂಪನಿಯು ಕಾರು ಉತ್ಪಾದನೆಯನ್ನು ಹೆಚ್ಚು ಸ್ಥಳೀಕರಿಸಲು ಯೋಜಿಸಿದೆ. ಇದರಿಂದ ಗ್ರಾಹಕರಿಗೆ ಕಾರು ಅಗ್ಗದ ದರಕ್ಕೆ ದೊರೆಯಲಿದೆ" ಎಂದು ಸ್ಕೋಡಾ ಆಟೋ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕರಾದ ಸುಧೀರ್ ರಾವ್ ಹೇಳಿದ್ದಾರೆ.

ಸದ್ಯ ಸ್ಕೋಡಾ ರಾಪಿಡ್ ಅತ್ಯಧಿಕ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಕಂಪನಿಯು ಕಳೆದ ವರ್ಷ ಒಟ್ಟು 30 ಸಾವಿರ ರಾಪಿಡ್ ಕಾರುಗಳನ್ನು ಮಾರಾಟ ಮಾಡಿತ್ತು. ಪ್ರಸಕ್ತ ವರ್ಷವೂ ರಾಪಿಡ್ ಮಾರಾಟ ಅತ್ಯುತ್ತಮವಾಗಿದೆ ಎಂದು ಕಂಪನಿ ಹೇಳಿದೆ.

ಕಂಪನಿಯು ಮುಂದಿನ ತಲೆಮಾರಿನ ನೂತನ ಫಾಬಿಯಾ ಕಾರನ್ನು ಮುಂಬರವ ವರ್ಷಗಳಲ್ಲಿ ಪರಿಚಯಿಸಲಿದೆ. ಕಂಪನಿಯು ಈಗ ಫಾಬಿಯಾ ಕಾರನ್ನು ಶೇಜಡ 50ರಷ್ಟು ಸ್ಥಳೀಯವಾಗಿ ಉತ್ಪಾದಿಸುತ್ತಿದೆ. ಇದನ್ನು ಕಂಪನಿಯು ಶೇಕಡ 80-90ಕ್ಕೆ ತಲುಪಿಸಲು ಪ್ರಯತ್ನಿಸುತ್ತಿದೆ.

ದೇಶದಲ್ಲಿ ಸದ್ಯ ಸ್ಕೋಡಾ ಫಾಬಿಯಾ ದರ ಸುಮಾರು 5ರಿಂದ 8.5 ಲಕ್ಷ ರು.ವರೆಗಿದೆ. ಕಂಪನಿಯು ದರವನ್ನು ಇನ್ನೆಷ್ಟು ಕಡಿಮೆ ಮಾಡಬಹುದು. ಯಾವುದಕ್ಕೂ ಕೊಂಚ ದಿನ ಕಾಯೋಣ. ಅಂದಹಾಗೆ ಫಾಬಿಯಾ ಕಾರು ನಿಮಗೆ ಇಷ್ಟನಾ?

More from DriveSpark

Article Published On: Thursday, September 13, 2012, 15:58 [IST]
English summary
Skoda is looking to up the game in the hatchback segment. The Czech carmaker is looking to slash the price down of the Fabia Hatchback and up their hatchback market share by 4%. Skoda is working on driving up the localization and strengthening their service.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+