ಸುಜುಕಿ ಜಿಮ್ನಿ; ಆಕರ್ಷಕ ಫೋಟೊ ಫೀಚರ್
ಇತ್ತೀಚೆಗಷ್ಟೇ ಜಪಾನ್ ವಾಹನ ತಯಾರಕ ಕಂಪನಿಯಾದ ಸುಜುಕಿ ಜಿಬಿ ಪಿಎಲ್‌ಸಿ ನೂತನ ಸುಜುಕಿ ಜಿಮ್ನಿ 2013 ವರ್ಷನ್ ಬಿಡುಗಡೆಗೊಳಿಸಿತ್ತು. ಜನಪ್ರಿಯ ಜಿಮ್ನಿ ಕಾಂಪಾಕ್ಟ್ 4x4 ಎಸ್‌ಯುವಿ ವಾಹನ ಆಧುನಿಕ ತಂತ್ರಜ್ಞಾನದೊಂದಿಗೆ ಯೂನಿಕ್ ವಿನ್ಯಾಸವನ್ನು ಹೊಂದಿದೆ.
ಎಕ್ಸ್‌ಟಿರಿಯರ್ ಮಾಹಿತಿ
ಪರಿಷ್ಕೃತ ಫ್ರಂಟ್ ಬಂಪರ್, ಗ್ರಿಲ್, ಬೊನೆಟ್, ಫಾಗ್ ಲ್ಯಾಂಪ್. ಮರು ವಿನ್ಯಾಸಗೊಳಿಸಲಾದ ಬೊನೆಟ್‌ನಿಂದ ಎಂಜಿನ್ ಕೂಲ್ ಆಗಿರಲು ನೆರವಾಗಲಿದೆ.
ಇಂಟಿರಿಯರ್ ಭಾಗದ ಕುರಿತು ಹೇಳುವುದಾದರೆ ಎಸ್‌ಝಡ್3 ಹಾಗೂ ಎಸ್‌ಝಡ್4ಗಳೆಂಬ ಎರಡು ಆವೃತ್ತಿಗಳು ಪರಿಷ್ಕೃತ ಫ್ರಂಟ್ ಹಾಗೂ ರಿಯರ್ ಹೆಡ್‌ರೆಸ್ಟ್‌ಗಳನ್ನು ಹೊಂದಿದೆ. ಸ್ಟಾಡಂರ್ಡ್ ಫಿಟ್ಟಿಂಗ್ ಚೈಲ್ಡ್ ಸೀಟ್ ಮೌಟಿಂಗ್ ಆಳವಡಿಸಲಾಗಿದೆ.
ಜಿಮ್ನಿ 2013 ಎಸ್‌ಯುವಿ 16 ವಾಲ್ವೆ 1.6 ಲೀಟರ್ ಎಂಜಿನ್‌ನಿಂದ ನಿಯಂತ್ರಿಸಲ್ಪಟ್ಟಿದೆ. ಫ್ಲ್ಯಾಟ್ ಟರ್ಕ್ಯೂ ತಂತ್ರಗಾರಿಕೆಯಿಂದ ಯಾವುದೇ ಭೂಪ್ರದೇಶದಲ್ಲೂ ಸುಲಭವಾಗಿ ಚಲಿಸಲಿದೆ. ಅಲ್ಲದೆ ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಎಂಜಿನ್‌ಗಳನ್ನು ಹೊಂದಿದೆ.

ಇತ್ತೀಚೆಗಷ್ಟೇ ಜಿಮ್ನಿ ಎಸ್‌ಯುವಿ ಫೇಸ್‌ಲಿಫ್ಟ್ 2013 ಮಾದರಿ ಬಿಡುಗಡೆಗೊಳಿಸಲಾಗಿದೆ. ನೂತನ ಫ್ರಂಟ್ ಬಂಪರ್, ಗ್ರಿಲ್ ಡಿಸೈನ್, ನೂತನ ಬೊನೆಟ್ ಹಾಗೂ ಫ್ರಂಟ್ ಫಾಗ್ ಲ್ಯಾಂಪ್ ಪರಿಷ್ಕೃತ ಕಾರಿನ ಪ್ರಮುಖ ಫೀಚರ್ಸ್ ಆಗಿವೆ.

ಸುಜುಕಿ ಎಸ್‌ಝಡ್4 ಮಾಡೆಲ್ ಸಿಂಥೇಟಿಕ್ ಲೆಥರ್/ಕ್ಲಾತ್ ಫ್ರಂಟ್ ಸೀಟ್, ಜಿಮ್ನಿ ಲೊಗೊ, ಏರ್ ಕಂಡಿಷನರ್, ಅಲಾಯ್ ವೀಲ್ಸ್, ಲೆಥರ್ ಟ್ರಿಟ್ ಸ್ಟೀರಿಂಗ್ ವೀಲ್‌ಗಳಂತಹ ಫೀಚರ್ಸ್‌ಗಳನ್ನು ಹೊಂದಿದೆ.

ನಗರ ಪ್ರದೇಶ ಸೇರಿದಂತೆ ಆಫ್ ರೋಡ್‌ನಲ್ಲೂ ಜಿಮ್ನಿ ಕಾಂಪಾಕ್ಟ್ ಎಸ್‌ಯುವಿ ಆರಾಮಾದಾಯಕ ಚಾಲನೆಗೆ ನೆರವಾಗಲಿದೆ.

ನೂತನ ಸುಜುಕಿ ಜಿಮ್ನಿ ಕಾರು 1.3 ಲೀಟರಿನ ಪೆಟ್ರೋಲ್ ಎಂಜಿನ್ ಹೊಂದಿದ್ದು, 85 ಅಶ್ವಶಕ್ತಿ ಮತ್ತು 110 ಎನ್ಎಂ ಟಾರ್ಕ್ ಪವರ್ ನೀಡುತ್ತದೆ. 16 ವಾಲ್ವೆ 1.3 ಲೀಟರ್ ಎಂಜಿನ್ ಉತ್ತಮ ನಿರ್ವಹಣೆ ಹಾಗೂ ಇಂಧನ ದಕ್ಷತೆಯನ್ನು ಖಾತ್ರಿಪಡಿಸಲಿದೆ. ಇದು ಫೋರ್ ವೀಲ್ ಡ್ರೈವ್ ಎಸ್ ಯುವಿಯಾಗಿದೆ.

ಹಳೆಯ ಜಿಮ್ನಿ ಕಾರಿಗೆ ಹೋಲಿಸಿದರೆ ನೂತನ ಮಿನಿ ಜಿಮ್ನಿ ಹೊರವಿನ್ಯಾಸ ಕೊಂಚ ಬದಲಾಗಿದೆ. ಮರುವಿನ್ಯಾಸ ಮಾಡಿದ ಗ್ರಿಲ್, ಹೆಡ್ ಲೈಟ್ ಮತ್ತು ನೂತನ ಬಂಪರುಗಳಿಂದ ಮಿನಿ ಜಿಮ್ನಿ ಆಕರ್ಷಕವಾಗಿ ಕಾಣುತ್ತದೆ.

ಸುಜುಕಿ ಜಿಮ್ನಿ 2013

ಸುಜುಕಿ ಜಿಮ್ನಿ 2013

ಸುಜುಕಿ ಜಿಮ್ನಿ 2013

ಸುಜುಕಿ ಜಿಮ್ನಿ 2013

ಸುಜುಕಿ ಜಿಮ್ನಿ 2013

ಸುಜುಕಿ ಜಿಮ್ನಿ 2013

ಸುಜುಕಿ ಜಿಮ್ನಿ 2013

ಸುಜುಕಿ ಜಿಮ್ನಿ 2013

ಸುಜುಕಿ ಜಿಮ್ನಿ 2013


Click it and Unblock the Notifications








