ಗ್ರಾಹಕನಿಗೆ ಡಬ್ಬಾ ಇಂಡಿಕಾ ನೀಡಿದ ಟಾಟಾಗೆ ದಂಡ
ಕಾರ್ಯಕ್ಷಮತೆಯಿಲ್ಲದ ಕಾರನ್ನು ನೀಡಿರುವುದಕ್ಕಾಗಿ ಸುಮಾರು 1.73 ಲಕ್ಷ ರುಪಾಯಿ ಪರಿಹಾರ ನೀಡುವಂತೆ ಟಾಟಾ ಮೋಟರ್ಸ್ ಮತ್ತು ಡೀಲರಿಗೆ ದೆಹಲಿ ಗ್ರಾಹಕ ನ್ಯಾಯಾಲಯದ ಅಧ್ಯಕ್ಷ ಬರ್ಕತ್ ಆಲಿ ಜೈದಿ ಆದೇಶಿಸಿದ್ದಾರೆ. ಜೊತೆಗೆ ಕಾರು ಗ್ರಾಹಕನಿಗೆ ಉಂಟಾದ ಮಾನಸಿಕ ಕಿರಿಕಿರಿ, ತೊಂದರೆ ಮತ್ತು ಕಷ್ಟಗಳಿಗೆ ಪರಿಹಾರವಾಗಿ 20 ಸಾವಿರ ರುಪಾಯಿ ನೀಡಲು ಸೂಚಿಸಿದೆ. ಹೀಗಾಗಿ ಒಟ್ಟು 1.93 ಲಕ್ಷ ರುಪಾಯಿ ದಂಡ ಪಾವತಿಸಬೇಕಿದೆ.
"ವಾಹನವೊಂದನ್ನು ಇಷ್ಟೊಂದು ಬಾರಿ ರಿಪೇರಿ ಮಾಡಿಸಬೇಕಾದ ಕಷ್ಟ ಗ್ರಾಹಕನಿಗೆ ನೀಡಿರುವುದಕ್ಕೆ ಗ್ರಾಹಕನಿಗೆ ಸಮರ್ಪಕ ಸೇವೆ ನೀಡದ ಮತ್ತು ಸಮಸ್ಯೆಯಿರುವ ಕಾರನ್ನು ನೀಡಿರುವ ಮಿರ್ಕಾಂತ ಎಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ ಮತ್ತು ಟಾಟಾ ಮೋಟರ್ಸ್ ಕಂಪನಿಯು ಗ್ರಾಹಕನಿಗೆ ಪರಿಹಾರ ನೀಡಬೇಕಿದೆ" ಎಂದು ಗ್ರಾಹಕ ನ್ಯಾಯಾಲಯ ಹೇಳಿದೆ.
ವರ್ಕ್ ಶಾಪ್‌ನಲ್ಲಿ ಕಾರನ್ನು ಸಮರ್ಪಕವಾಗಿ ಪರಿಶೀಲಿಸಿರುವುದಾಗಿ ಟಾಟಾ ಮೋಟರ್ಸ್ ಪ್ರತಿವಾದಿಸಿತ್ತು. ಮುಖ್ಯವಾಗಿ ಮೈಲೇಜ್ ವಿಷಯ ಸೇರಿದಂತೆ ಕಾರು ಕಂಪನಿ ಹೇಳಿರುವಂತೆ ಇಂಡಿಕಾ ಕಾರ್ಯನಿರ್ವಹಿಸುತ್ತಿಲ್ಲವೆಂದು ಗ್ರಾಹಕರೊಬ್ಬರು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರು. ಕೊನೆಗೂ ಗ್ರಾಹಕನಿಗೆ ಜಯವಾಗಿದೆ.


Click it and Unblock the Notifications









