ಎಂಯುವಿ: ನಾಲ್ಕು ಬೆಸ್ಟ್ ಸೆಕೆಂಡ್ ಹ್ಯಾಂಡ್ ಕಾರುಗಳು

Posted By:

ಸೆಕೆಂಡ್ ಹ್ಯಾಂಡ್ ವಾಹನ ಮಾರುಕಟ್ಟೆಯಲ್ಲಿ ನಾಲ್ಕು ಅತ್ಯುತ್ತಮ ಎಂಯುವಿ ಅಥವಾ ಮಲ್ಟಿ ಪರ್ಪೊಸ್ ಯುಟಿಲಿಟಿ ವೆಹಿಕಲ್ ಇಲ್ಲಿ ನೀಡಲಾಗಿದೆ. ಇವುಗಳ ದರ ಸುಮಾರು 3.5 ಲಕ್ಷ ರು.ನಿಂದ 6.5 ಲಕ್ಷ ರು. ಆಸುಪಾಸಿನಲ್ಲಿದೆ.

ಟಾಟಾ ಸುಮೊ: ಯೂಸ್ಡ್ ಕಾರ್ ಮಾರುಕಟ್ಟೆಯಲ್ಲಿ ಟಾಟಾ ಸುಮೊ ಬೆಸ್ಟ್ ಎಂಪಿವಿ. ನೀವು ನಿಮ್ಮ ಹತ್ತಿರದ ಸೆಕೆಂಡ್ ಹ್ಯಾಂಡ್ ವಾಹನ ಮಾರಾಟಗಾರರನ್ನು ಭೇಟಿಯಾದರೆ ನಿಮಗೆ ಸುಮಾರು 3.5 ಲಕ್ಷ ರು.ನಿಂದ ಸುಮೊ ಕಾರುಗಳನ್ನು ಖರೀದಿಸಲು ಪ್ರಯತ್ನಿಸಬಹುದು. ಲೇಟೆಸ್ಟ್ ಮಾಡೆಲ್ ಆದರೆ ದರ ಕೊಂಚ ದುಬಾರಿ ಇರಬಹುದು. 2008ರ ಮಾಡೆಲಿಗೆ ಸುಮಾರು 3.5 ಲಕ್ಷ ರು.ಗೆ ದೊರಕಬಹುದು.

To Follow DriveSpark On Facebook, Click The Like Button

ಟೊಯೊಟಾ ಇನ್ನೋವಾ: ಸೆಕೆಂಡ್ ಹ್ಯಾಂಡ್ ಎಂಯುವಿಗಳಲ್ಲಿ ಇನ್ನೋವಾ ಸಹ ಖರೀದಿಸಬಹುದು. 2008ರ ಮಾಡೆಲಿಗೆ ಸುಮಾರು 6.5 ಲಕ್ಷ ರು. ನೀಡಬಹುದು. ಇನ್ನೋವಾ ಕಾರುಗಳು ದೊಡ್ಡ ಫ್ಯಾಮಿಲಿಗೆ ಸೂಕ್ತವಾದ ಕಾರು. ಇದರ ಸಂಪೂರ್ಣ ವಿಮರ್ಶೆ ಓದಿ.

ಮಹೀಂದ್ರ ಕ್ಷೈಲೊ: ಸೆಕೆಂಡ್ ಹ್ಯಾಂಡ್ ಎಂಯುವಿಗಳಲ್ಲಿ ಕ್ಷೈಲೊ ಕೂಡ ಖರೀದಿಸಬಹುದು. 2009ರ ಮಾಡೆಲ್ ಸಿಕ್ಕರೆ ಸುಮಾರು 6 ಲಕ್ಷ ರು.ಗೆ ನೀಡಿ ಖರೀದಿಸಬಹುದು. ಆದರೆ ಇದರಲ್ಲಿ ಕಡಿಮೆ ಎಂಜಿನ್ ಪವರ್ ಇರುವ ಆವೃತ್ತಿ ಖರೀದಿಸಬೇಡಿ. ಎಂಇಗಲ್ ಪವರಿನ ಇ8 ಎಂಜಿನ್ ಕ್ಷೈಲೊ ಖರೀದಿಸುವುದು ಸೂಕ್ತ.

ಮಹೀಂದ್ರ ಬೊಲರೊ: ಯೂಸ್ಡ್ ವಾಹನ ಮಾರುಕಟ್ಟೆಯಲ್ಲಿ ಬೊಲೆರೊ ಕೂಡ ಬೆಸ್ಟ್ ಎಂಯುವಿ. 2009ರ ಮಾಡೆಲ್ ಸುಮಾರು 5 ಲಕ್ಷ ರುಪಾಯಿ ಆಸುಪಾಸಿನಲ್ಲಿ ದೊರಕುತ್ತದೆ.

ಇವೆಲ್ಲ ಯೂಸ್ಡ್ ಕಾರು ಮಾರುಕಟ್ಟೆಯಲ್ಲಿ ಸದ್ಯ ಬೇಡಿಕೆಯಲ್ಲಿರುವ ಬೆಸ್ಟ್ ಎಂಯುವಿಗಳು. ನಿಮಗೆ ಬೇಕಾದನ್ನು ಆಯ್ಕೆ ಮಾಡಿಕೊಳ್ಳಬಹುದು.

English summary
Best MUVs in Used, Second hand car market. Mahindra Xylo, Bolero, Tata Sumo and Toyota Innova best in Used Vehicle Market.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark