ವಾಹನ ಸಾಲದ ಮೇಲಿನ ಬಡ್ಡಿದರ ತಗ್ಗಿಸಿದ ಎಸ್‌ಬಿಐ

ಮುಂಬೈ, ಆ 2: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಾಹನ ಸಾಲದ ಮೇಲಿನ ಬಡ್ಡಿದರವು ಆಗಸ್ಟ್ 7ರಿಂದ ಅನ್ವಯವಾಗುವಂತೆ ಶೇಕಡ 0.5ರಷ್ಟು ಕಡಿಮೆಯಾಗಲಿದೆ. ಆರ್‌ಬಿಐ ಎಸ್ಎಲ್ಆರ್ ದರ ಕಡಿತ ಮಾಡಿದ ಒಂದು ದಿನದ ತರುವಾಯ ಎಸ್‌ಬಿಐ ಗೃಹ ಮತ್ತು ವಾಹನ ಸಾಲದ ಮೇಲಿನ ಬಡ್ಡಿದರ ತಗ್ಗಿಸಿದೆ.

50ರಷ್ಟು ಮೂಲಾಂಶ ಕಡಿತ ಮಾಡಿರುವುದರಿಂದ ಕಾರು ಸಾಲದ ಮೇಲೆ ವಿಧಿಸುವ ಬಡ್ಡಿದರವು ಶೇಕಡ 10.75ಕ್ಕೆ ತಲುಪಲಿದೆ. ಈ ಹಿಂದೆ ಇದು ಶೇಕಡ 11.25ರಷ್ಟಿತ್ತು. ಇದರಿಂದ ಗ್ರಾಹಕರು ಪ್ರತಿತಿಂಗಳು ಪಾವತಿಸುವ ಇಎಂಐನಲ್ಲಿ ಕೊಂಚ ಉಳಿತಾಯ ಮಾಡಬಹುದಾಗಿದೆ.

ಉದಾಹರಣೆಗೆ ಏಳು ವರ್ಷ ಕಾಲಾವಧಿಯ ವಾಹನ ಸಾಲಕ್ಕೆ ಇನ್ಮುಂದೆ ಪ್ರತಿತಿಂಗಳು 1,699 ರು. ಪಾವತಿಸಿದರೆ ಸಾಕು. ಹಳೆಯ ಬಡ್ಡಿದರದಲ್ಲಿ ಪ್ರತಿತಿಂಗಳು 1,725 ರು. ಪಾವತಿಸಬೇಕಿತ್ತು.

ನೂತನ ಬಡ್ಡಿದರ ಇಳಿಕೆಯಿಂದಾಗಿ ಗ್ರಾಹಕರು ಉಳಿದ ಬ್ಯಾಂಕುಗಳಿಗಿಂತ ಶೇಕಡ 50 ಕಡಿಮೆ ಮೂಲಾಂಶದಲ್ಲಿ ಎಸ್‌ಬಿಐನಿಂದ ಸಾಲ ಪಡೆಯಬಹುದಾಗಿದೆ. ಉದಾಹರಣೆಗೆ 10ರಿಂದ 20 ಲಕ್ಷ ರುಪಾಯಿ ಸಾಲಕ್ಕೆ ಪ್ರತಿತಿಂಗಳು ಗ್ರಾಹಕನ ಜೇಬಿಗೆ 286 ರುಪಾಯಿ ಉಳಿತಾಯವಾಗಲಿದೆ.

ಆದರೆ ಈಗಾಗಲೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಸಾಲ ಪಡೆದವರು ಖುಷಿಪಡುವ ಹಾಗಿಲ್ಲ. ಯಾಕೆಂದರೆ ನೂತನ ಬಡ್ಡಿದರ ಇಳಿಕೆಯು ಹೊಸದಾಗಿ ವಾಹನ ಸಾಲ ಪಡೆಯುವರಿಗೆ ಮಾತ್ರ ಅನ್ವಯವಾಗಲಿದೆ.

ಆದರೂ, ಹಳೆ ಸಾಲದಾರರಿಗೆ ತಮ್ಮ ಸಾಲಕ್ಕೆ ರಿಫೈನಾನ್ಸ್ ಉಚಿತವಾಗಿ ಮಾಡಲು ಅವಕಾಶ ನೀಡಿದೆ. ಉಳಿದ ಕೆಲವು ಬ್ಯಾಂಕುಗಳು ಇದಕ್ಕೆ ಶುಲ್ಕ ಪಡೆಯುತ್ತವೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಸ್ಟೆಷನರಿ ಲಿಕ್ವಿಡಿಟಿ ರೇಟಿಯೊ(ಎಸ್ ಎಲ್ಆರ್) ಮೇಲಿನ ಬಡ್ಡಿದರ ತಗ್ಗಿಸಿದ ಒಂದು ದಿನದ ತರುವಾಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಾಹನ ಮತ್ತು ಗೃಹ ಸಾಲದ ಮೇಲಿನ ಬಡ್ಡಿದರ ಇಳಿಕೆ ಮಾಡಿದೆ.

ಓದಿ: ವಾಹನ ಸಾಲ

More from DriveSpark

Article Published On: Thursday, August 2, 2012, 14:22 [IST]
English summary
State Bank of India cutting auto loan rates up to 50 basis points effective from August 7. However SBI yet to decide on reducing the base rate. SBI new loan rate cut will apply only to new customers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+