ಸೋಜಿಗದ ಪುಟ್ಟ ಟಾಟಾ ಕಾರಿನ ಹೆಸರು ಮೆಗಾಪಿಕ್ಸೆಲ್

ಟಾಟಾ ಮೋಟರ್ಸ್ ಕಂಪನಿಯು 82ನೇ ಜಿನಿವಾ ವಾಹನ ಪ್ರದರ್ಶನದಲ್ಲಿ ಟಾಟಾ ಮೆಗಾಪಿಕ್ಸೆಲ್ ಎಂಬ ನೂತನ ನಾಲ್ಕು ಸೀಟಿನ ಹೈಬ್ರಿಡ್ ಕಾರೊಂದನ್ನು ಹೊರತಂದಿದೆ. ಕಂಪನಿಯು ಕಳೆದ ವರ್ಷ ಟಾಟಾ ಮೆಗಾ ಪಿಕ್ಸೆಲ್ ಅನಾವರಣ ಮಾಡಿತ್ತು. ದೆಹಲಿ ವಾಹನ ಪ್ರದರ್ಶನದಲ್ಲೂ ಪಿಕ್ಸೆಲ್ ಪ್ರದರ್ಶಿಸಲಾಗಿತ್ತು. ಆದರೆ ಕಂಪನಿ ಇದೀಗ ಹೊರತಂದಿರುವುದು ಅದಕ್ಕಿಂತಲೂ ಆಕರ್ಷಕ ವಿನ್ಯಾಸದ ಮೆಗಾಪಿಕ್ಸೆಲ್.

ಇದು ಲೀಥಿಯಂ ಐಯಾನ್ ಬ್ಯಾಟರಿ ಮತ್ತು ಚಲಿಸುತ್ತಿರುವಾಗ ರೀಚಾರ್ಜ್ ಮಾಡಲು ಆನ್ ಬೋರ್ಡ್ ಪೆಟ್ರೋಲ್ ಎಂಜಿನ್ ಜನರೇಟರ್ ಹೊಂದಿದೆ. ಟಾಟಾ ಮೆಗಾಪಿಕ್ಸೆಲ್ ಕಾರು ಒಂದು ಟ್ಯಾಂಕ್ ಪೆಟ್ರೋಲಿನಲ್ಲಿ 900 ಕಿ.ಮೀ. ಮೈಲೇಜ್ ಮತ್ತು ಕೇವಲ ಬ್ಯಾಟರಿ ಪವರಿನಲ್ಲಿ 100 ಕಿ.ಮೀ. ಮೈಲೇಜ್ ನೀಡುತ್ತದೆ.

"ನಮ್ಮ ವಿನ್ಯಾಸ ಕೇಂದ್ರಗಳಾದ ಭಾರತ, ಇಂಗ್ಲೆಂಡ್ ಮತ್ತು ಇಟಲಿಯಲ್ಲಿ ಮೆಗಾ ಪಿಕ್ಸೆಲ್ ಕಾರನ್ನು ಅಭಿವೃದ್ಧಿಪಡಿಸಲಾಗಿದೆ" ಎಂದು ಟಾಟಾ ಮೋಟರ್ಸ್ ಇಂಡಿಯಾ ವಹಿವಾಟು ವಿಭಾಗದ ಎಂಡಿ ಪ್ರಕಾಶ್ ಎಂ. ತೆಲಾಂಗ್ ಹೇಳಿದ್ದಾರೆ.

ಪಿಕ್ಸೆಲ್ ಕಾರಿನಲ್ಲಿದ್ದ ಝೀರೋ ಟರ್ನ್ ಸಿಸ್ಟಮ್ ಇದರಲ್ಲಿ ಇನ್ನಷ್ಟು ಅಭಿವೃದ್ಧಿಯಾಗಿದೆ. ಈ ಕಾರಿನಲ್ಲಿ ನಾಲ್ಕು ಸ್ವತಂತ್ರ ಎಲೆಕ್ಟ್ರಿಕ್ ಮೋಟರ್ ಗಳಿವೆ. ಪ್ರತಿ ವೀಲ್ ಗೂ ಒಂದೊಂದು ಎಂಜಿನ್ ಇದೆ. ಪಾರ್ಕಿಂಗ್ ಸಮಯದಲ್ಲಿ ಎಲೆಕ್ಟ್ರಿಕ್ ಹಬ್ ಮೋಟರ್ ವಿರುದ್ಧ ದಿಕ್ಕಿನಲ್ಲಿ ತಿರುಗುತ್ತದೆ. ಒಟ್ಟಾರೆ ನೂತನ ಟಾಟಾ ಮೆಗಾ ಪಿಕ್ಸೆಲಿನಲ್ಲಿ ಆಕರ್ಷಕ ಫೀಚರುಗಳು ಹೇರಳವಾಗಿದೆ. (ಕನ್ನಡ ಡ್ರೈವ್ ಸ್ಪಾರ್ಕ್)

ಹೆಚ್ಚಿನ ಚಿತ್ರ ಇಲ್ಲಿದೆ ನೋಡಿ

More from DriveSpark

Article Published On: Tuesday, March 6, 2012, 16:40 [IST]
English summary
Tata Motors presented at the 82nd Geneva Motor Show the Tata Megapixel, a new four-seater city-smart global range extended electric vehicle (REEV) concept for the performance-seeking and environment-conscious motorist anywhere in the world.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+