ಟಾಟಾ ಸಫಾರಿ ಸ್ಟ್ರೋಮ್ ಜಿಎಸ್800: ಯುದ್ಧಕ್ಕೆ ರೆಡಿ

ಸೇನಾ ಅವಶ್ಯಕತೆಗೆ ಸೂಕ್ತವಾದ ಸಫಾರಿ ಸ್ಟ್ರೋಮ್ ಜಿಎಸ್800 ಕಾರನ್ನು ಟಾಟಾ ಮೋಟರ್ಸ್ ಕಂಪನಿಯು 2012 ಇಂಡಿಯಾ ಡಿಫೆನ್ಸ್ ಪ್ರದರ್ಶನದಲ್ಲಿ ಪ್ರದರ್ಶಿಸಿದೆ. ನವದೆಹಲಿಯಲ್ಲಿ ನಡೆಯುತ್ತಿರುವ ಡಿಫೆನ್ಸ್ ಎಕ್ಸ್ ಪೊದಲ್ಲಿ ರಕ್ಷಣಾ ಅವಶ್ಯಕತೆಯ ವಾಹನಗಳನ್ನು ಪ್ರದರ್ಶಿಸುತ್ತಿದೆ.

ಮಿಲಿಟರಿ ಅವಶ್ಯಕತೆಗೆ ತಕ್ಕಂತೆ ಸದೃಢ ಚಾಸೀ ಮತ್ತು ಸಸ್ಪೆನ್ಷನ್ ಸಿಸ್ಟಮ್ ಹೊಂದಿದೆ. ಬಾಂಬ್ ಬ್ಲಾಸ್ಟ್ ಇತ್ಯಾದಿಗಳಿಂದ ರಕ್ಷಣೆಯನ್ನೂ ನೀಡುತ್ತದೆ. ಈ ಕಾರು ವಿಐಪಿಗಳ ಸವಾರಿಗಳಿಗೂ ಸೂಕ್ತವಾಗುವಂತೆ ರೂಪಿಸುವ ಯೋಜನೆಯೂ ಕಂಪನಿಗಿದೆ. ಅಂದರೆ ರಾಜ್ಯ ಅಥವಾ ಕೇಂದ್ರದ ಪ್ರಮುಖರ ಸುರಕ್ಷತೆಯ ಸಂಚಾರ ಅವಶ್ಯಕತೆಗೆ ತಕ್ಕಂತೆ ರೂಪಿಸುವ ಯೋಜನೆ ಕಂಪನಿಗಿದೆ.

ದೇಶದ ವಿವಿಧ ಕಠಿಣ ರಸ್ತೆಗಳಲ್ಲೂ, ಆನ್ ರೋಡ್, ಆಫ್ ರೋಡ್ ನಲ್ಲೂ ಸಂಚರಿಸಬಹುದಾದ ಸಫಾರಿ ಇದೆಂದು ಕಂಪನಿ ಹೇಳಿದೆ. ಸಫಾರಿ ಮಾತ್ರವಲ್ಲದೇ ಇನ್ನೂ ಹಲವು ಬಗೆಯ ರಕ್ಷಣಾ ವಾಹನಗಳನ್ನು ಕಂಪನಿ ಪ್ರದರ್ಶಿಸಿದೆ.

ನೂತನ ಸಫಾರಿ ಸ್ಟ್ರೋಮ್ ವಾಹನವನ್ನು ಇದಕ್ಕೂ ಮೊದಲು ದೆಹಲಿ ವಾಹನ ಪ್ರದರ್ಶನದಲ್ಲಿ ಪ್ರದರ್ಶಿಸಿತ್ತು. ನೂತನ ಸಫಾರಿ ಸ್ಟ್ರೋಮ್ 2.2 ಲೀಟರಿನ 12 ಕವಾಟದ ಕಾಮನ್ ರೈಲ್ ಎಂಜಿನ್(ಡಿಕೊರ್) ಎಂಜಿನ್ ಹೊಂದಿದೆ. ಇದು 5 ಸ್ಪೀಡ್ ಮ್ಯಾನುಯಲ್ ಟ್ರಾನ್ಸ್ ಮಿಷನ್ ಹೊಂದಿದೆ. ಡಿಕೊರ್ ಎಂಜಿನ್ 140 ಪಿಎಸ್ ಹಾರ್ಸ್ ಪವರ್ ಮತ್ತು 320 ಟಾರ್ಕ್ ಪವರ್ ನೀಡುತ್ತದೆ.

More from DriveSpark

Article Published On: Saturday, March 31, 2012, 14:58 [IST]
English summary
Tata Motors displayed the Army-spec Safari Storme GS 800 at the 2012 India Defence Expo at New Delhi. The SUV which is expected to be launched in the market soon has been designed to travel through every rough India terrain carrying officials during war and peacetime.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+