ಟಾಟಾ ವಿಸ್ಟಾ ಕ್ವಾಡ್ರಾಜೆಟ್ 90 ಲಾಂಚ್; ದರ?
ದೇಶದ ಪ್ರಮುಖ ಕಾರು ತಯಾರಕ ಸಂಸ್ಥೆಯಾದ ಟಾಟಾ ಮೋಟಾರ್ಸ್ ನೂತನ ವಿಸ್ಟಾ ಕ್ವಾಡ್ರಾಜೆಟ್ 90 ಹ್ಯಾಚ್‌ಬ್ಯಾಕ್ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ. ವಿಸ್ಟಾ ಕ್ವಾಡ್ರಾಜೆಟ್ 90 ಕಾರು 1.3 ಲೀಟರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು 89 ಪಿಎಸ್ ಪವರ್ ಉತ್ಪಾದಿಸಲಿದೆ. ಫಿಯೆಟ್‌ನ 1.3 ಲೀಟರ್ ಮಲ್ಟಿಜೆಟ್ ಡೀಸೆಲ್ ಎಂಜಿನ್ ಆಳವಡಿಸಿರುವ ಟಾಟಾ ಕ್ವಾಡ್ರಾಜೆಟ್ 90 ಕಾರು ಫಿಯೆಟ್ ಪುಂಟೊ 90ಎಚ್‌ಪಿಗೆ ಪ್ರಬಲ ಪ್ರತಿಸ್ಪರ್ಧಿಯೆನಿಸಲಿದೆ.
ವಿಸ್ಟಾ ಕ್ವಾಡ್ರಾಜೆಟ್ 90 'ವಿಎಕ್ಸ್' ಹಾಗೂ 'ಝಡ್‌ಎಕ್ಸ್'ಗಳೆಂಬ ಎರಡು ವೆರಿಯಂಟ್‌ಗಳಲ್ಲಿ ಲಭ್ಯವಿದೆ. ಪವರ್ ಸ್ಟೀರಿಂಗ್, ಸ್ಟಿರಿಯೊ, ಫ್ರಂಟ್ ಆಂಡ್ ರಿಯರ್ ಫಾಗ್ ಲ್ಯಾಂಪ್, ರಿಯರ್ ವಾಷ್ ವೈಪ್, ಡಿಫಾಗರ್, ಎಬಿಎಸ್ ಹಾಗೂ ಇಬಿಡಿ ಸೌಲಭ್ಯಗಳನ್ನು ವಿಕ್ಸ್ ವೆರಿಯಂಟ್ ಹೊಂದಿರಲಿದೆ. ಹಾಗೆಯೇ ಝಡ್‌ಎಕ್ಸ್ ವೆರಿಯಂಟ್ ಡ್ಯುಯಲ್ ಎರ್‌ಬ್ಯಾಗ್ ಜತೆ ಫ್ರಂಟ್ ಹಾಗೂ ಅಲಾವ್ ವೀಲ್‌ಗಳಿವೆ.
ದರ ಮಾಹಿತಿ
ಮುಂಬೈ ಎಕ್ಸ್ ಶೋ ರೂಂಗಳಲ್ಲಿ ಟಾಟಾ ಕ್ವಾಡ್ರಾಜೆಟ್ 90 ವಿಕ್ಸ್ ಹಾಗೂ ಝಡ್‌ಎಕ್ಸ್ ವೆರಿಯಂಟ್‌ಗಳಿಗೆ ಕ್ರಮವಾಗಿ 6.03 ಹಾಗೂ 6.63 ಲಕ್ಷ ರುಪಾಯಿಗಳಾಗಿವೆ.
ಟಾಟಾ ವಿಸ್ಟಾ ಕ್ವಾಡ್ರಾಜೆಟ್ 90 ಕಾರು ಇತರ ವಿಸ್ಟಾ ಆವೃತ್ತಿಗಳಿಗಿಂತಲೂ ವಿಭಿನ್ನವಾಗಿದ್ದು, ಬ್ಲ್ಯಾಕ್ ರೂಫ್ ಆಕರ್ಷಣೆಗೆ ಕಾರಣವಾಗಿದೆ. ಆದರೆ ಇಂಟಿರಿಯರ್ ಭಾಗಗಳು ಟಾಟಾ ಮಾಂಝಾಗೆ ಸಾಮತ್ಯೆಯನ್ನು ಹೊಂದಿದೆ. ಪೆಟ್ರೋಲ್ ಹಾಗೂ ಡೀಸೆಲ್‌ಗಳಲ್ಲಿ ತಲಾ ಎರಡರಂತೆ ಸೇರಿ ಒಟ್ಟು ನಾಲ್ಕು ಎಂಜಿನ್ ಆಯ್ಕೆಗಳಲ್ಲಿ ಟಾಟಾ ವಿಸ್ಟಾ ಲಭ್ಯವಿರಲಿದೆ.

ಫ್ರಂಟ್ ವ್ಯೂ

ಸೈಡ್ ವ್ಯೂ

ಇಂಟಿರಿಯರ್ ವ್ಯೂ

ಕ್ಯಾಬಿನ್

ರಿಯರ್ ವ್ಯೂ

ಆಕರ್ಷಕ ನೋಟ

ಟಾಟಾ ವಿಸ್ಟಾ ಲುಕ್


Click it and Unblock the Notifications








