ಟಾಟಾದಿಂದ ಹೊಸತಾದ ಆರಿಯಾ ಲಾಂಚ್; ದರ 9.95 ಲಕ್ಷ ರು.

ಟೊಯೊಟಾ ಇನ್ನೋವಾ ಹಾಗೂ ಮಹೀಂದ್ರ ಎಕ್ಸ್‌ಯುವಿ 500ಗಳಂತಹ ಪ್ರಮುಖ ಬ್ರಾಂಡ್‌ಗಳಿಗೆ ಪೈಪೋಟಿ ನೀಡಲು ಮುಂದಾಗಿರುವ ಪ್ರಮುಖ ವಾಹನ ತಯಾರಕ ಕಂಪನಿ ಟಾಟಾ ಮೋಟಾರ್ಸ್, ಸ್ಪರ್ಧಾತ್ಮಕ ಬೆಲೆಯ ನೂತನ ಟಾಟಾ ಆರಿಯಾ ವೆರಿಯಂಟ್ ಕಾರನ್ನು ಬಿಡುಗಡೆಗೊಳಿಸಿದೆ. ಟಾಟಾದ ಅತ್ಯಂತ ಮುಂದುವರಿದ ತಂತ್ರಜ್ಞಾನ ಹಾಗೂ ಪ್ರೀಮಿಯಂ ಉತ್ಪನ್ನವಾಗಿದ್ದ ಟಾಟಾ ಮೋಟಾರ್ಸ್ ಆರಿಯಾ ಕ್ರಾಸ್‌ಓವರ್ ಮಾರಾಟದಲ್ಲಿ ಭಾರಿ ಕುಸಿತ ಅನುಭವಿಸಿದ್ದರಿಂದ ಟಾಟಾದಿಂದ ಇಂತಹದೊಂದು ನಡೆ ಕಂಡುಬಂದಿದೆ.

ನೂತನ ಟಾಟಾ ಆರಿಯಾ ಎಲ್‌ಎಕ್ಸ್ 4x2 ಆವೃತ್ತಿಗಳಲ್ಲಿ ಲಭಿಸಲಿದ್ದು, ದೆಹಲಿ ಏಕ್ಸ್-ಶೊ ರೂಂಗಳಲ್ಲಿ 9.95 ಲಕ್ಷ ರುಪಾಯಿಗಳಿಗೆ ಲಭ್ಯವಾಗಲಿದೆ. ಸಫಾರಿ ಎಸ್‌ಯುವಿನಲ್ಲಿರುವಂತೆಯೇ ಫೈವ್ ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಳವಡಿಸಲಾಗಿದೆ.

ಸ್ಪರ್ಧಾತ್ಮಕ ಆರಿಯಾ 4x2 ಎಲ್‌ಎಕ್ಸ್ ವೆರಿಯಂಟ್ ಫೀಚರ್ಸ್ ಇಂತಿದೆ:
  • ಡ್ಯುಯಲ್ ಮಾಸ್ ಫ್ಲೈವೀಲ್ ಸಿಂಗಲ್ ಮಾಸ್ ಫ್ಲೈವೀಲ್‌ನಿಂದ ಬದಲಾವಣೆ
  • ಸಫಾರಿ ಎಸ್‌ಯುವಿನಿಂದ ಖರೀದಿಸಿದ 2.2 ಲೀಟರ್ ಡಿಕೊರ್ ಟರ್ಬೊ ಡೀಸೆಲ್ ಎಂಜಿನ್
  • ಫಾಗ್ ಲ್ಯಾಂಪ್ಸ್
  • ಏರ್‌ಬ್ಯಾಗ್ಸ್, ಎಬಿಎಸ್ ಮತ್ತು ಇಬಿಡಿ
  • ಸಿಂಥೆಟಿಕ್ ಲೆಥರ್ ಸೀಟ್ ಫಾಬ್ರಿಕ್/ಲೆಥರ್ ಸೀಟ್‌ನಿಂದ ಬದಲಾವಣೆ
  • ಫಾಕ್ಟರಿ ಫಿಟ್ಟಡ್ ಆಡಿಯೋ ಘಟಕ
  • ರಿಯರ್ ವೈಪರ್ ಆಂಡ್ ಡಿಫಾಗರ್
  • ರೂಫ್ ಸ್ಟೋರೆಜ್ ಬಿನ್ಸ್
  • ಹೆಡ್ ಲ್ಯಾಂಪ್ಸ್
  • ಕಾರಿನ ಬಣ್ಣ ರಬ್ ರೈಲ್
  • ಕ್ರಾಮ್ ರೆಡಿಯೇಟರ್ ಗ್ರಿಲ್
  • ಒಳಭಾಗದಲ್ಲಿ ಕ್ರಾಮ್ ಡೋರ್ ಹ್ಯಾಂಡಲ್

ಆಟೋಮೊಬೈಲ್ ರಂಗದಲ್ಲಿ ನಿಸ್ಸಂಶಯವಾಗಿಯೂ ಎಂಜಿನಿಯರಿಂಗ್ ಹಾಗೂ ಪ್ರೀಮಿಯಂ ವರ್ಗಗಳಿಗೆ ಸಂಬಂಧಿಸಿದಂತೆ ಟಾಟಾ ಆರಿಯಾ ಇತರ ಎಲ್ಲ ಕಾರಿಗಳಿಗಿಂತಲೂ ಶ್ರೀಮಂತವಾಗಿದೆ. ಆದರೆ ಮಾರುಕಟ್ಟೆಯಲ್ಲಿನ ಬೇಡಿಕೆ ಕುಸಿತದಿಂದಾಗಿ ನೂತನ ಸ್ಪರ್ಧಾತಕ ದರದ ಆರಿಯಾ ವೆರಿಯಂಟ್ ಬಿಡುಗಡೆಗೊಳಿಸಿದೆ.

ಹೊಸದಾಗಿ ಪರಿಚಯಿಸಲಾಗಿರುವ ಟಾಟಾ ಆರಿಯಾ ಪ್ಯೂರ್ ಎಲ್‌ಎಕ್ಸ್ ಆವೃತ್ತಿ ಎಂಟ್ರಿ ಲೆವೆಲ್ ಮಾಡೆಲ್ ಆಗಿದ್ದು, ಟಾಟಾ ಸಫಾರಿ ಸ್ಟ್ರೋಮ್ ದರ ಜತೆ ಪೈಪೋಟಿ ನೀಡುತ್ತಿದೆ. ಸ್ಟ್ರೋಮ್ ರೀತಿಯಲ್ಲೇ ಸಿಂಗಲ್ ಪ್ಲೈವೀಲ್‌ನಿಂದ ಆಗಮಿಸಿರುವ ಟಾಟಾ ಆರಿಯಾ ಪ್ಯೂರ್ ಎಲ್‌ಎಕ್ಸ್ ವೆರಿಯಂಟ್, ಬಣ್ಣದ ಬಂಪರ್, ಪ್ರೊಜೆಕ್ಟರ್ ಎಚ್‌ಐಡಿ ಲ್ಯಾಂಪ್, ಡಿಸ್ಕ್ ಬ್ರೇಕ್ಸ್, ಕೀಲೆಸ್ ಎಂಟ್ರಿ, ರಿಯರ್ ಎಸಿ ವೆಂಟ್ಸ್, ಏರ್‌ಬ್ಯಾಗ್ಸ್, ಎಬಿಎಸ್, ಇಬಿಡಿ, ಲೆಥರ್ ಸೀಟ್ಸ್‌, ಆಡಿಯೋ ಸಿಸ್ಟಂ, ರಿಯರ್ ವಾಶ್, ವೈಪ್ ಆಂಡ್ ಡಿ-ಫಾಗರ್, ಹೆಡ್‌ಲ್ಯಾಂಪ್ ಹಾಗೂ ರೂಫ್ ಸ್ಟೋರೆಜ್‌ಗಳಂತಹ ವೈಶಿಷ್ಟ್ಯಗಳನ್ನು ಹೊಂದಿದೆ.

Most Read Articles

Kannada
English summary
Auto major Tata Motors has launched the stripped down variant of its premium crossover Tata Aria. The new stripped version of Tata Aria is named as Pure LX and it is available at the price of Rs. 9.95 lakh (ex-showroom New Delhi). The new Tata Aria Pure LX now comes with few more slashed features of its entry level 4×2 variant.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X