ಡ್ರೈವಿಂಗ್‌ನಲ್ಲಿ ಹದಿಹರೆಯದ ವಯಸ್ಸು ಡೇಂಜರ್

ಮೆಲ್ಬೊರ್ನ್, ಜೂನ್ 13: ವಾಹನ ಚಾಲನೆ ವಿಷಯದಲ್ಲಿ 20ರ ಆಸುಪಾಸಿನ ಯುವಕ ಯುವತಿಯರು ಕೆಟ್ಟದಾಗಿ ವರ್ತಿಸುತ್ತಾರೆ ಎಂದು ನೂತನ ಸಮೀಕ್ಷೆಯೊಂದು ತಿಳಿಸಿದೆ. ಅತಿವೇಗದ ಚಾಲನೆ, ಕುಡಿದು ವಾಹನ ಚಾಲನೆ ಮತ್ತು ಚಾಲನೆಯಲ್ಲಿ ಮೊಬೈಲ್ ಫೋನ್ ಬಳಕೆ ಸೇರಿದಂತೆ ಸಂಚಾರಿ ನೀತಿನಿಯಮಗಳನ್ನು ಉಲ್ಲಂಘಿಸುವುದರಲ್ಲಿ ಯುವಕರದ್ದೇ ಮೇಲುಗೈ ಎಂದು ಮೆಲ್ಬೊರ್ನ್ ಸಾರಿಗೆ ಮತ್ತು ಹೆದ್ದಾರಿ ವಿಭಾಗದ ಸಮೀಕ್ಷೆಯಲ್ಲಿ ಜಾಹೀರುಗೊಂಡಿದೆ.

ಸಮೀಕ್ಷೆಯು ಹಲವು ಅಂಕಿಅಂಶಗಳ ಮೂಲಕ ಯುವ ಚಾಲಕರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದೆ. ಕಳೆದ ವರ್ಷ ಅತಿವೇಗದ ಚಾಲನೆ ಮಾಡಿ ಸಿಕ್ಕಿಬಿದ್ದ ಸರಾಸರಿ ಮೂವರಲ್ಲಿ ಒಬ್ಬರು 21ರಿಂದ 29 ವಯಸ್ಸಿನವರಂತೆ. ಮೆಲ್ಬೊರ್ನ್ ಸಾರಿಗೆ ಇಲಾಖೆಯು 21-29 ವಯಸ್ಸು ಮತ್ತು 31-39ರ ವಯಸ್ಸಿನವರು ನಡೆಸಿದ ಅಪಘಾತಗಳು, ಸಂಚಾರಿ ನೀತಿನಿಯಮ ಉಲ್ಲಂಘನೆ ಮಾಹಿತಿಗಳನ್ನು ಹೋಲಿಸಿ ಈ ಸಮೀಕ್ಷೆ ನಡೆಸಿದೆ.

ಡ್ರಿಂಕ್ ಆಂಡ್ ಡ್ರೈವ್ ಮಾಡುವುದರಲ್ಲಿಯೂ 20ರ ಆಸುಪಾಸಿನವರು ಮುಂದಿದ್ದಾರೆ. 2011ರಲ್ಲಿ ಇದೇ ವಯಸ್ಸಿನ 9 ಸಾವಿರ ಜನರು ಕುಡಿದು ವಾಹನ ಚಾಲನೆ ಮಾಡಿ ಸಿಕ್ಕಿ ಬಿದ್ದಿದ್ದಾರೆ. ಇದೇ ಸಮಯದಲ್ಲಿ 31ಕ್ಕಿಂತ ಹೆಚ್ಚು ವಯಸ್ಸಿನ 2,500 ಕುಡುಕ ಚಾಲಕರು ಸಿಕ್ಕಿಬಿದ್ದಿದ್ದಾರೆ. ಇಲ್ಲೂ ಯುವಕರು ಪ್ರಥಮ ಸ್ಥಾನ ಪಡೆದಿದ್ದಾರೆ.

ರಸ್ತೆಯಲ್ಲಿ ಭೀಕರ ಅಪಘಾತ ಮಾಡುವುದರಲ್ಲಿ 17ರಿಂದ 24ರವರೆಗಿನ ವಯಸ್ಸಿನವರ ಕೊಡುಗೆ ಹೆಚ್ಚಿದೆ. ಕಳೆದ ವರ್ಷ ಸುಮಾರು 97 ಯುವಕರು ಭೀಕರ ರಸ್ತೆ ಅಪಘಾತಕ್ಕೆ ಕಾರಣವಾಗಿದ್ದಾರೆ. " ಬಿಸಿ ರಕ್ತದ ಯುವ ಜನತೆ ಈ ರೀತಿ ಮಾಡುವುದು ಆಶ್ವರ್ಯಕರ ವಿಷಯವೇನಲ್ಲ" ಎಂದು ಕ್ವೀನ್ಸ್ ಲ್ಯಾಂಡಿನ ರಸ್ತೆ ಸುರಕ್ಷತೆ ಮತ್ತು ಅಪಘಾತ ಸಂಶೋಧನೆ ವಿಭಾಗದ ಪ್ರೊಫೆಸರ್ ಬೆರಿ ವ್ಯಾಟ್ಸನ್ ಹೇಳಿದ್ದಾರೆ.

"ಬದುಕುವುದಕ್ಕಾಗಿ ಡ್ರೈವಿಂಗ್ ಮಾಡುವವರು ಮತ್ತು ಬದುಕು ಕಳೆದುಕೊಳ್ಳುವುದಕ್ಕಾಗಿ ವಾಹನ ಚಾಲನೆ ಮಾಡುವರೆಂಬ ಎರಡು ಪಂಗಡವು ನನ್ನನ್ನು ಕಾಡುತ್ತದೆ. ಮೊಬೈಲ್ ಫೋನ್ ಬಳಕೆ, ಕುಡಿತ ಇತ್ಯಾದಿಗಳು ವಾಹನ ಚಾಲನೆಯ ಪ್ರಮುಖ ಶತ್ರುಗಳು" ಎಂದು ವ್ಯಾಟ್ಸನ್ ಹೇಳಿಕೆಯನ್ನು ದಿ ಕೊರಿಯರ್ ಮೇಲ್ ಉಲ್ಲೇಖಿಸಿದೆ.

More from DriveSpark

Article Published On: Wednesday, June 13, 2012, 12:43 [IST]
English summary
Recent study in Australia has indicated that people in their 20s tend to commit more traffic offenses than teenagers. In fact teenaged drivers are safer drivers than people in their 30s.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+