ಪೊಲೀಸರಿಗೆ ರಕ್ಷಣಾ ವಾಹನ ನೀಡಿದ ಟಾಟಾ ಮೋಟರ್ಸ್

ಬೆಂಗಳೂರು,ಆ. 8: ಜಾರ್ಖಂಡ್ ಪೊಲೀಸ್ ಪಡೆಗೆ 5 ಟಾಟಾ ಮೈನ್‍ಪ್ರೊಟೆಕ್ಟೆಡ್ ವಾಹನಗಳನ್ನು ಭದ್ರತೆ ದೃಷ್ಟಿಯಿಂದ ಟಾಟಾ ಮೋಟರ್ಸ್ ವಿತರಿಸಿದೆ. ಜಾರ್ಖಂಡ್ ಪೊಲೀಸ್ ಮಹಾನಿರ್ದೇಶಕ ಗೌರಿಶಂಕರ್ ರಾಥ್ ಅವರಿಗೆ ವಾಹನ ವಿತರಿಸಲಾಯಿತು. ಟಾಟಾ ಮೋಟಾರ್ಸ್ ರಕ್ಷಣಾ ವಿಭಾಗದ ಮಾರಾಟ ಮುಖ್ಯಸ್ಥ ಸಂದೀಪ್ ಸೈಗಲ್ ವಾಹನ ವಿತರಿಸಿದರು.

ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಬಿಭುದಿ ಭೂಷಣ್ ಪ್ರಧಾನ್, ಜಾರ್ಖಂಡ್ ಪೊಲೀಸ್ ಇನ್ಸ್‍ಪೆಕ್ಟರ್ ಜನರಲ್ ರಾಜಕುಮಾರ್ ಕೆ.ಮಲ್ಲಿಕ್, ಜೆಎಂಎ ಸ್ಟೋರ್ಸ್ ವ್ಯವಸ್ಥಾಪಕ ನಿರ್ದೇಶಕ ದಿನೇಶ್ ಪರಿಖ್ ಮತ್ತು ಜೆಎಂಎ ಸ್ಟೋರ್ಸ್ ಸರ್ಕಾರಿ ಮಾರಾಟ ಮುಖ್ಯಸ್ಥ ಸಂಜೀವ್ ಶ್ರಿವತ್ಸ, ರಾಂಚಿಯ ಪೊಲೀಸ್ ಕೇಂದ್ರ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಹಾಜರಿದ್ದರು.

ಟಾಟಾ ಮೋಟಾರ್ಸ್ ರಕ್ಷಣಾ ಮತ್ತು ಸರ್ಕಾರಿ ವಹಿವಾಟು ಉಪಾಧ್ಯಕ್ಷ ವರ್ನೊನ್ ನೊರನ್ಹ ಮಾತನಾಡಿ, ಟಾಟಾ ಮೋಟಾರ್ಸ್ ರಕ್ಷಣಾ ಪರಿಹಾರ ಘಟಕ ಸಂಪೂರ್ಣ ಶಸ್ತ್ರಸಜ್ಜಿತ ವಾಹನಗಳನ್ನು ದೇಶದ ಪೊಲೀಸ್ ಮತ್ತು ಪ್ಯಾರಾಮಿಲಿಟರಿ ಘಟಕಗಳಿಗೆ ಒದಗಿಸುತ್ತಿದೆ. ಟಾಟಾ ಎಂಪಿವಿ, ಜಾರ್ಖಂಡ್ ಪೊಲೀಸ್‍ಗೆ ಉನ್ನತ ಹಂತದ ರಕ್ಷಣೆ ಒದಗಿಸಲು ಸಹಕಾರಿಯಾಗಿದೆ. ಐಇಡಿ ಮತ್ತು ಆ್ಯಂಟಿ ಪರ್ಸನಲ್ ಶಸ್ತ್ರಗಳ ವಿರುದ್ಧವೂ ರಕ್ಷಣೆ ನೀಡುತ್ತದೆ ಎಂದರು.

ಟಾಟಾ ಮೋಟಾರ್ಸ್, ಈ ಬೇಡಿಕೆ ಬೆನ್ನಲ್ಲೆ ಮಹಾರಾಷ್ಟ್ರ ರಾಜ್ಯ ಪೊಲೀಸ್‍ಗೆ 32 ಎಂಪಿವಿ ಪೂರೈಕೆ ಬೇಡಿಕೆ ಪಡೆದಿದೆ. ಟಾಟಾ ಎಂಪಿವಿ ಆಧುನಿಕ ತಂತ್ರಜ್ಞಾನ, ವಿ ಆಕಾರದ ಸ್ಪೋಟ ತಡೆಯುವ ತಂತ್ರಜ್ಞಾನವನ್ನು ಭದ್ರತೆ ಕಾರ್ಯಾಚರಣೆಗೆ ಸೂಕ್ತವಾಗುವಂತೆ ಹೊಂದಿದೆ. ಟಾಟಾ ಎಂಪಿವಿ ಎಲ್ಲ ಹಠಾತ್ ದಾಳಿಗಳಿಂದ ರಕ್ಷಣೆ ಒದಗಿಸುತ್ತದೆ. ವಾಹನ ಹೆಚ್ಚಿನ ಮಟ್ಟದ ಚಲನೆ ಮತ್ತು ಸಂರಕ್ಷಣೆ ಸಾಮಥ್ರ್ಯ ಹೊಂದಿದೆ.

ಟಾಟಾ ಮೋಟಾರ್ಸ್ ಜಾರ್ಖಂಡ್‍ನಲ್ಲಿ ದುರ್ಗಮ ಪ್ರದೇಶಗಳಿಗೆ ಹತ್ತಿರವಾಗುವಂತೆ ವಿತರಣೆ/ಸೇವಾ ಜಾಲ ಅಭಿವೃದ್ಧಿಗೊಳಿಸಿದೆ. ಟಾಟಾ ಎಂಪಿವಿಗೆ ಅಗತ್ಯ ಎಲ್ಲ ಬಿಡಿಭಾಗಳನ್ನು ಒದಗಿಸುತ್ತದೆ. ಟಾಟಾ ಮೋಟಾರ್ಸ್ ಸೇವಾ ಜಾಲ ಹೆಚ್ಚಿನ ಭದ್ರತೆ ಭರವಸೆ ನೀಡುತ್ತದೆ. ಕಂಪನಿ ರಕ್ಷಣಾ ಅಗತ್ಯತೆಗಳನ್ನು ಪೂರೈಸುವಷ್ಟು ಉತ್ಪಾದನೆ ಸಾಮಥ್ರ್ಯ ಹೊಂದಿದೆ. ಸಮರ್ಪಿತ ಮೂಲಸೌಕರ್ಯ, ಉತ್ಪಾದನೆ ಘಟಕ, ತರಬೇತಿಗೊಂಡ ಮಾನವಸಂಪನ್ಮೂಲ ಹೊಂದಿದೆ.

ಟಾಟಾ ಮೋಟಾರ್ಸ್ ರಕ್ಷಣಾ ಪರಿಹಾರ ಕುರಿತು: ಟಾಟಾ ಮೋಟಾರ್ಸ್ ದೇಶದ ರಕ್ಷಣೆ, ಭದ್ರತೆ ಪಡೆಗಳೊಂದಿಗೆ 1958ರಿಂದ ಸಹಭಾಗಿತ್ವ ಹೊಂದಿದೆ. 1,00,000 ವಾಹನವನ್ನು ಭಾರತೀಯ ಮಿಲಿಟರಿ ಮತ್ತು ಪ್ಯಾರಾಮಿಲಿಟರಿ ಪಡೆಗಳಿಗೆ ಈವರೆಗೆ ಪೂರೈಸಿದೆ. ಕಂಪನಿ ದೇಶೀಯ ಮಾರುಕಟ್ಟೆ ಅಗತ್ಯತೆಗಳನ್ನು ಮಾತ್ರ ಪೂರೈಸುವುದಲ್ಲ, ವಿಶ್ವದ ಅಗತ್ಯತೆಗಳನ್ನು ನೀಗುತ್ತಿದೆ. ಟಾಟಾ ಮೋಟಾರ್ಸ್, ತನ್ನ ವಿಶೇಷ ಸರಣಿಯ ರಕ್ಷಣ ವಾಹನಗಳನ್ನು ಹಲವು ದೇಶಗಳಿಗೆ ಪೂರೈಸುತ್ತಿದೆ.

ಟಾಟಾ ಮೋಟಾರ್ಸ್ ಸರಣಿ ರಸ್ತೆಯೇತರ ವಾಹನ ಸರಣಿಯನ್ನು ಜಿಎಸ್‍ಎ, ಕೆಬಿಆರ್, ಆಕ್‍ಫಾಮ್, ರೊನೊಕೊ, ಆರ್‍ಎ ಇಂಟರ್‍ನ್ಯಾಷನಲ್ ಮತ್ತು ರೈಡರ್ಸ್ ಮೊದಲಾದ ಎಐಡಿ ಮತ್ತು ಅಭಿವೃದ್ಧಿ ಏಜೆನ್ಸಿಗಳು ಖರೀದಿಸುತ್ತಿವೆ.

ಟಾಟಾ ಮೊಟಾರ್ಸ್ ಕುರಿತು: ಟಾಟಾ ಮೋಟಾರ್ಸ್, ವಿಶ್ವದ ಪ್ರತಿಷ್ಠಿತ ವಾಹನ ಸಂಸ್ಥೆಗಳ ಸಾಲಿನಲ್ಲಿ ಸ್ಥಾನ ಪಡೆದಿದೆ. 2011-12ರಲ್ಲಿ ಸಂಸ್ಥೆಯ ಒಟ್ಟು ಆದಾಯ 1,65,654 ಕೋಟಿ ರೂ.(32.5 ಶತಕೋಟಿ ಡಾಲರ್) ಅಂಗ ಸಂಸ್ಥೆಗಳು, ಸಹವರ್ತಿಗಳ ಮೂಲಕ ಟಾಟಾ ಮೋಟಾರ್ಸ್ ಇಂಗ್ಲೆಂಡ್, ದಕ್ಷಿಣ ಕೋರಿಯಾ, ಥೈಲ್ಯಾಂಡ್ ಮತ್ತು ಸ್ಪೈನ್‍ಗಳಲ್ಲಿ ಅಸ್ತಿತ್ವ ಹೊಂದಿದೆ. ಜಾಗ್ವಾರ್ ಲ್ಯಾಂಡ್ ರೋವರ್ ಖರೀದಿಯೊಂದಿಗೆ ಉದ್ಯಮದ ವ್ಯಾಪ್ತಿ ಹೆಚ್ಚಿಸಿಕೊಂಡಿದೆ.

ಟಾಟಾ ಮೋಟರ್ಸ್ ಫಿಯೆಟ್ ಇಂಡಿಯಾ ಜತೆ ಸಹಭಾಗಿತ್ವ ಹೊಂದಿದೆ. 7.9 ದಶಲಕ್ಷ ಟಾಟಾ ವಾಹನಗಳು ದೇಶದ ರಸ್ತೆಯಲ್ಲಿವೆ. ವಾಣಿಜ್ಯ ವಾಹನಗಳಲ್ಲಿ ಸಂಸ್ಥೆ ದೇಶೀಯ ಮಾರುಕಟ್ಟೆಯಲ್ಲಿ ಅಗ್ರ ಸ್ಥಾನ ಪಡೆದಿದೆ. ಪ್ರಯಾಣಿಕ ವಾಹನಗಳಲ್ಲಿ ಪ್ರತಿಷ್ಠಿತ 3 ಸಂಸ್ಥೆಗಳ ಸಾಲಿನಲ್ಲಿ ಸ್ಥಾನ ಹೊಂದಿದೆ. ವಿಶ್ವದ 4ನೇ ಬೃಹತ್ ಟ್ರಕ್ ಉತ್ಪಾದಕ ಹಾಗೂ ದ್ವಿತೀಯ ಬೃಹತ್ ಬಸ್ ಉತ್ಪಾದಕ ಸಂಸ್ಥೆ ಕೂಡ ಹೌದು. ಟಾಟಾ ಕಾರು, ಬಸ್ಸು , ಟ್ರಕ್‍ಗಳು ಯೂರೋಪ್, ಆಫ್ರಿಕ, ಏಷ್ಯಾ, ಅಮೆರಿಕಗಳಲ್ಲಿ ಮಾರಾಟವಾಗುತ್ತಿವೆ.

More from DriveSpark

Article Published On: Wednesday, August 8, 2012, 9:54 [IST]
English summary
Tata Motors has delivered 5 Mine Protected Vehicles (MPV) to the Jharkhand Police force, to bolster security preparedness.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+