ಮಹಿಳೆಯರಿಗಾಗಿ ಟಾಪ್ 5 ಬಜೆಟ್ ಕಾರುಗಳು
ಇಂದಿನ ಆಧುನಿಕ ಯುಗದಲ್ಲಿ ಮಹಿಳೆಯರು ಸ್ವಾವಲಂಬನೆಯನ್ನು ಹೊಂದಿದ್ದು, ಪುರುಷರನ್ನು ಆಶ್ರಯಿಸುತ್ತಿಲ್ಲ. ಹಾಗಾಗಿ ತನ್ನದೇ ಆದ ಜೀವನಶೈಲಿಯನ್ನು ನಡೆಸಲು ಸಾಮರ್ಥ್ಯವನ್ನು ಹೊಂದಿರುತ್ತಾರೆ.
ನಗರ ಪ್ರದೇಶದಲ್ಲಿರುವ ಬಹುತೇಕ ಮಹಿಳೆಯರು ಉದ್ಯೋಗದಲ್ಲಿರುತ್ತಾರೆ. ಹಾಗೆಯೇ ಪತಿ, ಕುಟುಂಬವನ್ನು ಆಶ್ರಯಿಸದೇ ತಮ್ಮ ಬೇಡಿಕೆಗಳನ್ನು ಈಡೇರಿಸುವ ಶಕ್ತಿ ಹೊಂದಿರುತ್ತಾರೆ. ಹಾಗಿರುವಾಗ ಮಹಿಳೆಯರಿಗಾಗಿ ದೇಶದಲ್ಲಿ ಲಭ್ಯವಿರುವ ಅಗ್ರ ಐದು ಸಂಚಾರಿ ಯೋಗ್ಯ ಹ್ಯಾಚ್‌ಬ್ಯಾಕ್ ಕಾರುಗಳನ್ನು ಡ್ರೈವ್ ಸ್ಪಾರ್ಕ್ ಪ್ರಸ್ತುತಪಡಿಸುತ್ತದೆ.
ಕಾಲೇಜು ಹುಡುಗಿಯರು ಹಾಗೂ ಕೆಲಸ ಕಳೆದು ತಮ್ಮ ಪತಿಯ ಆಗಮನಕ್ಕಾಗಿ ಕಾಯುವ ಮಹಳೆಯರು ಇಲ್ಲೊಮ್ಮೆ ಕಣ್ಣಾಯಿಸಬಹುದು. ಪುರುಷರನ್ನು ಹೋಲಿಸಿದರೆ ಮಹಿಳೆಯರ ಕಾರು ಚಾಲನೆಯಲ್ಲಿ ಹಲವು ವ್ಯತ್ಯಾಸಗಳಿರುತ್ತದೆ. ಹಾಗಾಗಿ ಹೆಚ್ಚು ಸುರಕ್ಷಿತ, ಕಡಿಮೆ ನಿರ್ವಹಣಾ ವೆಚ್ಚ, ಇಂಧನ ಉಳಿತಾಯ ಹಾಗೂ ಕಡಿಮೆ ಬಜೆಟ್ ಕಾರುಗಳನ್ನು ಮಹಿಳೆಯರು ಖರೀದಿಸಬಹುದಾಗಿದೆ.
ನಗರ ಪ್ರದೇಶದಲ್ಲಿ ಭಾರಿ ವಾಹನ ದಟ್ಟಣೆಯಿರುವುದರಿಂದ ಟ್ರಾಫಿಕ್‌ಗಳಿಗೆ ಹೊಂದಿಕೆಯಾಗುವ ಸಣ್ಣ ಕಾರುಗಳನ್ನು ಆಯ್ಕೆ ಮಾಡುವುದು ಹೆಚ್ಚು ಸೂಕ್ತವೆನಿಸಬಹುದು. ಹಾಗಿದ್ದರೆ ಮಹಿಳೆಯರಿಗಾಗಿ ದೇಶದಲ್ಲಿ ಲಭ್ಯವಿರುವ ಟಾಪ್ 5 ಕಾರುಗಳ ಪಟ್ಟಿಯನ್ನು ನೋಡೋಣ.

ಎರಡು ಕಾರಣಗಳಿಂದಾಗಿ ಟಾಟಾ ನ್ಯಾನೋ ಮಹಿಳೆಯರಿಗೆ ಹೆಚ್ಚು ಸೂಕ್ತವೆನಿಸಿದೆ. ದೇಶದ ಅತಿ ಅಗ್ಗದ ಕಾರೆಂಬ ಕೀರ್ತಿಗೆ ಪಾತ್ರವಾಗಿರುವ ಟಾಟಾ ನ್ಯಾನೋ ಸಂಚಾರ ದಟ್ಟಣೆಯನ್ನು ಸುಲಭವಾಗಿ ನಿಭಾಯಿಸಬಲ್ಲದು. ಎರಡು ಲಕ್ಷ ಬಜೆಟ್‌ನೊಳಗೆ ಲಭ್ಯವಿರುವ ನ್ಯಾನೋ ಪ್ರತಿ ಲೀಟರ್‌ಗೆ 25.4 ಕಿಲೋ ಮೀಟರ್ ಇಂಧನ ಕ್ಷಮತೆ ನೀಡುವ ಸಾಮರ್ಥ್ಯ ಹೊಂದಿದೆ. ಇತರ ಕಾರುಗಳಿಗೆ ಹೋಲಿಸಿದರೆ ನ್ಯಾನೋ ಉದ್ದವು ಕಿರಿದಾಗಿರುವುದರಿಂದ ಪಾರ್ಕಿಂಗ್ ಸುಲಭವಾಗಿ ಮಾಡಬಹುದಾಗಿದೆ.

ದೇಶದ ಅತಿ ದೊಡ್ಡ ಕಾರು ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿಯ ಪರಿಷ್ಕೃತ ಆವೃತ್ತಿ ಆಲ್ಟೊ 800 ಪ್ರಸ್ತುತ ದೇಶದಲ್ಲಿ ಅತಿ ಹೆಚ್ಚು ಮಾರಾಟಗೊಳ್ಳುತ್ತಿರುವ ಕಾರಾಗಿದೆ. 3 ಲಕ್ಷದೊಳಗಿನ ಬಜೆಟ್‌ನಲ್ಲಿ ಲಭ್ಯವಿರುವ ಮಾರುತಿ ಆಲ್ಟೊ ಲೀಟರ್‌ಗೆ 22.74 ಕಿಲೋ ಮೀಟರ್ ಮೈಲೇಜ್ ನೀಡಲಿದೆ. ಎಸಿ ಸೇರಿದಂತೆ ಅನೇಕ ಸೌಲಭ್ಯಗಳು ಆಲ್ಟೊದಲ್ಲಿ ಅಡಗಿದೆ.

ಮಾರುತಿಗೆ ನಿಕಟ ಪೈಪೋಟಿ ನೀಡುತ್ತಿರುವ ಹ್ಯುಂಡೈ ಇಯಾನ್ ಕಾರನ್ನು ಸಹ ಮಹಿಳೆಯರನ್ನು ಆಯ್ಕೆ ಮಾಡಬಹುದಾಗಿದೆ. ಅದ್ಭುತ ವಿನ್ಯಾಸ ಹೊಂದಿರುವ ಇಯಾನ್ ಮಹಿಳೆಯರನ್ನು ಹೆಚ್ಚು ಆಕರ್ಷಿಸಬಲ್ಲದು. ಆಲ್ಟೊಗಿಂತಲೂ ಕೊಂಚ ದುಬಾರಿಯಾಗಿದ್ದರೂ ವೈಶಿಷ್ಟ್ಯಕ್ಕೆ ಹೆಚ್ಚು ಮಹತ್ವ ನೀಡುವುದಾದರೆ ಇಯಾನ್ ಆಯ್ಕೆ ಹೆಚ್ಚು ಸೂಕ್ತ.

ಷೆವರ್ಲೆ ಸ್ಪಾರ್ಕ್ ಮತ್ತೊಂದು ಪ್ರಮುಖ ಹ್ಯಾಚ್‌ಬ್ಯಾಕ್ ಕಾರಾಗಿದೆ. 4 ಲಕ್ಷದ ಅಸುಪಾಸಿನಲ್ಲಿ ಲಭ್ಯವಿರುವ ಷೆವರ್ಲೆ ಸ್ಪಾರ್ಕ್‌ನಲ್ಲಿ 1.0 ಇಂಧನ ದಕ್ಷತೆಯ ಪೆಟ್ರೋಲ್ ಎಂಜಿನ್ ಆಳವಡಿಸಲಾಗಿದೆ. ಷೆವರ್ಲೆ ಸ್ಪಾರ್ಕ್ ಪರಿಷ್ಕೃತ ಆವೃತ್ತಿ ಇತ್ತೀಚೆಗಷ್ಟೇ ಬಿಡುಗಡೆಗೊಂಡಿತ್ತು.

ಮೇಲೆ ಕೊಡಲಾದ ಎಲ್ಲ ನಾಲ್ಕು ಕಾರುಗಳು ಪೆಟ್ರೋಲ್ ಎಂಜಿನ್ ಕಾರುಗಳಾಗಿವೆ. ಹಾಗಾಗಿ ನೀವು ಪೆಟ್ರೋಲ್ ಎಂಜಿನ್ ಕಾರುಗಳನ್ನು ಬಯಸುವುದಿಲ್ಲವಾದ್ದಲ್ಲಿ ಡೀಸೆಲ್ ಎಂಜಿನ್‌ನಿಂದ ಚಾಲನೆಯಾಗಲಿರುವ ಷೆವರ್ಲೆ ಬೀಟ್‌ನತ್ತ ಕಣ್ಣಾಯಿಸಬಹುದು. 4 ಲಕ್ಷ ಅಸುಪಾಸಿನಲ್ಲಿ ದೊರಕುವ ಷೆವರ್ಲೆ ಬೀಟ್ ತನ್ನ ಡೈನಾಮಿಕ್, ಸ್ಟೈಲಿಷ್ ಮತ್ತು ಇಂಧನ ದಕ್ಷತೆ ಇತ್ಯಾದಿಗಳಿಂದ ಗಮನಸೆಳೆಯುತ್ತದೆ.
ರಾತ್ರಿ ಪಯಣವನ್ನು ಪರಿಗಣಿಸಿದಾಗಲೂ ಸ್ಕೂಟಿಗಿಂತಲೂ ಸಣ್ಣ ಕಾರು ಆಯ್ಕೆ ಮಹಿಳೆಯರಿಗೆ ಹೆಚ್ಚು ಸೂಕ್ತವೆನಿಸಬಹುದು.


Click it and Unblock the Notifications








