ವಿದ್ಯಾರ್ಥಿಗಳ ಸಾಧನೆ: 180 ಕಿ.ಮೀ. ಮೈಲೇಜ್ ನೀಡುವ ಸ್ಕೂಟರ್
ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿರುವ ಈ ಸ್ಕೂಟರ್ ಒಟ್ಟು ಮೂರು ಮೋಟರುಗಳನ್ನು ಹೊಂದಿದೆ. ಎರಡು ಮೋಟರುಗಳು ಚಕ್ರಗಳಿಗೆ ಚಾಲನಾ ಶಕ್ತಿ ನೀಡುತ್ತವೆ. ಮತ್ತೊಂದು ಮೋಟರ್ ಬ್ಯಾಟರಿ ಚಾರ್ಜ್ ಮಾಡಲು ಬಳಕೆಯಾಗುತ್ತದೆ.
ಈ ಎಲೆಕ್ಟ್ರಿಕ್ ಸ್ಕೂಟರ್ ಒಟ್ಟು ಮೂರು ಮೋಟರುಗಳನ್ನು ಹೊಂದಿದೆ. ಇದರಲ್ಲಿ ಮೊದಲ ಎರಡು ಮೋಟರುಗಳು ಚಕ್ರಗಳನ್ನು ತಿರುಗಿಸಲು ಶಕ್ತಿ ನೀಡುತ್ತವೆ. ಉಳಿದು ಒಂದು ಮೋಟರ್ ಕೈನೆಟಿಕ್ ಸ್ಕೂಟರಿನ ಬ್ಯಾಟರಿಯನ್ನು ಚಾರ್ಜ್ ಮಾಡಲು ಬಳಸಲಾಗುತ್ತದೆ.
ಎರಡು ಮೋಟರುಗಳು ಖರ್ಚುಮಾಡಿದ ಕರೆಂಟನ್ನು ಮತ್ತೊಂದು ಮೋಟರಿನಲ್ಲಿ ಚಾರ್ಜ್ ಮಾಡುವ ತಂತ್ರಜ್ಞಾನ ಇದಾಗಿದೆ. ವಿದ್ಯಾರ್ಥಿಗಳು ಈ ಮೋಟರ್ ತಂತ್ರಜ್ಞಾನವನ್ನು ಕೈನಟಿಕ್ ಸ್ಕೂಟರಿಗೆ ಅಳವಡಿಸಿದ್ದಾರೆ. ಈ ಸ್ಕೂಟರ್ ಒಂದು ಯುನಿಟ್ ಕರೆಂಟಿನಲ್ಲಿ ಚಾರ್ಜ್ ಆಗುತ್ತದೆ. ಈ ಒಂದು ಯುನಿಟ್ ಕರೆಂಟಿನಲ್ಲಿ ಸುಮಾರು 180 ಕಿ.ಮೀ. ದೂರದಷ್ಟು ಚಲಿಸುತ್ತದೆ.
ಆದರೆ ಈ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿರುವ 180 ಕಿ.ಮೀ. ಮೈಲೇಜ್ ಸ್ಕೂಟರ್ ಹೊಸ ಭರವಸೆಯಂತೆ ಕಾಣುತ್ತದೆ. ಕೇವಲ ಒಂದು ಗಂಟೆಯಲ್ಲಿ ಈ ಸ್ಕೂಟರ್ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ. ಹೆಚ್ಚಿನ ಎಲೆಕ್ಟ್ರಿಕ್ ಸ್ಕೂಟರುಗಳು ಚಾರ್ಜ್ ಆಗಲು ಮೂರುಗಂಟೆಗಿಂತ ಹೆಚ್ಚು ಸಮಯಬೇಕು. ಈ ದೃಷ್ಟಿಯಿಂದಲೂ ನೂತನ ಎಲೆಕ್ಟ್ರಿಕ್ ಸ್ಕೂಟರ್ ಉತ್ತಮ.
ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿರುವ ನೂತನ ಸ್ಕೂಟರಿಗೆ ಜನರಿಂದ ಅತ್ಯುತ್ತಮ ಪ್ರಶಂಸೆ ವ್ಯಕ್ತವಾಗಿದೆ. ಅವರಿಗೆ ಅಭಿನಂದನೆ. ಅವರ ಸಾಧನೆ ಇತರ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಲಿ ಎನ್ನುವುದು ನಮ್ಮ ಆಶಯ.
ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿರುವ ವಾಹನಗಳ ಲೇಖನಗಳು
* ಬೈಕಿಗೆ ರಿವರ್ಸ್ ಗೇರ್ ಕಂಡುಹಿಡಿದ ವಿದ್ಯಾರ್ಥಿಗಳು


Click it and Unblock the Notifications









