ಬಾಂಗ್ಲಾಕ್ಕೆ ಪ್ರಯಾಣಿಸುವ ನ್ಯಾನೊಗೆ ಶುಭಕೋರುವ

Tata Nano Set Be Launched In Bangladesh Soon
ಜಗತ್ತಿನ ಅಗ್ಗದ ಕಾರು ಖ್ಯಾತಿಯ ಟಾಟಾ ನ್ಯಾನೊ ಶೀಘ್ರದಲ್ಲಿ ಬಾಂಗ್ಲಾದೇಶ ಪ್ರವೇಶಿಸಲಿದೆ. ಮುಂದಿನ ಕೆಲವೇ ತಿಂಗಳಲ್ಲಿ ಗಡಿ ದಾಟಲಿರುವ ಪುಟ್ಟಕಾರು ಬಾಂಗ್ಲಾದಲ್ಲಿ ಅಗ್ಗದ ಕಾರಾಗಿ ಉಳಿಯುವುದಿಲ್ಲ. ಯಾಕೆಂದರೆ ಅಲ್ಲಿ ನ್ಯಾನೊ ದರ ಇಲ್ಲಿಗಿಂತ ಎರಡುಪಟ್ಟು ಹೆಚ್ಚಿರಲಿದೆ.

ನಿಟೊಲ್ ನಿಲೊಯ್ ಗ್ರೂಪ್ ಬಾಂಗ್ಲಾಕ್ಕೆ ನ್ಯಾನೊ ಕಾರುಗಳನ್ನು ಆಮದು ಮಾಡಿಕೊಳ್ಳಲಿದೆ. ಆರಂಭಿಕವಾಗಿ ಕಂಪನಿಯು ಸುಮಾರು 2 ಸಾವಿರ ನ್ಯಾನೊ ಕಾರುಗಳನ್ನು ಆಮದುಮಾಡಿಕೊಳ್ಳಲಿದೆ ಎಂದು ನಿಟೊಲ್ ನಿಲೊಯ್ ಗ್ರೂಪ್ ಚೇರ್ಮನ್ ಅಬ್ದುಲ್ ಮತ್ಲಾಬ್ ಅಹ್ಮದ್ ಹೇಳಿದ್ದಾರೆ.

ಬಾಂಗ್ಲಾದಲ್ಲಿ ನ್ಯಾನೊ ಕಾರಿಗೆ ಅತ್ಯಧಿಕ ಬೇಡಿಕೆ ಕಾಣುವ ನಿರೀಕ್ಷೆ ವ್ಯಕ್ತಪಡಿಸಿದ ಅವರು, ಬೇಡಿಕೆಗೆ ತಕ್ಕಂತೆ ಮುಂದಿನ ಬಾರಿ ಹೆಚ್ಚು ಕಾರುಗಳನ್ನು ಆಮದುಮಾಡಿಕೊಳ್ಳಲಾಗುವುದು ಎಂದರು.

ಬಾಂಗ್ಲಾದಲ್ಲಿ ನ್ಯಾನೊ ದರ ಸುಮಾರು 5 ಲಕ್ಷ ಟಾಕ ಆಗಿರಲಿದೆ. ಅಂದರೆ ಭಾರತದ ಸುಮಾರು 3.2 ಲಕ್ಷ ರುಪಾಯಿನಷ್ಟು ದುಬಾರಿಯಾಗಿರಲಿದೆ. ಬಾಂಗ್ಲಾದೇಶದಲ್ಲಿ ಭಾರತದ ಕಾರುಗಳು ಮಾರಾಟವಾಗುವುದು ಕಡಿಮೆ. ಅಲ್ಲಿ ಜಪಾನ್ ಕಾರುಗಳು ಹೆಚ್ಚು ಜನಪ್ರಿಯವಾಗಿವೆ. ಆದರೆ ಭಾರತದ ಅಂಬಾಸಡರ್ ಕಾರು ಅಲ್ಲಿನ ಜನಪ್ರಿಯ ಟ್ಯಾಕ್ಸಿಯಾಗಿದೆ.

ಬಾಂಗ್ಲಾದೇಶದಲ್ಲಿ ನ್ಯಾನೊ ಕಾರುಗಳಿಗೆ ಅತ್ಯಧಿಕ ಬೇಡಿಕೆ ಸಿಕ್ಕರೆ ಅಲ್ಲೇ ಉತ್ಪಾದಿಸುವ ಯೋಜನೆಯೂ ಕಂಪನಿಗಿದೆ. ಮುಂದಿನ ವರ್ಷ ನ್ಯಾನೊ ಕಾರು ಜೋಡಣೆಗೆ ಅಸೆಂಬ್ಲಿ ಘಟಕ ಸ್ಥಾಪಿಸುವ ಯೋಜನೆಯೂ ನಿಟೊಲ್ ನಿಲೊಯ್ ಗ್ರೂಪಿಗಿದೆಯಂತೆ. ವರ್ಷಕ್ಕೆ ಸುಮಾರು 10 ಸಾವಿರ ನ್ಯಾನೊ ಕಾರುಗಳನ್ನು ಮಾರಾಟ ಮಾಡುವ ನಿರೀಕ್ಷೆಯನ್ನು ಅಬ್ದುಲ್ ಅಹ್ಮದ್ ವ್ಯಕ್ತಪಡಿಸಿದ್ದಾರೆ.

More from DriveSpark

Article Published On: Monday, February 20, 2012, 17:12 [IST]
English summary
The Tata Nano will finally cross the Ganga and be sold in Bangladesh soon. The Indian small car was scheduled to be sold in the neighboring country in October 2012 itself. But an issue with the car's price lead to a delay. But Nitol-Niloy Group who is the official importer of the Nano has now confirmed the small car will make its Bangladesh debut next month.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+