ಚಿನ್ನದಂತಹ ಕನಸಲ್ಲಿ ಟಾಟಾ ಸುಮೊ ಗೋಲ್ಡ್

ಹಳೆಯ ಟಾಟಾ ಸುಮೊಗಿಂತ ನೂತನ ಗೋಲ್ಡ್ ಸುಮೊ ಸುಮಾರು 40 ಸಾವಿರ ರುಪಾಯಿ ಅಗ್ಗವಾಗಿದೆ. ನೂತನ ಗೋಲ್ಡ್ ಸುಮೊ ಪರಿಷ್ಕೃತ ಆವೃತ್ತಿಯಾಗಿದ್ದು ಅತ್ಯುತ್ತಮ ಮೈಲೇಜ್ ನೀಡುತ್ತದೆ ಎಂದು ಕಂಪನಿಯ ಯುಟಿಲಿಟಿ ವೆಹಿಕಲ್ ವಿಭಾಗದ ಮುಖ್ಯಸ್ಥ ಅಶೇಷ್ ಧಾರ್ ಹೇಳಿದ್ದಾರೆ.
"ನೂತನ ಸುಮೊ ಗೋಲ್ಡ್ ಹಳೆಯ ಆವೃತ್ತಿಗಿಂತ ಅಗ್ಗವಾಗಿದ್ದು, ದರನೂ ಕಡಿಮೆಯಾಗಿದೆ. ಇದು ಪ್ರತಿಲೀಟರಿಗೆ ಸುಮಾರು 14.3 ಕಿ.ಮೀ. ಮೈಲೇಜ್ ನೀಡುತ್ತದೆ. ಗೋಲ್ಡ್ ಸುಮೊಗೆ ಸಾಕಷ್ಟು ನೂತನ ಎಕ್ಸ್ ಟೀರಿಯರ್ ಮತ್ತು ಇಂಟಿರಿಯರ್ ಫೀಚರುಗಳನ್ನು ಅಳವಡಿಸಲಾಗಿದೆ" ಎಂದು ಅವರು ಹೇಳಿದ್ದಾರೆ.
"ಈಗ ಪ್ರತಿತಿಂಗಳು ಸುಮಾರು 3 ಸಾವಿರ ಯುನಿಟ್ ನಷ್ಟು ಸುಮೊ ಗೋಲ್ಡ್ ಮಾರಾಟವಾಗುತ್ತಿದೆ. ನಾಲ್ಕು ತಿಂಗಳ ಹಿಂದೆ ತಿಂಗಳಿಗೆ ಕೇವಲ 1,100 ಸುಮೊ ಮಾರಾಟವಾಗುತ್ತಿದ್ದವು. ಮುಂದಿನ ಎರಡು ತಿಂಗಳಲ್ಲಿ ಸುಮೊ ಮಾರಾಟ ತಿಂಗಳಿಗೆ 5 ಸಾವಿರ ಯುನಿಟ್ ಗೆ ತಲುಪುವ ಭರವಸೆ ನಮಗಿದೆ" ಎಂದರು.
ಭಾರತ್ ಸ್ಟೇಜ್ 3 ಸುಮೊ ಗೋಲ್ಡ್ ದರ 5.47 ಲಕ್ಷ ರು. ಇದೆ. ಇದರ ಟಾಪ್ ಎಂಡ್ ಆವೃತ್ತಿ ದರ 6.89 ಲಕ್ಷ ರುಪಾಯಿ ಇದೆ. ಬಿಎಸ್ 4 ಬೇಸ್ ಆವೃತ್ತಿ ದರ 5.62 ಲಕ್ಷ ರು. ಮತ್ತು ಟಾಪ್ ಎಂಡ್ ದರ 7.03 ಲಕ್ಷ ರುಪಾಯಿ ಇದೆ. (ಕನ್ನಡ ಡ್ರೈವ್ ಸ್ಪಾರ್ಕ್)


Click it and Unblock the Notifications








