ಟಾಟಾ ಮೋಟರ್ಸ್‌ನಿಂದ ಬುಲೆಟ್ ಪ್ರೂಫ್ ನ್ಯಾನೊ
ಇತ್ತೀಚೆಗೆ ದೆಹಲಿಯಲ್ಲಿ ನಡೆದ ರಕ್ಷಣಾ ವಾಹನ ಪ್ರದರ್ಶನ "DEFEXPO"ದಲ್ಲಿ ಟಾಟಾ ಮೋಟರ್ಸ್ ಕಂಪನಿಯು ವಿಶೇಷ ನ್ಯಾನೊ ಕಾನ್ಸೆಪ್ಟ್‌ನ್ನು ಪ್ರದರ್ಶಿಸಿದೆ. ಈ ಎರಡು ಸೀಟಿನ ಪುಟ್ಟ ಕಾರು ಬುಲೆಟ್ ಪ್ರೂಫ್ ಹೊಂದಿದ್ದು, ಗುಂಡಿನ ದಾಳಿಯಿಂದ ರಕ್ಷಣೆ ನೀಡುತ್ತದೆ.
ಟಾಟಾ ಬುಲೆಟ್ ಪ್ರೂಫ್ ಕಾರು ಸಣ್ಣ ಎಲೆಕ್ಟ್ರಿಕ್ ವಾಹನವಾಗಿದೆ. ಒಮ್ಮೆ ಪೂರ್ತಿ ಚಾರ್ಜ್ ಮಾಡಿದರೆ ಸುಮಾರು ಆರು ಗಂಟೆಗಳ ಕಾಲ ನಿಶ್ಚಿಂತೆಯಿಂದ ಪ್ರಯಾಣ ಮಾಡಬಹುದಾಗಿದೆ. ಈ ಕಾರಿನಲ್ಲಿ ಕೆಲವು ರಂದ್ರಗಳಿದ್ದು, ಕಾರಿನೊಳಗಿನಿಂದ ಪ್ರತಿದಾಳಿ ಕೂಡ ಮಾಡಬಹುದಾಗಿದೆ.
ಆದರೆ ಟಾಟಾ ಮೋಟರ್ಸ್ ಕಂಪನಿಯ ಈ ಕಾರು ಸದ್ಯ ರಸ್ತೆಗಿಳಿಯುವ ಸೂಚನೆಗಳಿಲ್ಲ. ಇದನ್ನು ವಿಶೇಷ ಸೇನಾ ಅವಶ್ಯಕತೆಗೆ ಬಳಸುವ ಸಾಧ್ಯತೆಯಿದೆ. ಮುಂಬೈನಲ್ಲಿ ನಡೆದ ಉಗ್ರರ ದಾಳಿಯಂತಹ ಸಂದರ್ಭದಲ್ಲಿ ಇಂತಹ ಕಾರುಗಳು ಉಗ್ರರ ವಿರುದ್ಧ ಹೋರಾಡಲು ನೆರವಾಗಲಿದೆ.
ಈ ಕಾರು ರೈಫಲ್, ಗ್ರೇನೆಡ್ ದಾಳಿಗಳಿಂದ ರಕ್ಷಣೆ ನೀಡುತ್ತದಂತೆ. ಇದರಲ್ಲಿರುವ ಕನ್ನಡಿಗಳು ಕೂಡ ಬುಲೆಟ್ ಪ್ರೂಫ್ ಗ್ಲಾಸ್ ಹೊಂದಿವೆ. ಆದರೆ ಈ ಕಾರಿನ ಗರಿಷ್ಠ ವೇಗ ಗಂಟೆಗೆ 20 ಕಿ.ಮೀ. ಅಷ್ಟೇ. (ಕನ್ನಡ ಡ್ರೈವ್‌ಸ್ಪಾರ್ಕ್)


Click it and Unblock the Notifications









