ಧಾರವಾಡದಲ್ಲಿ ಟಾಟಾ ಮೋಟರ್ಸ್ ರಕ್ಷಣಾ ವಾಹನ ಘಟಕ

ಬೆಂಗಳೂರು, ಆ 28: ರಾಜ್ಯದ ಧಾರವಾಡದ ಹದಿನಾರು ಎಕರೆ ಭೂಪ್ರದೇಶದಲ್ಲಿ ಭವಿಷ್ಯದ ಸೈನ್ಯ ಅವಶ್ಯಕತೆಯ ರಕ್ಷಣಾ ವಾಹನ(ಎಫ್ಐಸಿವಿ)ಗಳನ್ನು ನಿರ್ಮಿಸಲು ಟಾಟಾ ಮೋಟರ್ಸ್ ಯೋಜಿಸಿದೆ. ಇದಕ್ಕಾಗಿ ಕಂಪನಿಯು ಸುಮಾರು 600 ಕೋಟಿ ರುಪಾಯಿ ಹೂಡಿಕೆ ಮಾಡಲಿದೆ.

ನೂತನ ಪ್ರಾಜೆಕ್ಟ್ ಮೂಲಕ ಎಲ್ಲಾ ಬಗೆಯ ವಾಣಿಜ್ಯ ವಾಹನ ವಿನ್ಯಾಸ ಮತ್ತು ಅಭಿವೃದ್ಧಿಯನ್ನು ಸದೃಢಪಡಿಸಲು ನಿರ್ಧರಿಸಲಿದೆ. ಜೊತೆಗೆ ಡಿಫೆನ್ಸ್ ಮೊಬಿಲಿಟಿ ಸ್ಪೆಕ್ಟ್ರಮ್ ನ ಎಲ್ಲಾ ಕಡೆಯೂ ವ್ಯಾಪಿಸಲು ಕಂಪನಿಗೆ ಸಾಧ್ಯವಾಗಲಿದೆ.

ನೂತನ ಧಾರವಾಡ ಘಟಕವು ವರ್ಷಕ್ಕೆ ಸುಮಾರು 200 ವಾಹನಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಘಟಕ ನಿರ್ಮಾಣ ಮತ್ತು ವಾಹನ ಅಭಿವೃದ್ಧಿಗಾಗಿ ಕಂಪನಿಯು 600 ಕೋಟಿ ರುಪಾಯಿ ಹೂಡಿಕೆ ಮಾಡಲು ನಿರ್ಧರಿಸಿದೆ.

"ಈಗಾಗಲೇ ಪುಣೆಯಲ್ಲಿ ಭವಿಷ್ಯದ ಸೈನ್ಯ ಅವಶ್ಯಕತೆಯ ರಕ್ಷಣಾ ವಾಹನ ಅಭಿವೃದ್ಧಿ ಚಟುವಟಿಕೆಗಳು ಆರಂಭವಾಗಿದೆ. ಧಾರವಾಡ ಘಟಕದಲ್ಲಿಯೂ ಇದು ಶೀಘ್ರದಲ್ಲಿ ಆರಂಭವಾಗುವ ನಿರೀಕ್ಷೆಯಲ್ಲಿ ನಾವಿದ್ದೇವೆ" ಎಂದು ಟಾಟಾ ಮೋಟರ್ಸ್ ವಕ್ತಾರರು ಹೇಳಿದ್ದಾರೆ.

2011-12ರಲ್ಲಿ ರಕ್ಷಣಾ ವಾಹನ ವಿಭಾಗದಲ್ಲಿ ಟಾಟಾ ಮೋಟರ್ಸ್ ಕಂಪನಿಯು ಸುಮಾರು 1 ಸಾವಿರ ಕೋಟಿ ರುಪಾಯಿ ವಹಿವಾಟು ನಡೆಸಿದೆ. ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಇದು ಶೇಕಡ 50ರಷ್ಟು ಹೆಚ್ಚಳವಾಗಿದೆ. ಪ್ರಸಕ್ತ ವರ್ಷದಲ್ಲಿ ಇದು ಶೇಕಡ 25-35ರಷ್ಟು ಏರಿಕೆ ಕಾಣುವ ನಿರೀಕ್ಷೆಯನ್ನು ಕಂಪನಿ ವ್ಯಕ್ತಪಡಿಸಿದೆ.

ಕಂಪನಿಯು ಹಗುರ ಶಸ್ತ್ರಾಸ್ತ್ರ ಟ್ರೂಪ್ ಕಾರಿಯರ್, ಹಗುರ ಬುಲೆಟ್ ಪ್ರೂಫ್ ವಾಹನಗಳು ಮತ್ತು ಸ್ಪೋಟಕಗಳಿಂದ ರಕ್ಷಣೆ ನೀಡುವ ವಾಹನಗಳನ್ನು ಅಭಿವೃದ್ಧಿಪಡಿಸುತ್ತಿದೆ. ಟಾಟಾ ಮೋಟರ್ಸ್ ಕಂಪನಿಯು ವೀಲ್ಡ್ ಮಿಲಿಟರಿ ಸೆಗ್ಮೆಂಟಿನಲ್ಲಿ ಈಗ ಸುಮಾರು ಶೇಕಡ 40ರಷ್ಟು ಪಾಲು ಪಡೆದಿದೆ. ಆಂತರಿಕ ಭದ್ರತೆಯಲ್ಲಿ ಶೇಕಡ 75ರಷ್ಟು ಪಾಲು ಪಡೆದಿದೆ.

ಕಂಪನಿಯು ದೇಶದ ರಕ್ಷಣೆ, ಭದ್ರತೆ ಪಡೆಗಳೊಂದಿಗೆ 1958ರಿಂದ ಸಹಭಾಗಿತ್ವ ಹೊಂದಿದೆ. 1,00,000 ವಾಹನವನ್ನು ಭಾರತೀಯ ಮಿಲಿಟರಿ ಮತ್ತು ಪ್ಯಾರಾಮಿಲಿಟರಿ ಪಡೆಗಳಿಗೆ ಈವರೆಗೆ ಪೂರೈಸಿದೆ. ಕಂಪನಿ ದೇಶೀಯ ಮಾರುಕಟ್ಟೆ ಅಗತ್ಯತೆಗಳನ್ನು ಮಾತ್ರವಲ್ಲದೆ, ವಿಶ್ವದ ಅಗತ್ಯತೆಗಳನ್ನು ನೀಗುತ್ತಿದೆ. ಟಾಟಾ ಮೋಟಾರ್ಸ್, ತನ್ನ ವಿಶೇಷ ಸರಣಿಯ ರಕ್ಷಣ ವಾಹನಗಳನ್ನು ಹಲವು ದೇಶಗಳಿಗೆ ಪೂರೈಸುತ್ತಿದೆ.

More from DriveSpark

Article Published On: Tuesday, August 28, 2012, 13:58 [IST]
English summary
India's largest automobile company Tata Motors set Futuristic Infantry Combat Vehicles (FICV) unit at Dharwad, Karnataka. Company will invest around Rs 600 crore to these project.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+