ನೆದರ್ಲ್ಯಾಂಡಿನಲ್ಲಿ ಅರುಣ್ ಉಡುಪ ಕಂಡ ಟಾಟಾ ನ್ಯಾನೊ

ಇತ್ತೀಚೆಗೆ ನೆದರ್ಲ್ಯಾಂಡ್ ವ್ಯಕ್ತಿಯೊಬ್ಬರು ನ್ಯಾನೊ ಕಾರನ್ನು ಆಮದು ಮಾಡಿಕೊಂಡು ಮಾಡಿಫೈ ಮಾಡಿಕೊಂಡ ಕುರಿತು ಕನ್ನಡ ಡ್ರೈವ್‌ಸ್ಪಾರ್ಕ್ ವರದಿ ಮಾಡಿತ್ತು. ಅದಕ್ಕೆ ಪ್ರತಿಕ್ರಿಯೆಯಾಗಿ ರಾಜ್ಯದ ಜೆಎಸ್‌ಡಬ್ಲ್ಯು ಘಟಕದಲ್ಲಿ ಕಾರ್ಯನಿರ್ವಹಿಸುವ ಅರುಣ್ ಉಡುಪ ನೆದರ್ಲ್ಯಾಂಡಿನಲ್ಲಿ ತಾವು ಕಂಡ ಇನ್ನೊಂದು ನ್ಯಾನೊ ಕಾರಿನ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ನೆದರ್ಲ್ಯಾಂಡಿನಲ್ಲಿ ಟಾಟಾ ಸಮೂಹದ ಜಂಟಿ ಉದ್ಯಮ Danieli corus ಎಂಬ ಕಂಪನಿಯಿದೆ. ಅಲ್ಲಿಂದ ಜೆಎಸ್‌ಡಬ್ಲ್ಯು ಸ್ಟ್ಟೀಲ್ ಕಂಪನಿಯು ಬಿಡಿಭಾಗಗಳನ್ನು ಆಮದು ಮಾಡಿಕೊಳ್ಳುತ್ತಿದೆ.

ಬಿಡಿಭಾಗ ಪೂರೈಕೆದಾರ ದನಿಅಲಿ ಕೊರಸ್ ಕಂಪನಿಗೆ ಅರುಣ್ ಉಡುಪ ಭೇಟಿ ನೀಡಿದ್ದರು. ಕೊರಸ್ ಕಚೇರಿಗೆ ಪ್ರವೇಶಿಸಿದಾಗ ಅರುಣ್ ಉಡುಪರನ್ನು ಸ್ವಾಗತಿಸಿದ್ದು ಟಾಟಾ ನ್ಯಾನೊ. ರಿಸೆಪ್ಷನ್ ಪಕ್ಕದಲ್ಲಿ ನಮ್ಮೂರ ನ್ಯಾನೊ ಕಾರನ್ನು ಪ್ರದರ್ಶಿಸಲಾಗಿತ್ತು. ಜೊತೆಗೆ ಒಂದು ರಾಯಲ್ ಎನ್‌ಫೀಲ್ಡ್ ಬುಲೆಟ್ ಕೂಡ ಅಲ್ಲಿತ್ತಂತೆ!

ದೇಶದ ಹೆಮ್ಮೆಯ ಉದ್ಯಮಿ ರತನ್ ಟಾಟಾ ನೆದರ್ಲ್ಯಾಂಡಿನಲ್ಲಿ ಸಖತ್ ಫೇಮಸ್ ಎಂದು ಅರುಣ್ ಹೇಳುತ್ತಾರೆ. "ಟಾಟಾ ಕೊರಸ್ ಉಕ್ಕಿನ ಘಟಕದ ಮುಂಭಾಗದಲ್ಲಿ ದನಿಅಲಿ ಕೊರಸ್ ಕಚೇರಿಯಿದೆ. ನಾವು ನೆದರ್ಲ್ಯಾಂಡಿನಲ್ಲಿ ಭೇಟಿಯಾದ ಹೆಚ್ಚಿನವರಿಗೆ ರತನ್ ಟಾಟಾ ಮತ್ತು ಟಾಟಾ ಮೋಟರ್ಸ್ ಬಗ್ಗೆ ಗೊತ್ತು. ಹೆಚ್ಚಿನ ಜನರು ನ್ಯಾನೊ ಕಾರಿನ ಕುರಿತು ಬಹುಮೆಚ್ಚುಗೆ ವ್ಯಕ್ತಪಡಿಸಿದ್ದಾರೆ" ಎಂದು ಅರುಣ್ ಹೇಳುತ್ತಾರೆ.

ಇತ್ತೀಚೆಗೆ ನೆದರ್ಲ್ಯಾಂಡ್ ವ್ಯಕ್ತಿಯೊಬ್ಬರು ಟಾಟಾ ನ್ಯಾನೊ ಆಮದು ಮಾಡಿಕೊಂಡು ಮಾಡಿಫೈ ಮಾಡಿದ್ದರು. ನೆದರ್ಲ್ಯಾಂಡ್ ಟಾಟಾ ಸಮೂಹದ ಘಟಕದಲ್ಲೂ ನ್ಯಾನೊ ಕಾರು ಪ್ರದರ್ಶನಕ್ಕಿಡಲಾಗಿದೆ ಎಂಬ ಮಾಹಿತಿಯನ್ನೂ ನೀಡಿದ ಅರುಣ್ ಉಡುಪರಿಗೆ ಧನ್ಯವಾದಗಳು.

ವಾಹನ ಸಂಬಂಧಿತ ಲೇಖನ, ಅನುಭವ, ವಿಮರ್ಶೆ, ಬರಹಗಳನ್ನು ನೀವೂ ಬರೆದು ಕಳುಹಿಸಬಹುದು. ಜೊತೆಗೆ ಫೋಟೊ ಇದ್ದರೆ ಇನ್ನೂ ಚೆಂದ. ನಮ್ಮ ವಿಳಾಸ : [email protected]

More from DriveSpark

Article Published On: Wednesday, May 9, 2012, 10:13 [IST]
English summary
JSW Steel Plant Karnataka(Bellary) Employee Arun Udupa recently visited Nederland Danieli corus office. Danieli corus supplies equipment to JSW Plant. During the entry in to the Danieli corus plant in the back side of the reception they had kept Tata Nano and One Enfield bike.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+