ಸ್ಯಾಂಗ್ಯೊಂಗ್ ಹೊಸ ರೆಕ್ಸ್ಟಾನ್ ಎಸ್‌ಯುವಿ ಅನಾವರಣ
ನೂತನ ರೆಕ್ಸ್ಟಾನ್ ಕಾರು ಆಧುನಿಕ ಮತ್ತು ಆಕರ್ಷಕ ವಿನ್ಯಾಸದಿಂದ ಕೂಡಿದ್ದು, ಆನ್ ರೋಡ್ ಮಾತ್ರವಲ್ಲದೇ ಆಫ್ ರೋಡಿಗೆ ಹೆಚ್ಚು ಸೂಕ್ತವಾಗುವಂತೆ ಕಂಪನಿ ಅಭಿವೃದ್ಧಿಪಡಿಸಿದೆ. ಹೊಸ ರೆಕ್ಸ್ಟಾನ್ ಸ್ಪೋರ್ಟ್ ಯುಟಿಲಿಟಿ ವೆಹಿಕಲ್ ಕೊರಿಯಾ ಮಾದರಿಯಾ ಡೀಸೆಲ್ ಇ-ಎಕ್ಸ್‌ಡಿಐ200 ಎಲ್ಇಟಿ ಎಂಜಿನ್ ಹೊಂದಿದೆ.
ಸ್ಯಾಂಗ್ಯೊಂಗ್ ರೆಕ್ಸ್ಟಾನ್ ಎಸ್‌ಯುವಿ ಪ್ರತಿಲೀಟರ್ ಡೀಸೆಲಿಗೆ ಸುಮಾರು 13.7 ಕಿ.ಮೀ. ಮೈಲೇಜ್ ನೀಡುತ್ತದೆ. ನೂತನ ಕಾರು ಐಷಾರಾಮಿ ಮತ್ತು ಅತ್ಯಾಧುನಿಕ ವಿನ್ಯಾಸದಿಂದ ಕೂಡಿದ್ದು, ಗ್ರಾಹಕರ ಫೀಡ್‌ಬ್ಯಾಕಿಗೆ ತಕ್ಕಂತೆ ಹೊರತರಲಾಗಿದೆ ಎಂದು ಕಂಪನಿ ಹೇಳಿದೆ.
ಹೊಸ ರೆಕ್ಸ್ಟಾನ್ ಕಾರಿನ ಹಾರ್ಸ್ ಪವರ್, ಟಾರ್ಕ್ ಪವರ್ ಹೆಚ್ಚಿದ್ದು, ಚಾಲನಾ ದಕ್ಷತೆಯನ್ನು ಹೆಚ್ಚಿಸಿದೆ. ಹಳೆಯ ರೆಕ್ಸ್ಟಾನ್ ಆವೃತ್ತಿಗೆ ಹೋಲಿಸಿದರೆ ಜೊತೆಗೆ ಶಬ್ದ, ವೈಬ್ರೆಷನ್ ಇತ್ಯಾದಿಗಳೂ ಕಡಿಮೆಯಾಗಿವೆ. ಹೊಸ ಕಾರು 5 ಸ್ಪೀಡಿನ ಆಟೋಮ್ಯಾಟಿಕ್ ಟ್ರಾನ್ಷ್ ಮಿಷನ್ ಹೊಂದಿದೆ.
ಮಹೀಂದ್ರ ಕಂಪನಿಯು ನೂತನ ರೆಕ್ಸ್ಟಾನ್ ಕಾರನ್ನು ದೇಶದ ರಸ್ತೆಗೂ ಪರಿಚಯಿಸುವ ನಿರೀಕ್ಷೆಯಿದೆ.


Click it and Unblock the Notifications









