ಟಾಟಾ ನ್ಯಾನೊ ಸಿಎನ್‌ಜಿಗೆ ಮಹೂರ್ತ ಫಿಕ್ಸ್?

ಟಾಟಾ ಮೋಟರ್ಸ್ ಕಂಪನಿಯು ಸಂಕುಚಿತ ನೈಸರ್ಗಿಕ ಅನಿಲ(ಸಿಎನ್‌ಜಿ) ಚಾಲಿತ ನ್ಯಾನೊ ಕಾರನ್ನು ಈ ಆರ್ಥಿಕ ವರ್ಷದ ಅಂತ್ಯಕ್ಕೆ ಹೊರತರುವ ನಿರೀಕ್ಷೆಯಿದೆ. ಟಾಟಾ ಮೋಟರ್ಸ್ ಕಂಪನಿಯು ದೆಹಲಿ ವಾಹನ ಪ್ರದರ್ಶನದಲ್ಲಿ ಸಿಎನ್‌ಜಿ ನ್ಯಾನೊ ಕಾನ್ಸೆಪ್ಟ್ ಕಾರನ್ನು ಪ್ರದರ್ಶಿಸಿತ್ತು.

ಇದರೊಂದಿಗೆ ಮುಂದಿನ ವರ್ಷ ಕಂಪನಿಯ ಡೀಸೆಲ್ ನ್ಯಾನೊ ಕಾರು ಕೂಡ ಆಗಮಿಸುವ ಸಾಧ್ಯತೆಯಿದೆ. ಒಂದು ಮೂಲದ ಪ್ರಕಾರ ಈ ವರ್ಷಾಂತ್ಯವೇ ನ್ಯಾನೊ ಡೀಸೆಲ್ ಉತ್ಪಾದನೆ ಆರಂಭವಾಗುತ್ತದಂತೆ!

ನ್ಯಾನೊ ಕಾರಿನ ಸಿಎನ್ಜಿ ಆವೃತ್ತಿಯನ್ನು ಶೀಘ್ರದಲ್ಲಿ ದೇಶದ ಮಾರುಕಟ್ಟೆಗೆ ಬಿಡುಗಡೆ ಮಾಡಲು ಯೋಜಿಸಿದ್ದೇವೆ. ಈ ಪುಟ್ಟ ಅನಿಲ ಚಾಲಿತ ಕಾರು ಈ ವರ್ಷವೇ ರಸ್ತೆಗಿಳಿಯುವ ನಿರೀಕ್ಷೆಯಿದೆ" ಎಂದು ಟಾಟಾ ಮೋಟರ್ಸ್ ವ್ಯವಸ್ಥಾಪಕ ನಿರ್ದೇಶಕ ಪಿಎಂ ತೆಲಾಂಗ್ ದೆಹಲಿ ವಾಹನ ಪ್ರದರ್ಶನದಲ್ಲಿ ಹೇಳಿದ್ದರು.

ಟಾಟಾ ನ್ಯಾನೊ ಡೀಸೆಲ್: ಸಿಎನ್‌ಜಿ ಮಾತ್ರವಲ್ಲದೇ ಕಂಪನಿಯು ಡೀಸೆಲ್ ಎಂಜಿನ್ ಆಯ್ಕೆಯಲ್ಲೂ ನ್ಯಾನೊ ಪರಿಚಯಿಸುವ ಸೂಚನೆಯಿದೆ. ಡೀಸೆಲ್ ನ್ಯಾನೊ ಕಾರು 700 ಅಥವಾ 800 ಸಿಸಿ ಟ್ವಿನ್ ಸಿಲಿಂಡರ್ ಟರ್ಬೊಚಾರ್ಜ್‌ಡ್ ಡಿಕೊರ್ ಎಂಜಿನ್ ಹೊಂದಿರುವ ನಿರೀಕ್ಷೆಯಿದೆ. ಈ ಕಾರು ನಂಬಲು ಸಾಧ್ಯವಿಲ್ಲವೆಂಬಂತೆ ಲೀಟರಿಗೆ 40 ಕಿ.ಮೀ. ಮೈಲೇಜ್ ನೀಡಲಿದೆ ಎಂಬ ವದಂತಿಗಳಿವೆ. ಡೀಸೆಲ್ ನ್ಯಾನೊ ಕಾರಿನ ದರ ಪೆಟ್ರೋಲ್ ಕಾರಿಗಿಂತ ಶೇಕಡ 30ರಷ್ಟು ಹೆಚ್ಚಿರುವ ನಿರೀಕ್ಷೆಯಿದೆ.(ಓದಿ ಕನ್ನಡ ಡ್ರೈವ್‌ಸ್ಪಾರ್ಕ್)

More from DriveSpark

Article Published On: Friday, April 13, 2012, 16:44 [IST]
English summary
Tata motors planning to launch CNG variant of Nano by this year end. The CNG Nano's running costs and emissions are expected to be low.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+