ದೇಶಾದ್ಯಂತ ಪ್ರಮುಖ 14 ರಾಜ್ಯಗಳಲ್ಲಿ 166 ಹೊಸ ಸಿಎನ್‌ಜಿ ಕೇಂದ್ರಗಳಿಗೆ ಚಾಲನೆ

ದೇಶದಾದ್ಯಂತ ಪರಿಸರ ಸ್ನೇಹಿ ಇಂಧನಗಳ ಹೆಚ್ಚಿನ ಬಳಕೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು ಹಲವಾರು ಹೊಸ ಉಪಕ್ರಮಗಳಿಗೆ ಚಾಲನೆ ನೀಡುತ್ತಿದ್ದು, ಇತ್ತೀಚೆಗೆ ದೇಶಾದ್ಯಂತ ಹೊಸದಾಗಿ 166 ಹೊಸ ಸಿಎನ್‌ಜಿ ಕೇಂದ್ರಗಳಿಗೆ ಚಾಲನೆ ನೀಡಲಾಗಿದೆ.

ದೇಶಾದ್ಯಂತ ಪ್ರಮುಖ 14 ರಾಜ್ಯಗಳಲ್ಲಿ 166 ಹೊಸ ಸಿಎನ್‌ಜಿ ಕೇಂದ್ರಗಳಿಗೆ ಚಾಲನೆ

ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ವಾಹನಗಳನ್ನು ತಗ್ಗಿಸಿ ಪರಿಸರ ಸ್ನೇಹಿ ವಾಹನ ಮಾದರಿಗಳಾದ ಸಿಎನ್‌ಜಿ, ಎಲೆಕ್ಟ್ರಿಕ್ ಮತ್ತು ಪ್ಯೂರ್ ಹೈಬ್ರಿಡ್ ವಾಹನಗಳ ಬಳಕೆಯನ್ನು ಉತ್ತೇಜಿಸಲಾಗುತ್ತಿದ್ದು, ಹೊಸ ಇಂಧನ ಆಧರಿತ ವಾಹನಗಳ ಪೂರಕವಾಗಿ ಸಿಎನ್‌ಜಿ ಕೇಂದ್ರಗಳ ಜೊತೆಗೆ ಇವಿ ಚಾರ್ಜಿಂಗ್ ನಿಲ್ದಾಣಗಳನ್ನು ಹೆಚ್ಚಿಸಲಾಗುತ್ತಿದೆ.

ದೇಶಾದ್ಯಂತ ಪ್ರಮುಖ 14 ರಾಜ್ಯಗಳಲ್ಲಿ 166 ಹೊಸ ಸಿಎನ್‌ಜಿ ಕೇಂದ್ರಗಳಿಗೆ ಚಾಲನೆ

ಆಟೋಮೋಟಿವ್ ವಲಯದಲ್ಲಿ ಶುದ್ಧ ಇಂಧನ ಮತ್ತು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ಮಾಲಿನ್ಯ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಹಲವಾರು ಹೊಸ ಯೋಜನೆಗಳನ್ನು ರೂಪಿಸಲಾಗುತ್ತಿದ್ದು, ಡೀಸೆಲ್ ಮತ್ತು ಪೆಟ್ರೋಲ್‌ಗೆ ಪರ್ಯಾಯವಾಗಿ ಸಿಎನ್‌ಜಿ ಮತ್ತು ಎಲ್‌ಎನ್‌ಜಿ ವಾಹನಗಳ ವ್ಯಾಪ್ತಿಯನ್ನು ಹೆಚ್ಚಿಸುವ ಕ್ರಮಕೈಗೊಳ್ಳಲಾಗುತ್ತಿದೆ.

ದೇಶಾದ್ಯಂತ ಪ್ರಮುಖ 14 ರಾಜ್ಯಗಳಲ್ಲಿ 166 ಹೊಸ ಸಿಎನ್‌ಜಿ ಕೇಂದ್ರಗಳಿಗೆ ಚಾಲನೆ

2014ರಲ್ಲಿದ್ದ 900 ಸಿಎನ್‌ಜಿ ಕೇಂದ್ರಗಳ ಸಂಖ್ಯೆ ಇದೀಗ ಪ್ರಸ್ತುತ 4500ಕ್ಕೆ ತಲುಪಿದ್ದು, ಮುಂದಿನ ಎರಡು ವರ್ಷಗಳಲ್ಲಿ ಸಿಎನ್‌ಜಿ ಕೇಂದ್ರಗಳನ್ನು 8000ಕ್ಕೆ ಹೆಚ್ಚಿಸಲಾಗುವುದು ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಮತ್ತು ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಮಾಹಿತಿ ಹಂಚಿಕೊಂಡಿದ್ದಾರೆ.

ದೇಶಾದ್ಯಂತ ಪ್ರಮುಖ 14 ರಾಜ್ಯಗಳಲ್ಲಿ 166 ಹೊಸ ಸಿಎನ್‌ಜಿ ಕೇಂದ್ರಗಳಿಗೆ ಚಾಲನೆ

ಹೊಸದಾಗಿ ಲೋಕಾರ್ಪಣೆಗೊಳಿಸಲಾದ 166 ಸಿಎನ್‌ಜಿ ಕೇಂದ್ರಗಳನ್ನು ವರ್ಚುವಲ್ ಕಾರ್ಯಕ್ರಮದ ಮೂಲಕ ಅಧಿಕೃತ ಚಾಲನೆ ನೀಡಿದ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಭಾರತದಲ್ಲಿ ಸಾರಿಗೆ ವಲಯಕ್ಕೆ ಮತ್ತು ಆಟೋ ಉದ್ಯಮಕ್ಕೆ ಪರಿಸರ ಸ್ನೇಹಿ ಸಿಎನ್‌ಜಿ ಲಭ್ಯತೆಯನ್ನು ವಿಸ್ತರಿಸುವಲ್ಲಿ ಇದು ಪ್ರಮುಖ ಹೆಜ್ಜೆಯಾಗಿದೆ ಎಂದಿದ್ದಾರೆ.

ದೇಶಾದ್ಯಂತ ಪ್ರಮುಖ 14 ರಾಜ್ಯಗಳಲ್ಲಿ 166 ಹೊಸ ಸಿಎನ್‌ಜಿ ಕೇಂದ್ರಗಳಿಗೆ ಚಾಲನೆ

ಹೊಸ ಸಿಎನ್‌ಜಿ ಕೇಂದ್ರಗಳಿಂದ ಸಿಎನ್‌ಜಿ ವಾಹನಗಳ ಮಾರುಕಟ್ಟೆಯನ್ನು ಉತ್ತೇಜಿಸುತ್ತದೆ ಮತ್ತು ಉತ್ಪಾದನೆ, ಕೌಶಲ್ಯ ಅಭಿವೃದ್ಧಿಯನ್ನು ಹೆಚ್ಚಿಸುತ್ತದೆ ಎಂದಿರುವ ಸಚಿವರ ಮುಂದಿನ ಎರಡು ವರ್ಷಗಳಲ್ಲಿ ಪ್ರಸ್ತುತ ಸಿಎನ್‌ಜಿ ಕೇಂದ್ರಗಳನ್ನು ದ್ವಿಗುಣುಗೊಳಿಸುವ ಭರವಸೆ ನೀಡಿದ್ದಾರೆ.

ದೇಶಾದ್ಯಂತ ಪ್ರಮುಖ 14 ರಾಜ್ಯಗಳಲ್ಲಿ 166 ಹೊಸ ಸಿಎನ್‌ಜಿ ಕೇಂದ್ರಗಳಿಗೆ ಚಾಲನೆ

ರೂ. 400 ಕೋಟಿ ವೆಚ್ಚದಲ್ಲಿ ಕಾರ್ಯಾರಂಭ ಮಾಡಿರುವ 166 ಹೊಸ ಸಿಎನ್‌ಜಿ ಕೇಂದ್ರಗಳು ದೇಶದಲ್ಲಿ ಅನಿಲ ಆಧಾರಿತ ಮೂಲಸೌಕರ್ಯ ಮತ್ತು ಶುದ್ಧ ಇಂಧನ ಲಭ್ಯತೆಯನ್ನು ಮತ್ತಷ್ಟು ಬಲಪಡಿಸಲಿದೆ ಎನ್ನಲಾಗಿದ್ದು, ಹೊಸ ಕೇಂದ್ರಗಳ ಮೂಲಕ ಸುಮಾರು 2 ಸಾವಿರಕ್ಕೂ ಜನರಿಗೆ ನೇರ ಉದ್ಯೋಗ ಅವಕಾಶ ದೊರಕುವ ಭರವಸೆ ನೀಡಲಾಗಿದೆ.

ದೇಶಾದ್ಯಂತ ಪ್ರಮುಖ 14 ರಾಜ್ಯಗಳಲ್ಲಿ 166 ಹೊಸ ಸಿಎನ್‌ಜಿ ಕೇಂದ್ರಗಳಿಗೆ ಚಾಲನೆ

ಹೊಸದಾಗಿ ಆರಂಭವಾಗಿರುವ 166 ಸಂಕುಚಿತ ನೈಸರ್ಗಿಕ ಅನಿಲ (CNG) ಕೇಂದ್ರಗಳನ್ನು GAIL (ಇಂಡಿಯಾ) ಲಿಮಿಟೆಡ್ ಮತ್ತು ಅದರ ಗುಂಪಿನ ಒಂಬತ್ತು ಸಿಟಿ ಗ್ಯಾಸ್ ಡಿಸ್ಟ್ರಿಬ್ಯೂಷನ್ (CGD) ಕಂಪನಿಗಳ ಸಹಯೋಗದೊಂದಿಗೆ ತೆರೆಯಲಾಗಿದ್ದು, ಇಂಧನ ಲಭ್ಯತೆ ಹೆಚ್ಚಿದಂತೆ ಸಿಎನ್‌ಜಿ ವಾಹನ ಲಭ್ಯತೆ ಕೂಡಾ ಸುಧಾರಿಸಲಿದೆ.

ದೇಶಾದ್ಯಂತ ಪ್ರಮುಖ 14 ರಾಜ್ಯಗಳಲ್ಲಿ 166 ಹೊಸ ಸಿಎನ್‌ಜಿ ಕೇಂದ್ರಗಳಿಗೆ ಚಾಲನೆ

ದುಬಾರಿ ಇಂಧನಗಳ ಪರಿಣಾಮ ಹೊಸ ವಾಹನ ಖರೀದಿದಾರರು ಹೆಚ್ಚು ಮೈಲೇಜ್ ಪ್ರೇರಿತ ಸಿಎನ್‌ಜಿ ವಾಹನಗಳು ಪ್ರಮುಖ ಆಕರ್ಷಣೆಯಾಗುತ್ತಿದ್ದು, ಸಿಎನ್‌ಜಿ ಪ್ರಯಾಣಿಕರ ಕಾರಗಳ ಮಾರಾಟದಲ್ಲಿ ಸದ್ಯ ಮಾರುತಿ ಸುಜುಕಿ ಅಗ್ರಸ್ಥಾನ ಕಾಯ್ದುಕೊಂಡಿದೆ.

ದೇಶಾದ್ಯಂತ ಪ್ರಮುಖ 14 ರಾಜ್ಯಗಳಲ್ಲಿ 166 ಹೊಸ ಸಿಎನ್‌ಜಿ ಕೇಂದ್ರಗಳಿಗೆ ಚಾಲನೆ

ಮಾರುತಿ ಸುಜುಕಿ ನಿರ್ಮಾಣದ ಪ್ರಮುಖ ಸಿಎನ್‌ಜಿ ಕಾರುಗಳು ಮಾರುಕಟ್ಟೆ ಪ್ರವೇಶಿಸಿದ ನಂತರ ಇತರೆ ಕಾರು ಉತ್ಪಾದನಾ ಕಂಪನಿಗಳು ಸಹ ತಮ್ಮ ಸಿಎನ್‌ಜಿ ಕಾರು ಮಾದರಿಗಳನ್ನು ಬಿಡುಗಡೆ ಮಾಡುತ್ತಿದ್ದು, ಸಿಎನ್‌ಜಿ ಕಾರು ಮಾದರಿಗಳು ಪೆಟ್ರೋಲ್ ಕಾರುಗಳೊಂದಿಗೆ ಸಂಯೋಜನೆ ಹೊಂದಿದೆ.

ದೇಶಾದ್ಯಂತ ಪ್ರಮುಖ 14 ರಾಜ್ಯಗಳಲ್ಲಿ 166 ಹೊಸ ಸಿಎನ್‌ಜಿ ಕೇಂದ್ರಗಳಿಗೆ ಚಾಲನೆ

ಇವು ಡೀಸೆಲ್ ಕಾರು ಮಾದರಿಗಳಿಂತಲೂ ಹೆಚ್ಚಿನ ಮೈಲೇಜ್ ಜೊತೆಗೆ ಪರಿಸರ ಸ್ನೇಹಿ ಮಾದರಿಗಳಾಗಿದ್ದು, ಇದು ವಾತಾವರಣಕ್ಕೆ ಹೊರಬಿಡುವ ಮಾಲಿನ್ಯದ ಪ್ರಮಾಣವೂ ಕಡಿಮೆಯಾಗಿದ್ದು, ಮಿತವ್ಯಯವೆನಿಸಿಕೊಂಡಿದೆ.

ದೇಶಾದ್ಯಂತ ಪ್ರಮುಖ 14 ರಾಜ್ಯಗಳಲ್ಲಿ 166 ಹೊಸ ಸಿಎನ್‌ಜಿ ಕೇಂದ್ರಗಳಿಗೆ ಚಾಲನೆ

ಪರ್ಯಾಯ ಇಂಧನ ವ್ಯವಸ್ಥೆಯು ಸಂಕುಚಿತ ನೈಸರ್ಗಿಕ ಅನಿಲ (ಸಿಎನ್‌ಜಿ) [Compressed natural gas] ವಾಹನಗಳ ಕಾರ್ಯಕ್ಷಮತೆ ಪೆಟ್ರೋಲ್ ಮತ್ತ ಡೀಸೆಲ್ ಕಾರುಗಳಿಗೆ ಹೋಲಿಸಿದಾಗ ಸಿಎನ್‌ಜಿ ಕಾರುಗಳ ಎಂಜಿನ್ ಕಾರ್ಯಕ್ಷಮತೆ ಸ್ವಲ್ಪ ಕಡಿಮೆಯಾಗಿರಲಿದ್ದರೂ ಇಂಧನ ದಕ್ಷತೆ ಹೆಚ್ಚಿರುತ್ತದೆ.

ದೇಶಾದ್ಯಂತ ಪ್ರಮುಖ 14 ರಾಜ್ಯಗಳಲ್ಲಿ 166 ಹೊಸ ಸಿಎನ್‌ಜಿ ಕೇಂದ್ರಗಳಿಗೆ ಚಾಲನೆ

ದೆಹಲಿಯಂತಹ ಪ್ರಮುಖ ನಗರಗಳಲ್ಲಿ ಮಾಲಿನ್ಯ ಪ್ರಮಾಣದ ಗುಣಮಟ್ಟದ ಸೂಕ್ಯಂಕ ಅಪಾಯದ ಮಟ್ಟ 400ಕ್ಕೆ ತಲುಪಿದ್ದು, ಈ ಹಿನ್ನೆಯಲ್ಲಿ ಡೀಸೆಲ್ ಚಾಲಿತ ಆಟೋರಿಕ್ಷಾ ಸೇರಿದಂತೆ ಬಿಎಸ್-4 ಡೀಸೆಲ್ ಕಾರುಗಳನ್ನು ಮಾರಾಟವನ್ನು ನಿಷೇಧಿಸಲಾಗುತ್ತಿದೆ.

ದೇಶಾದ್ಯಂತ ಪ್ರಮುಖ 14 ರಾಜ್ಯಗಳಲ್ಲಿ 166 ಹೊಸ ಸಿಎನ್‌ಜಿ ಕೇಂದ್ರಗಳಿಗೆ ಚಾಲನೆ

ಡೀಸೆಲ್ ಎಂಜಿನ್ ಚಾಲಿತ ಆಟೋ ರಿಕ್ಷಾ ಬದಲಾಗಿ ಸಿಎನ್‌ಜಿ, ಎಲ್‌ಪಿಜಿ ಮತ್ತು ಎಲೆಕ್ಟ್ರಿಕ್ ಆಟೋ ರಿಕ್ಷಾಗಳಿಗೆ ಮಾತ್ರ ಅವಕಾಶ ನೀಡಲಾಗುತ್ತಿದ್ದು, ಇದಕ್ಕಾಗಿ ಸಿಎನ್‌ಜಿ ಮತ್ತು ಇವಿ ಎಲೆಕ್ಟ್ರಿಕ್ ವಾಹನಗಳಿಗೆ ಪೂರಕವಾಗಿ ಚಾರ್ಜಿಂಗ್ ನಿಲ್ದಾಣಗಳ ಜೊತೆಗೆ ಸಿಎನ್‌ಜಿ ಕೇಂದ್ರಗಳನ್ನು ತೆರೆಯಲಾಗುತ್ತಿದೆ.

Most Read Articles

Kannada
English summary
Ministry of petroleum and natural gas launches 166 cng stations
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X