ಚೀನಾದಲ್ಲಿ ಜಾಗ್ವಾರ್ 2,800 ಕೋಟಿ ರು. ಹೂಡಿಕೆ
ಚೀನಾದ ಚೆರ್ರಿ ಆಟೋ ಮೊಬೈಲ್ ಮತ್ತು ಟಾಟಾ ಮೋಟರ್ಸ್ ಕಂಪನಿಯ ಜಾಗ್ವಾರ್ ಲ್ಯಾಂಡ್ ರೋವರ್ ಕಂಪನಿಗಳು ಮೈತ್ರಿ ಮಾಡಿಕೊಂಡಿವೆ. ನೂತನ ಜಂಟಿ ಉದ್ಯಮಕ್ಕೆ ಜಾಗ್ವಾರ್ ಲ್ಯಾಂಡ್ ರೋವರ್ ಕಂಪನಿಯು ಸುಮಾರು 2,800 ಕೋಟಿ ರುಪಾಯಿ ಹೂಡಿಕೆ ಮಾಡಲಿದೆ.
ಟಾಟಾ ಮೋಟರ್ಸ್ ಕಂಪನಿಯ ಮಾಲೀಕತ್ವದ ಜಾಗ್ವಾರ್ ಲ್ಯಾಂಡ್ ರೋವರ್ ಏಷ್ಯಾ ವಹಿವಾಟಿಗಾಗಿ ಚೀನಾದಲ್ಲಿ ಅಸೆಂಬ್ಲಿ ಘಟಕ ನಿರ್ಮಿಸಲಿದೆ. "30 ವರ್ಷಗಳ ಒಪ್ಪಂದದ ಜಂಟಿ ಉದ್ಯಮಕ್ಕೆ 350 ಕೋಟಿ ಷೇರು ಬಂಡವಾಳವಾಗಿ ಹೂಡಿಕೆ ಮಾಡಲಿದ್ದೇವೆ" ಎಂದು ಜಾಗ್ವಾರ್ ಲ್ಯಾಂಡ್ ರೋವರ್ ಕಂಪನಿಯು ಟಾಟಾ ಹೂಡಿಕೆದಾರರಿಗೆ ತಿಳಿಸಿದೆ.
ಜಂಟಿ ಉದ್ಯಮವು ಜೊತೆಯಾಗಿ ಚೀನಾದಲ್ಲಿ ಜೆಎಲ್ಆರ್ ಉತ್ಪನ್ನಗಳನ್ನು ಮಾರಾಟ ಮಾಡುವ, ಅಭಿವೃದ್ಧಿಪಡಿಸುವ, ನಿರ್ಮಾಣ ಮಾಡುವ ಗುರಿ ಹೊಂದಿದೆ. "ನಾವು ಚೀನಾದಲ್ಲಿ ಜಂಟಿ ಉದ್ಯಮ ಸ್ಥಾಪಿಸುವ ಕುರಿತು 2011ರ ಡಿಸೆಂಬರ್ ತಿಂಗಳಲ್ಲಿ ಒಪ್ಪಂದ ಮಾಡಿಕೊಂಡಿದ್ದೇವು" ಎಂದು ಕಂಪನಿ ಹೇಳಿದೆ.
ಜಂಟಿ ಉದ್ಯಮಕ್ಕೆ ಜಾಗ್ವಾರ್ ಮತ್ತು ಚೆರ್ರಿ ಸಮಾನ ಪ್ರಮಾಣದ ಅಂದರೆ 50:50 ಅನುಪಾತದಲ್ಲಿ ಹೂಡಿಕೆ ಮಾಡಲಿವೆ. (ಕನ್ನಡ ಡ್ರೈವ್ ಸ್ಪಾರ್ಕ್)


Click it and Unblock the Notifications









