ಟಾಟಾ ವೆಂಚ್ಯೂರ್ ಗ್ರಾಹಕರಿಗೊಂದು ಸೂಚನೆ
ಟಾಟಾ ಮೋಟರ್ಸ್ ಕಂಪನಿಯು ಉತ್ಪನ್ನವೊಂದನ್ನು ಮಾರಾಟ ಮಾಡಿದ ನಂತರವೂ ಗ್ರಾಹಕರೊಂದಿಗೆ ನಿಕಟವಾಗಿರುತ್ತದೆ. ನೂತನ ಕ್ಯಾಂಪ್ ಮೂಲಕ ನಾವು ವೆಂಚ್ಯೂರ್ ವಾಹನಗಳಿಗೆ ಸರ್ವಿಸ್ ಮಾಡಲಿದ್ದೇವೆ. ಇದರಿಂದ ವಾಹನದ ಬಾಳಿಕೆಯೂ ಹೆಚ್ಚಾಗುತ್ತದೆ" ಎಂದು ಟಾಟಾ ಮೋಟರ್ಸ್ ಯುಟಿಲಿಟಿ ವಾಹನ ವಿಭಾಗದ ಮುಖ್ಯಸ್ಥ ಅಶೀಷ್ ಧಾರ್ ಹೇಳಿದ್ದಾರೆ.
"ಸುಮಾರು ಒಂದು ವರ್ಷದ ಹಿಂದೆ ಕಂಪನಿಯು ಟಾಟಾ ವೆಂಚ್ಯೂರನ್ನು ದೇಶದ ರಸ್ತೆಗೆ ಪರಿಚಯಿಸಿತ್ತು. ಇದು ಆರಾಮದಾಯಕ ಸವಾರಿಗೆ ಸೂಕ್ತವಾಗಿದೆ. ವೆಂಚ್ಯೂರ್ ಸರ್ವಿಸ್ ಮಾಡಲು ಮತ್ತು ಗ್ರಾಹಕರ ಫೀಡ್ ಬ್ಯಾಕ್ ಪಡೆದುಕೊಳ್ಳಲು ಈ ಕ್ಯಾಂಪ್ ನೆರವಾಗಲಿದೆ" ಎಂದು ಅವರು ಹೇಳಿದ್ದಾರೆ.
ಈ ಮೂರು ದಿನದ ಉಚಿತ ಕ್ಯಾಂಪಿನಲ್ಲಿ ವೆಂಚ್ಯೂರ್ ಯುಟಿಲಿಟಿ ವೆಹಿಕಲ್ ಸಂಪೂರ್ಣ ಸರ್ವಿಸ್ ಮಾಡಲಾಗುವುದು. ಇದರೊಂದಿಗೆ ಕಂಪನಿಯು ಕಾರ್ಮಿಕ ಶುಲ್ಕದಲ್ಲಿ ಶೇಕಡ 10ರಷ್ಟು ವಿನಾಯಿತಿ ಮತ್ತು ಟಾಟಾ ಮೋಟರ್ಸ್ ಬಿಡಿಭಾಗ ಮಾರಾಟದಲ್ಲಿ ಶೇಕಡ 5ರಷ್ಟು ವಿನಾಯಿತಿ ನೀಡಲಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.


Click it and Unblock the Notifications









