ಶಿವರಾಜ್ ನಿರ್ಮಿಸಿದ ಬೊಂಬಾಟ್ ಸೋಲಾರ್ ರಿಕ್ಷಾ
ಕಡಿಮೆ ವೆಚ್ಚದ, ಅತ್ಯುತ್ತಮ ದಕ್ಷತೆಯ ಸೌರಶಕ್ತಿ ಚಾಲಿತ ವಿನೂತನ ತ್ರಿಚಕ್ರವಾಹನವೊಂದನ್ನು ತಮಿಳುನಾಡಿನ ತಿರುಪುರ್ ಮೂಲದ ಎಂಬಿಎ ಪದವಿದರ ಶಿವರಾಜ್ ಮುತ್ತುರಾಮನ್(26) ಅಭಿವೃದ್ಧಿಪಡಿಸಿದ್ದಾರೆ.
ಶಿವರಾಜ್ ಅನ್ವೇಷಣೆ ಮಾಡಿರುವ ನೂತನ ಎಕೊ ಫ್ರೀ ಕ್ಯಾಬ್ "ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್"ನ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದಲ್ಲಿ ದಾಖಲಾಗಿದೆ. ವಿಶೇಷವೆಂದರೆ ಪೆಡಲ್ ಮೂಲಕವೂ ಇದನ್ನು ಸೈಕಲ್ ನಂತೆ ಚಲಾಯಿಸಬಹುದಾಗಿದೆ.
ಈ ಪರಿಸರ ಸ್ನೇಹಿ ರಿಕ್ಷಾದಲ್ಲಿ ಗರಿಷ್ಠ ಮೂರು ಜನರು ಪ್ರಯಾಣಿಸಬಹುದಾಗಿದೆ. ಇದರ ಪೆಡಲ್ ಡ್ರೈವಿಂಗ್ ಕೂಡ ಸ್ಮೂತಾಗಿದ್ದು ತ್ರಾಸದಾಯಕವಾಗಿಲ್ಲವೆಂದು ಮುತ್ತುರಾಮನ್ ಹೇಳಿದ್ದಾರೆ.
ಮೂರು ಗಂಟೆ ಚಾರ್ಜ್ ಮಾಡಿದರೆ ಈ ರಿಕ್ಷಾ ಸುಮಾರು 150 ಕಿ.ಮೀ. ದೂರದವರೆಗೆ ಪ್ರಯಾಣಿಸಬಲ್ಲದು. ಈ ಸೋಲಾರ್ ತ್ರಿಚಕ್ರ ವಾಹನದ ಗರಿಷ್ಠ ವೇಗ ಗಂಟೆಗೆ 45 ಕಿ.ಮೀ. ಆಗಿದೆ.
ಈ ಸೋಲಾರ್ ರಿಕ್ಷಾವನ್ನು ಅಭಿವೃದ್ಧಿಪಡಿಸಲು ಶಿವರಾಜ್ ಮುತ್ತುರಾಮನ್ ಗೆ ಮೂರು ವರ್ಷ ಬೇಕಾಯಿತಂತೆ. ಇದರ ದಕ್ಷತೆ, ಬ್ಯಾಟರಿ ಚಾರ್ಜಿಂಗ್ ವಿಷಯದಲ್ಲಿ ತೃಪ್ತಿಯಾಗದ ಹಿನ್ನಲೆಯಲ್ಲಿ ಹಲವು ಹೊಸ ಮಾರ್ಪಾಡುಗಳನ್ನು ಮಾಡಬೇಕಾಯಿತೆಂದು ಶಿವರಾಜ್ ಹೇಳಿದ್ದಾರೆ.
ಈ ಸೋಲಾರ್ ರಿಕ್ಷಾವನ್ನು ವಾಣಿಜ್ಯ ಮಾರಾಟ ಉದ್ದೇಶಕ್ಕೆ ಅಭಿವೃದ್ಧಿಪಡಿಸಬೇಕಾದರೆ ಸುಮಾರು 80 ಸಾವಿರ ರು. ವೆಚ್ಚವಾಗಬಹುದು ಎಂದು ಶಿವರಾಜ್ ಹೇಳುತ್ತಾರೆ.
"ಸಾಂಪ್ರದಾಯಿಕ ಹೈಬ್ರಿಡ್ ವಾಹನಗಳ ಅಭಿವೃದ್ಧಿಗೆ ಕಡಿಮೆಯೆಂದರೂ 4 ಲಕ್ಷ ರು. ವೆಚ್ಚವಾಗುತ್ತದೆ. ಆದರೆ ಈ ಸೋಲಾರ್ ರಿಕ್ಷಾಕ್ಕೆ ಸುಮಾರು 80 ಸಾವಿರ ರು. ಸಾಕು. ಇದರ ಮೇಟೆಂನ್ ವೆಚ್ಚವೂ ಕಡಿಮೆ" ಎಂದು ಶಿವರಾಜ್ ತಿಳಿಸಿದ್ದಾರೆ.


Click it and Unblock the Notifications









