ಕ್ಷಮಿಸಿ, ಎಸ್ ಯುವಿ ದಾಸ್ತಾನು ಖಾಲಿಯಾಗಿದೆ!

ಆದರೆ ಈ ಪರಿಸ್ಥಿತಿ ಸ್ಪೋರ್ಟ್ ಯುಟಿಲಿಟಿ ವೆಹಿಕಲ್ ಅಥವಾ ಎಸ್ ಯುವಿಗಳಿಗಿಲ್ಲ. ಇದೀಗ ಎಸ್ ಯುವಿ ಕಾರುಗಳಿಗೆ ದೇಶದಲ್ಲಿ ಬೇಡಿಕೆ ದಿನೇ ದಿನೇ ಹೆಚ್ಚಾಗುತ್ತಿದೆ. ಸ್ಪೋರ್ಟ್ ವಾಹನ ಕಂಪನಿಗಳು ಗ್ರಾಹಕರ ಬೇಡಿಕೆಗೆ ತಕ್ಕಂತೆ ಪೂರೈಸಲು ಪರದಾಡುತ್ತಿವೆ.
ಉದಾಹರಣೆಗೆ ಇತ್ತೀಚಿನ ಮಹೀಂದ್ರ ಎಕ್ಸ್ ಯುವಿ 5ಒಒ ಎಸ್ ಯುವಿ ಬೇಡಿಕೆಯನ್ನೇ ತೆಗೆದುಕೊಳ್ಳಿ. ಕಂಪನಿಯಲ್ಲಿದ್ದದ್ದು 7,200 ಕಾರು. ಆದರೆ ಹತ್ತು ದಿನದಲ್ಲಿ ಗ್ರಾಹಕರು ಬುಕ್ಕಿಂಗ್ ಮಾಡಿರುವುದು 25 ಸಾವಿರಕ್ಕೂ ಹೆಚ್ಚು. ಕಂಪನಿಯು ಈಗ ಉತ್ಪಾದನೆ ಹೆಚ್ಚಿಸುವ ಪ್ರಯತ್ನದಲ್ಲಿದೆ.
ಟೊಯೊಟಾ ಫಾರ್ಚ್ಯುನರ್ ಕಥೆಯೂ ಭಿನ್ನವಾಗಿಯೇನೂ ಇಲ್ಲ. ನೂತನ ಫೇಸ್ ಲಿಫ್ಟೆಡ್ ಫಾರ್ಚ್ಯುನರ್ ಹೊರತಂದ ಸಮಯದಲ್ಲಿ ದಿನಕ್ಕೆ 100 ಕ್ಕೂ ಹೆಚ್ಚು ಗ್ರಾಹಕರು ಬುಕ್ಕಿಂಗ್ ಮಾಡಿದ್ದರು. ಕಳೆದ ವರ್ಷಕ್ಕಿಂತ ಕಂಪನಿಯ ಎಸ್ ಯುವಿಗಳಿಗೆ ಈ ವರ್ಷ ಎರಡು ಪಟ್ಟು ಬೇಡಿಕೆಯಿದೆ. ಸದ್ಯದ ಬುಕ್ಕಿಂಗ್ ಭರಾಟೆಯಿಂದಾಗಿ ಫಾರ್ಚ್ಯುನರ್ ವೇಟಿಂಗ್ ಪಿರೆಯಿಡ್ ನಾಲ್ಕು ತಿಂಗಳಿಗಿಂತ ಹೆಚ್ಚಾಗಿದೆ.
ದುಬಾರಿ ದರದ ಪ್ರೀಮಿಯಂ ಸ್ಪೋರ್ಟ್ ಯುಟಿಲಿಟಿ ವೆಹಿಕಲಿಗೂ ಬೇಡಿಕೆ ಹೆಚ್ಚಾಗುತ್ತಿದೆ. ಬಿಎಂಡಬ್ಲ್ಯು ಕಂಪನಿಯ ಎಕ್ಸ್3 ಮತ್ತು ಆಡಿ ಕ್ಯೂ7 ಕಾರುಗಳು ಕೂಡ ಬಿಸಿದೋಸೆಯಂತೆ ಮಾರಾಟವಾಗುತ್ತಿದೆ.
ಸ್ಪೋರ್ಟ್ ಯುಟಿಲಿಟಿ ವೆಹಿಕಲಿಗೆ ಬೇಡಿಕೆ ಹೆಚ್ಚಾಗಿರುವ ಕುರಿತು ಎಲ್ಲಾ ಕಾರು ಕಂಪನಿಗಳು ಹೇಳಿವೆ. ಯುವ ಕಾರು ಖರೀದಿದಾರರು ಇಂತಹ ಸ್ಪೋರ್ಟ್ ಯುಟಿಲಿಟಿ ವೆಹಿಕಲಿಗೆ ಹೆಚ್ಚಿನ ಬೇಡಿಕೆಯಿಡುತ್ತಿದ್ದಾರೆ. ಶೀಘ್ರದಲ್ಲಿ ದೇಶದ ರಸ್ತೆಗೆ ಮಿನಿ ಕ್ಷೈಲೊ, ಆಡಿ ಕ್ಯೂ3 ಮತ್ತು ಬಿಎಂಡಬ್ಲ್ಯು ಎಕ್ಸ್1, ಮಾರುತಿ ಎಕ್ಸ್ಎ ಆಲ್ಪಾ ಕಾರುಗಳು ಆಗಮಿಸಲಿದೆ. ಒಟ್ಟಾರೆ ರಸ್ತೆಯಲ್ಲಿ ಸ್ಪೋರ್ಟ್ ಯುಟಿಲಿಟಿ ವೆಹಿಕಲ್ ಮೇನಿಯಾ ಸುರುವಾಗಲಿದೆ.


Click it and Unblock the Notifications








