ಮೂರು ವರ್ಷದಲ್ಲಿ ನಾಲ್ಕು ಸ್ಯಾಂಗ್ಯೊಂಗ್ ಸ್ಪೋರ್ಟ್ ಕಾರು
ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯು ಸ್ವಾಧೀನಪಡಿಸಿಕೊಂಡಿರುವ ಸ್ಯಾಂಗ್ಯೊಂಗ್ ಮೋಟರ್ಸ್ ಕಂಪನಿಯು ಮುಂದಿನ ಮೂರು ವರ್ಷಗಳಲ್ಲಿ ನಾಲ್ಕು ಸ್ಪೋರ್ಟ್ ಯುಟಿಲಿಟಿ ವೆಹಿಕಲ್ ಹೊರತರಲು ನಿರ್ಧರಿಸಿದೆ.
ಕಂಪನಿಯು ಜಿನಿವಾ ವಾಹನ ಪ್ರದರ್ಶನದಲ್ಲಿ ಈ ಮಾಹಿತಿಯನ್ನು ನೀಡಿದೆ. ಇಲ್ಲಿ ಕಂಪನಿಯು ನಾಲ್ಕು ಮೀಟರಿಗಿಂತ ಕಡಿಮೆ ಉದ್ದದ್ದ ಕಾಂಪ್ಯಾಕ್ಟ್ ಎಸ್ ಯುವಿ XIV 2 ಅನಾವರಣ ಮಾಡಿದೆ.
ನೂತನ ಎಕ್ಸ್ ಐವಿ 2 ಕಾನ್ಸೆಪ್ಟ್ ಎಸ್ ಯುವಿ 2015ರಲ್ಲಿ ಜಾಗತಿಕವಾಗಿ ಉತ್ಪಾದನೆಯಾಗಲಿದೆ ಎಂದು ಕಂಪನಿ ಹೇಳಿದೆ. ಈ SUV ಜಾಗತಿಕವಾಗಿ 25-40 ದೇಶಗಳಲ್ಲಿ ಬಿಡುಗಡೆಯಾಗಲಿದೆಯಂತೆ.
ಅಂದ ಹಾಗೆ ಈ ಕಾರು 1,200 ಸಿಸಿ ಪೆಟ್ರೋಲ್ ಎಂಜಿನ್ ಅಥವಾ 1,500ಸಿಸಿ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ದೊರಕಲಿದೆ. (ಕನ್ನಡ ಡ್ರೈವ್ ಸ್ಪಾರ್ಕ್)


Click it and Unblock the Notifications









