ಪ್ರೇಮಿಗಳ ದಿನಕ್ಕೆ ಬಂತು ನೋಡಿ ಕೆಂಪು ನ್ಯಾನೊ
ಒಂಟಿಯಾಗಿದ್ದ ಹೃದಯಕ್ಕೊಂದು ಜಂಟಿ ದೊರಕಲು ಸೂಕ್ತ ಸಮಯವೊಂದು ಬಂದಿದೆ. ಮನದಲ್ಲಿ ಮುಚ್ಚಿಟ್ಟ ಪ್ರೀತಿನ ತೆರೆದಿಡಲು ಅನುವಾಗುವ ಪ್ರೇಮಿಗಳ ದಿನ ಹತ್ತಿರದಲ್ಲಿದೆ. ಬೀಸುವ ತಣ್ಣನೆಯ ಗಾಳಿಯಲ್ಲೂ ಪ್ರೀತಿಯ ಬಿಸಿಯಿದೆ.
ದೇಶದ ವಾಹನ ಕಂಪನಿ ಟಾಟಾ ಮೋಟರ್ಸ್ ಕೂಡ ಪ್ರೇಮಿಗಳ ದಿನಕ್ಕೆ ಸಜ್ಜಾಗಿದೆ. ಗೋವಾದಲ್ಲಿ ಟಾಟಾ ಡೀಲರ್ ನ್ಯಾನೊ ವ್ಯಾಲೆಂಟಿನ್ ಎಡಿಶನ್ ಆವೃತ್ತಿಯನ್ನು ಹೊರತಂದಿದೆ. ಈ ಕೆಂಪು ಕಾರು ಪ್ರೇಮಿಗಳಿಗೆ ಇಷ್ಟವಾಗುವಂತಿದೆ.
ಈ ಕಾರಿನ ಟೆಕ್ ವಿಷ್ಯದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಇಂಟಿರಿಯರ್ ಮತ್ತು ಎಕ್ಸ್ ಟೀರಿಯರ್ ಲವ್ ಮೂಡು ಹೆಚ್ಚಿಸುವಂತೆ ಪರಿಷ್ಕರಿಸಲಾಗಿದೆ. ನೂತನ ಆವೃತ್ತಿಯು ಟಾಟಾ ನ್ಯಾನೊ ಸಿಎಕ್ಸ್ ಕಾರಿನ ಮುಂದುವರೆದ ಆವೃತ್ತಿಯಾಗಿದೆ.
ನೂತನ ನ್ಯಾನೊ ಕಾರಿನಲ್ಲಿ ಕೆಲವು ಲವ್ ಗ್ರಾಫಿಕ್ಸ್ ಇವೆ. ಸನ್ ಫಿಲ್ಮ್ ಮತ್ತು ಫಾಗ್ ಲ್ಯಾಂಪ್ ಹೆಚ್ಚುವರಿಯಾಗಿ ಬಂದಿದೆ. ಯುಎಸ್ ಬಿ ಜೊತೆಗೆ ಟಾಟಾ ಆಡಿಯೋ/ಎಂಪಿ3 ಸಿಸ್ಟಮ್ ಕೂಡ ಇದೆ. ಹಳೆಯ ಆವೃತ್ತಿಗಿಂತ ಈ ಕಾರಿಗೆ 20 ಸಾವಿರ ರು. ಜಾಸ್ತಿ ಇದೆ. ನ್ಯಾನೊ ಉಡುಗೊರೆ ಕೊಡಲು ಇಷ್ಟವಿಲ್ಲವಂದ್ರೆ ಈ ಕೆಂಪು ಕಾರನ್ನು ಉಡುಗೊರೆಯಾಗಿ ನೀಡಬಹುದು.


Click it and Unblock the Notifications









