ಹಾರೋ ಕಾರಿಗೆ ಮಹೂರ್ತ ಫಿಕ್ಸ್, ಟ್ರಾಫಿಕ್ ಜಾಮ್!
ನ್ಯೂಯಾರ್ಕಿನಲ್ಲಿ ಏಪ್ರಿಲ್ ತಿಂಗಳಲ್ಲಿ ನಡೆಯಲಿರುವ ವಾಹನ ಪ್ರದರ್ಶನದಲ್ಲಿ ಹಾರುವ ಕಾರನ್ನು ಪ್ರದರ್ಶನಕ್ಕಿಡಲು ಟೆರ್ರಾಫುಗಿಯಾ ನಿರ್ಧರಿಸಿದೆ. ಇದರ ದರ 2.79 ಲಕ್ಷ ಡಾಲರ್ ಆಸುಪಾಸಿನಲ್ಲಿರುವ ನಿರೀಕ್ಷೆಯಿದೆ. ಈಗಾಗಲೇ ಈ ಹಾರುವ ಕಾರಿಗೆ ಸುಮಾರು 100 ಜನರು ಬುಕ್ಕಿಂಗ್ ಮಾಡಿದ್ದಾರೆ ಅನ್ನೋದು ವಿಶೇಷ.
ಇದರ ವಿನ್ಯಾಸಕರು ಮತ್ತು ಎಂಜಿನಿಯರುಗಳು ಇದಕ್ಕೆ ಟ್ರಾನ್ಸಿಸನ್ ರೋಡೆಬಲ್ ಏರ್ ಕ್ರಾಫ್ಟ್ ಎಂದು ನಾಮಕರಣ ಮಾಡಿದ್ದಾರೆ. ರಸ್ತೆಯಲ್ಲಿ ಚಲಿಸುತ್ತಿರುವಾಗ 30 ಸೆಕೆಂಡಿನಲ್ಲಿ ರೆಕ್ಕೆ ಬಿಚ್ಚಿ ಆಕಾಶಕ್ಕೆ ಹಾರೋ ಸಾಮರ್ಥ್ಯ ಈ ಕಾರಿಗಿದೆ.
ಟೆರ್ರಾಫುಗಿಯಾದಲ್ಲಿ ಮಡುಚಿಕೊಳ್ಳುವ ರೆಕ್ಕೆ ಇದೆ. ಅಂದರೆ ರಸ್ತೆಯಲ್ಲಿ ಸಾಗುತ್ತಿರುವ ಕಾರೊಂದು ಕೆಲವೇ ಸೆಕೆಂಡಿನಲ್ಲಿ ರೆಕ್ಕೆ ಬಿಚ್ಚಿ ಹಾರಲಿದೆ. ಪ್ರತಿಗಂಟೆಗೆ 110 ಕಿ.ಮೀ. ವೇಗದಲ್ಲಿ ಮತ್ತು ಫುಲ್ ಟ್ಯಾಂಕ್ ಇಂಧನದಲ್ಲಿ ಸುಮಾರು 460 ಮೈಲು ಎತ್ತರದಲ್ಲಿ ಹಾರುವ ಸಾಮರ್ಥ್ಯ ಹೊಂದಿದೆ.
ಟ್ರಾನ್ಸಿಷನ್ ಹಾರುವ ಕಾರು ಎಲ್ಲರ ಕೈಗೆ ಸಿಗದು. ಭಾರತಕ್ಕೆ ಬಂದರೆ ಇದರ ದರ ಹಲವು ಕೋಟಿ ರುಪಾಯಿಗಳಲ್ಲಿ ಇರಲಿದೆ. ದುಡ್ಡು ನಮ್ಮಲ್ಲಿ ಬೇಕಾದಷ್ಟು ಇದೆ ಅಂತ ನೀವು ಅಂದುಕೊಂಡರೂ ಇದನ್ನು ಖರೀದಿಸುವುದು ಸುಲಭವಲ್ಲ. ಇದಕ್ಕೆ ಸಮರ್ಪಕ ಪೈಲಟ್ ಪರವಾನಿಗೆಯೂ ನಿಮಲ್ಲಿರಬೇಕು. ವೈಮಾನಿಕ ಸಚಿವಾಲಯ ಮಾತ್ರವಲ್ಲದೇ ದೇಶದ ಭದ್ರತಾ ವಿಭಾಗದಿಂದಲೂ ಅನುಮತಿ ಪಡೆಯಬೇಕಿದೆ.
ತನ್ನ ಭಾಮಿನಿಗೆ ಪ್ರಯಾಣಿಸಲು ಅವಕಾಶ ನೀಡದ ವಿಮಾನ ಕಂಪನಿಗೆ ಸೆಡ್ಡು ಹೊಡೆಯುವಂತೆ ಅನಿವಾಸಿ ಭಾರತೀಯನೊಬ್ಬ ಹಾರೋ ಕಾರನ್ನು ಬುಕ್ಕಿಂಗ್ ಮಾಡಿದ ಇಂಟ್ರೆಸ್ಟಿಂಗ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿರಿ.


Click it and Unblock the Notifications









