ಕಾರು ಹಾರುತ್ತಿದೆ ನೋಡಿದಿರಾ? ಭಾರತಕ್ಕೆ ಹಾರುವ ಕಾರು!

flying car
ರಸ್ತೆಯಲ್ಲಿ ಚಲಿಸುತ್ತಿರುವ ಕಾರೊಂದು ರೆಕ್ಕೆ ಬಿಚ್ಚಿ ಹಕ್ಕಿಯಂತೆ ಹಾರುವ ಸೋಜಿಗಕ್ಕೆ ದೇಶದ ರಸ್ತೆ ಮತ್ತು ಬಾನು ಸಾಕ್ಷಿಯಾಗಲಿದೆ. ತನ್ನ ಭಾಮಿನಿಗೆ ಪ್ರಯಾಣಿಸಲು ಅವಕಾಶ ನೀಡದ ವಿಮಾನ ಕಂಪನಿಗೆ ಸೆಡ್ಡು ಹೊಡೆಯುವಂತೆ ಅನಿವಾಸಿ ಭಾರತೀಯನೊಬ್ಬ ಹಾರೋ ಕಾರನ್ನು ಬುಕ್ಕಿಂಗ್ ಮಾಡಿದ್ದಾನೆ. ಭಾರತದಲ್ಲಿ ಇಲ್ಲಿವರೆಗೆ ಯಾರೂ ಅಂತಹ ಕಾರು ಖರೀದಿಸಿಲ್ಲ.

ಅನಿವಾಸಿ ಭಾರತೀಯ ಉದ್ಯಮಿ ಸುಭಾಷ್ ಶಿರೋರಾ ಇಂತಹ ಕಾರೊಂದನ್ನು ಈಗಾಗಲೇ ಬುಕ್ಕಿಂಗ್ ಮಾಡಿದ್ದಾನೆ. ಇವರು ಇಂಗ್ಲೆಂಡ್ ಕಂಪನಿಯೊಂದರಲ್ಲಿ ಸುಮಾರು 2 ಲಕ್ಷ ಕೋಟಿ ರೂ.ನಷ್ಟು ಷೇರು ಹೊಂದಿರುವ ವ್ಯಕ್ತಿ. ಈಗ ಸಣ್ಣ ಪ್ಲಾಷ್ ಬ್ಯಾಕ್. ಅದು 2008ರ ವರ್ಷ. ಅಂದು ಶಿರೋರಾ ಪತ್ನಿ ತನ್ನ 6 ವರ್ಷದ ಹಸುಳೆಯೊಂದಿಗೆ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿದ್ದಾಳೆ. ಆದರೆ ಆಕೆಯಲ್ಲಿ ಟಿಕೇಟ್ ಇದ್ದರೂ, ಅಲ್ಲಿನ ಅಧಿಕಾರಿಗಳು ಬೇರೆ ಟೆಕ್ನಿಕಲ್ ಕಾರಣ ನೀಡಿ ಆಕೆಗೆ ಆ ವಿಮಾನದಲ್ಲಿ ಪ್ರಯಾಣಿಸಲು ಅವಕಾಶ ನೀಡಲಿಲ್ಲ.

ತನ್ನ ಮುದ್ದು ಪತ್ನಿಯನ್ನು ಪ್ರಯಾಣಿಸಲು ಬಿಡದ ಸಂಸ್ಥೆಯ ವಿಮಾನವ್ಯಾಕೆ ತಾನೇ ಒಂದು ವಿಮಾನ ಖರೀದಿಸೋಣ ಅಂತ ಅವನಿಗೆ ಅನಿಸಿರಬೇಕು. 2009ರಲ್ಲಿ ಅನ್ವೇಷಣೆಯಾದ ಹಾರುವ ಕಾರು ಆತನ ಗಮನಸೆಳೆಯಿತು. ಅಮೆರಿಕದ ಮಾಸಚೊಸ್ಟ್ ಎಂಬ ಕಂಪನಿಯಿಂದ "ಟ್ರಾನ್ಸಿಸನ್" ಎಂಬ ಹಾರುವ ಕಾರನ್ನು ಒಂದು ಕೋಟಿ ರೂ. ಮುಂಗಡಕೊಟ್ಟು ಬುಕ್ಕಿಂಗ್ ಮಾಡಿದ್ದಾನೆ. ಇದು 2012ರ ವೇಳೆಗೆ ಆತನ ಕೈಸೇರಲಿದೆ.

ಭಾರತದಲ್ಲಿ ಕಾರನ್ನು ಹಾರಿಸುವುದು ಸುಲಭವಲ್ಲ ಅಂತ ಅವನಿಗೆ ಗೊತ್ತು. ಕೇವಲ ವೈಮಾನಿಕ ಸಚಿವಾಲಯ ಮಾತ್ರವಲ್ಲದೇ ದೇಶದ ಭದ್ರತಾ ವಿಭಾಗದಿಂದಲೂ ಅನುಮತಿ ಪಡೆಯಬೇಕಿದೆ. ಈ ಕುರಿತು ಶಿರೋರಾ ಅವರು ಭದ್ರತಾ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.

ಈ ಹಾರುವ ಕಾರು ನಿಜಕ್ಕೂ ತಂತ್ರಜ್ಞಾನದ ಅಚ್ಚರಿ. ರಸ್ತೆಯಲ್ಲಿ ಮಾಮೂಲಿ ಕಾರಿನಂತೆ ಇದರಲ್ಲಿ ಪ್ರಯಾಣಿಸಬಹುದು. ಒಂದು ಬಟನ್ ಪ್ರೆಸ್ ಮಾಡಿದರೆ ಸಾಕು ಇದು ವಿಮಾನವಾಗಿ ಬದಲಾಗುತ್ತದೆ. ಮೊದಲ ಹಾರುವ ಕಾರನ್ನು 2009ರ ಮೇ 5ರಂದು ನಿರ್ಮಿಸಲಾಯಿತು. ಇದಕ್ಕೆ ಅಮೆರಿಕ ಸಾರಿಗೆ ಮತ್ತು ಫೆಡರಲ್ ಏವಿಯೇಷನ್ ಆಡಳಿತ ಇತ್ತೀಚೆಗೆ ಪರವಾನಿಗೆಯನ್ನೂ ನೀಡಿದೆ.

ಎರಡು ಸೀಟ್ ನ ಈ ಕಾರು ಹಗುರ ವಿಮಾನದ ವಿಭಾಗಕ್ಕೆ ಸೇರಿವುದರಿಂದ ಇದನ್ನು ಹಾರಿಸಲು ಪೈಲಟ್ ಲೈಸನ್ಸ್ ಕೂಡ ಬೇಕಾಗುತ್ತದೆ. ಇದಕ್ಕೆ ವಿಮಾನಕ್ಕೆ ಬಳಸುವ ಪೆಟ್ರೊಲ್ ಬಳಸಬೇಕು. ಐಷಾರಾಮಿ ಕಾರುಗಳಿಗೆ ಹೋಲಿಸಿದರೆ ಇದರ ದರ ದುಬಾರಿಯೇನಲ್ಲ. ತೆರಿಗೆ ಸುಂಕವೆಲ್ಲ ಸೇರಿ ಅಹಮಾದಬಾದ್ ಗೆ ತಲುಪಿದಾಗ ಇದರ ದರ ಸುಮಾರು 6 ಕೋಟಿ ರೂ. ಆಗಲಿದೆ.

"ಈ ಹಾರೋ ಕಾರಿಗೆ ಸಣ್ಣ ವಿಮಾನ ವಿಭಾಗದಲ್ಲಿ ಪರವಾನಿಗೆ ನೀಡಬಹುದು. ಆದರೆ ರಸ್ತೆ ಮತ್ತು ಆಕಾಶದಲ್ಲಿ ಹಾರೋ ಈ ಕಾರು ಭದ್ರತಾಪಡೆಗಳಿಗೆ ತಲೆನೋವು ತರಬಹುದು" ಎಂದು ವೈಮಾನಿಕ ವಿಭಾಗದ ವಿಶ್ಲೇಷಕರೊಬ್ಬರು ಹೇಳುತ್ತಾರೆ. ಹಾರೋ ಕಾರಿಗೆ ಭಾರತದಲ್ಲಿ ಹಾರಲು ಅವಕಾಶ ನೀಡುತ್ತಾರೋ ಇಲ್ಲವೋ ಒಂದಿಷ್ಟು ಸಮಯ ಕಾದುನೋಡಬೇಕಿದೆ.

Most Read Articles

Kannada
English summary
NRI businessman Subhash Shihora has booked world first flying car. This car will hit Indian Road, Air By 2012.
Story first published: Monday, May 9, 2011, 12:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X