ಪ್ರಯಾಣಿಕ ಕಾರುಗಳ ದರ ಹೆಚ್ಚಿಸಿದ ಟಾಟಾ ಮೋಟರ್ಸ್

ದರ ಹೆಚ್ಚಳ ನಿನ್ನೆಯಿಂದಲೇ(09) ಅನ್ವಯವಾಗಲಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ. "ವಾಹನ ಬಿಡಿಭಾಗಗಳ ವೆಚ್ಚ ಕಳೆದ ಕೆಲವು ಸಮಯಗಳಿಂದ ಕಂಪನಿಗೆ ನಷ್ಟವುಂಟುಮಾಡುತ್ತಿತ್ತು. ಈ ನಷ್ಟವನ್ನು ಗ್ರಾಹಕರತ್ತ ವರ್ಗಾಯಿಸುವುದು ನಮಗೆ ಅನಿವಾರ್ಯ. ವಿವಿಧ ಮಾಡೆಲ್ ಕಾರುಗಳಿಗೆ ಅನುಗುಣವಾಗಿ 7 ಸಾವಿರ ರು.ನಿಂದ 12 ಸಾವಿರ ರು.ನಷ್ಟು ದರ ದುಬಾರಿಯಾಗಲಿದೆ" ಎಂದು ಕಂಪನಿಯ ವಕ್ತಾರರು ಹೇಳಿದ್ದಾರೆ.
ಆದರೆ ಟಾಟಾ ನ್ಯಾನೊ ಮತ್ತು ಆರಿಯಾ ಕಾರುಗಳ ದರ ಹೆಚ್ಚಳ ಮಾಡದಿರಲು ಕಂಪನಿ ನಿರ್ಧರಿಸಿದೆ ಎಂದು ಅವರು ಹೇಳಿದ್ದಾರೆ. ಕಳೆದ ತಿಂಗಳು ಮಾರುತಿ ಸುಜುಕಿ ಮತ್ತು ಜನರಲ್ ಮೋಟರ್ಸ್ ಸೇರಿದಂತೆ ಹೆಚ್ಚಿನ ವಾಹನ ಕಂಪನಿಗಳು ಕಾರು ದರವನ್ನು ಸುಮಾರು 17 ಸಾವಿರ ರು.ನಷ್ಟು ಹೆಚ್ಚಿಸಿದ್ದವು. (ಕನ್ನಡ ಡ್ರೈವ್ ಸ್ಪಾರ್ಕ್ )


Click it and Unblock the Notifications








