ಕಳ್ರನ್ನ ಹಿಡಿಯೋಕ್ಕೆ ಪೊಲೀಸರಿಗೆ ಟಾಟಾ ನ್ಯಾನೊ ಕಾರು

Tata Nano Police Car in Goa
ಟಾಟಾ ಮೋಟರ್ಸ್ ಕಂಪನಿಯ ಅಗ್ಗದ ಪುಟ್ಟ ಕಾರು ಗೋವಾಕ್ಕೆ ಪೊಲೀಸ್ ಡ್ಯೂಟಿ ಮೇಲೆ ಹೋಗೋ ಸಾಧ್ಯತೆಯಿದೆ. ಯಾಕೆಂದ್ರೆ ಗೋವಾದ ಪೊಲೀಸರು ಟಾಟಾ ನ್ಯಾನೊ ಹ್ಯಾಚ್ ಬ್ಯಾಕ್ ಕಾರನ್ನು ಪೊಲೀಸ್ ಕಾರಾಗಿ ಬಳಸುವ ಕುರಿತು ಯೋಚಿಸುತ್ತಿದ್ದಾರಂತೆ!

ಈ ಹಿಂದೆ ಮುಂಬೈ ಪೊಲೀಸರು ಕೂಡ ನ್ಯಾನೊ ಕಾರನ್ನು ಪೊಲೀಸ್ ಗಸ್ತು ವಾಹನವಾಗಿಸುವ ಟೆಸ್ಟಿಂಗ್ ಮಾಡಿದ್ದರು. ಆದರೆ ಈ ಯೋಜನೆ ಠುಸ್ ಆಗಿತ್ತು. ಇದೀಗ ಗೋವಾ ಪೊಲೀಸರ ಸರತಿ. ಗೋವಾದಲ್ಲಿ ಮುಂಬೈನಷ್ಟು ಜನದಟ್ಟಣೆ ಇಲ್ಲದ ಹಿನ್ನಲೆಯಲ್ಲಿ ಇಲ್ಲಿ ಇದು ಸಕ್ಸಸ್ ಆದರೂ ಆಗಬಹುದು.

ನ್ಯಾನೊ ಕಾರಿನಲ್ಲಿ ಹಲವು ಅನುಕೂಲತೆಗಳನ್ನು ಗೋವಾ ಪೊಲೀಸರು ಗುರುತಿಸಿದ್ದಾರೆ. ಈ ಪುಟ್ಟಕಾರನ್ನು ಸಂದುಗೊಂದು, ಗಲ್ಲಿಗಳಲ್ಲಿ ಸುಲಭವಾಗಿ ಡ್ರೈವ್ ಮಾಡಬಹುದು. ಜೊತೆಗೆ ಇದರ ದರ ಕೂಡ ಅಗ್ಗ. ಪೊಲೀಸ್ ಇಲಾಖೆಗೆ ಹೆಚ್ಚಿನ ಹೊರೆಯಾಗಲಿಕ್ಕಿಲ್ಲ. ಇಂತಹ ಹಲವು ಕಾರಣಗಳಿಂದ ಸಿಟಿ ರಸ್ತೆಯಲ್ಲಿ ಪೊಲೀಸ್ ಸವಾರಿಗೆ ಇದು ಬೆಸ್ಟ್ ಕಾರೆಂದು ಹೇಳಲಾಗಿದೆ.

ಗೋವಾದಲ್ಲಿ ಪೊಲೀಸ್ ನ್ಯಾನೊ ಕಾರು ಯಶಸ್ವಿಯಾದರೆ ಇನ್ನಷ್ಟು ರಾಜ್ಯಗಳ ಪೊಲೀಸ್ ಇಲಾಖೆ ನ್ಯಾನೊ ಕಡೆಗೆ ಗಮನ ನೀಡುವ ನಿರೀಕ್ಷೆಯಿದೆ. ಟಾಟಾ ಮೋಟರ್ಸ್ ಈಗಾಗಲೇ ನ್ಯಾನೊ ಮಾರಾಟದಲ್ಲಿ ಸಾಕಷ್ಟು ಹಿನ್ನಡೆ ಅನುಭವಿಸುತ್ತಿದೆ.

ಕೆಲವು ಕಳ್ಳರಿಗೆ, ರೌಡಿಗಳಿಗೆ ಒಟ್ಟಾರೆ ಅಪರಾಧ ಜಗತ್ತಿನವರಿಗೆ ಈ ಸುದ್ದಿ ಇಷ್ಟವಾಗುವ ಅಪಾಯವಿದೆ. ಅಪರಾಧಿಗಳಲ್ಲಿ ವೇಗದ ಕಾರು ಬೈಕುಗಳಿದ್ದರೆ, ಪೊಲೀಸರು ನ್ಯಾನೊ ಕಾರಿನಲ್ಲಿ ಅವರನ್ನು ಹಿಂದಿಕ್ಕಿ ಹಿಡಿಯಬಹುದೇ? ಹೀಗಾಗಿ ಪೊಲೀಸರಿಗೆ ಬುರುಬುರು ಎಂಜಿನ್ ಸದ್ದು ಮಾಡುವ ನ್ಯಾನೊ ಕಾರು ಸೂಕ್ತವಲ್ಲ ಅನ್ನುವ ವಾದವನ್ನೂ ನಮ್ಮ ಆಟೋ ಮಿತ್ರರು ವ್ಯಕ್ತಪಡಿಸಿದ್ದಾರೆ.

More from DriveSpark

Article Published On: Thursday, February 9, 2012, 11:26 [IST]
English summary
Tata Nano is all set to head to Goa and do duty amongst the Goa cops as a police car. Already Tata Nano used as a patrolling vehicle in the crowded bylanes of Mumbai.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+