ಬೆಂಗಳೂರಿಗೆ ಬಂದ ನೂತನ ಟಾಟಾ ಗೋಲ್ಡ್ ಸುಮೊ

"ಆಕರ್ಷಕ ಮತ್ತು ಶಕ್ತಿಶಾಲಿ ವಾಹನ ಬಯಸುವ ಯುವ ಮತ್ತು ಡೈನಾಮಿಕ್ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ನೂತನ ಸುಮೊ ಕಾರನ್ನು ವಿನ್ಯಾಸ ಮಾಡಲಾಗಿದೆ" ಎಂದು ಕಂಪನಿ ಹೇಳಿದೆ.
ನೂತನ ಸುಮೊ ಗೋಲ್ಡ್ ಎರಡು ಎಂಜಿನ್ ಆಯ್ಕೆಗಳಲ್ಲಿ ದೊರಕುತ್ತಿದೆ. 2,956 ಸಿಸಿಯ ಸಿಆರ್4 ಟರ್ಬೊ(ಬಿಎಸ್4) ಎಂಜಿನ್ 85 ಪಿಎಸ್ ಮತ್ತು 250ಎನ್ಎಂ ಟಾರ್ಕ್ ಪವರ್ ನೀಡುತ್ತದೆ. ಈ ಎಂಜಿನಿನ ಸುಮೊ ಗೋಲ್ಡ್ ಪ್ರತಿಲೀಟರಿಗೆ ಸುಮಾರು 14.7 ಕಿ.ಮೀ. ಮೈಲೇಜ್ ನೀಡುತ್ತದೆ.
ಮತ್ತೊಂದು ಬಿಎಸ್3 ಆವೃತ್ತಿ ಡಿ ಟರ್ಬೊ ಕೂಡ 2,956ಸಿಸಿಯ ಎಂಜಿನ್ ಹೊಂದಿದ್ದು 70 ಪಿಎಸ್ ಮತ್ತು 225 ಟಾರ್ಕ್ ಪವರ್ ನೀಡುತ್ತದೆ. ಇದು ಪ್ರತಿಲೀಟರಿಗೆ 14.3 ಕಿ.ಮೀ. ಮೈಲೇಜ್ ನೀಡುತ್ತದೆ.
ನೂತನ ಸುಮೊ ಆಕರ್ಷಕ ಬಾಡಿ ಗ್ರಾಫಿಕ್ಸ್ ಹೊಂದಿದ್ದು, ನೂತನ ಹೆಡ್ ಲೈಟ್ ವಿನ್ಯಾಸ, ಮರುವಿನ್ಯಾಸ ಮಾಡಿರುವ ಮುಂಭಾಗದ ಗ್ರಿಲ್ ಮತ್ತು ನೂತನ ಹಿಂಭಾಗದ ಫಾಗ್ ಲ್ಯಾಂಪ್ ಹೊಂದಿದೆ.
ಕಂಪನಿಯು ಜಿಎಕ್ಸ್, ಇಎಕ್ಸ್, ಎಲ್ಎಕ್ಸ್ ಮತ್ತು ಸಿಎಕ್ಸ್ ಎಂಬ ಸುಮೊ ಗೋಲ್ಡ್ ನಾಲ್ಕು ಆವೃತ್ತಿಗಳನ್ನು ಹೊರತಂದಿದೆ. ಕಂಪನಿಯು ಇದಕ್ಕೆ ಮೂರು ವರ್ಷ ವ್ಯಾರೆಂಟಿ ಅಥವಾ 1 ಲಕ್ಷ ಕಿ.ಮೀ. ವ್ಯಾರೆಂಟಿ ನೀಡಿದೆ. ಇದರ ಬೆಂಗಳೂರು ಶೋರೂಂ ಆರಂಭಿಕ ದರ 5.37 ಲಕ್ಷ ರುಪಾಯಿ. (ಕನ್ನಡ ಡ್ರೈವ್ ಸ್ಪಾರ್ಕ್)


Click it and Unblock the Notifications