ನೀವು ಸೈಕಲ್ ಪಕ್ಷ ಸೇರ್ತಿರಾ? ಹತ್ತು ಲಾಭವಿದೆ!

ಸೈಕಲ್ ಮತ್ತೆ ಸುದ್ದಿಯಲ್ಲಿದೆ. ರಾಹುಲ್ ಗಾಂಧಿಗೆ ಸೈಕಲ್ ದುಸ್ವಪ್ನವಾಗಿದೆ. ಉತ್ತರಪ್ರದೇಶದಲ್ಲಿ ಸೈಕಲ್ ಗುದ್ದಿ ಆನೆ ಸತ್ತ ಘಟನೆ ನಿಮಗೆ ಗೊತ್ತಿರಬಹುದು. ಸೈಕಲ್ ಕುರಿತು ಇಡೀ ದೇಶವೇ ಗಂಭೀರವಾಗಿ ಮಾತನಾಡುತ್ತಿರುವಾಗ ನಾವು ಹೇಗೆ ಸುಮ್ಮನಿರಲು ಸಾಧ್ಯ? ಸೈಕಲ್ ಸವಾರಿಯ ಪ್ರಮುಖ ಹತ್ತು ಲಾಭಗಳನ್ನು ಜತನದಿಂದ ಎತ್ತಿ ಮುಂದಿಟ್ಟಿದ್ದೇವೆ. ಓದಿಕೊಳ್ಳಿ.

* ಇದು ಪರಿಸರ ಸ್ನೇಹಿ ಸಾರಿಗೆ

* ಕಿಸೆಗೆ ಉಪಕಾರಿ. ಪೆಟ್ರೋಲ್, ಡೀಸೆಲ್, ಗ್ಯಾಸ್ ಇತ್ಯಾದಿ ಇಂಧನಕ್ಕೆ ಸುರಿಯುವ ದುಡ್ಡು ಉಳಿಸಬಹುದು.

* ಇದರ ನಿರ್ವಹಣೆ ವೆಚ್ಚ ಕಡಿಮೆ.

* ಆರೋಗ್ಯಕ್ಕೆ ಉತ್ತಮ. ಹೃದಯದ ಆರೋಗ್ಯ ಹೆಚ್ಚಾಗುತ್ತದೆ. ಸ್ನಾಯುಗಳು ಬಲಗೊಳ್ಳುತ್ತವೆ.

* ಸಂಚಾರ ದಟ್ಟಣೆಯಲ್ಲೂ ಸರಾಗವಾಗಿ ನುಸುಳಿಕೊಂಡು ಹೋಗಬಹುದು.

* ಸಿಟಿ ರಸ್ತೆಯಲ್ಲಿ ತಕ್ಷಣ ಹೋಗಿಬರಬಹುದು. ಸಿಟಿಯೊಳಗಿನ ಪ್ರಯಾಣಕ್ಕೆ ಸೈಕಲಿಗಿಂತ ಉತ್ತಮ ಸಾರಿಗೆ ಯಾವುದೂ ಇಲ್ಲ.

* ಪಾರ್ಕಿಂಗ್ ಶುಲ್ಕ ಪಾವತಿಸಬೇಕಿಲ್ಲ.

* ವ್ಯಾಯಾಮ. ನೀವು ದಿನನಿತ್ಯ ಸೈಕಲ್ ಸವಾರಿ ಮಾಡುತ್ತಿದ್ದರೆ ವ್ಯಾಯಾಮ ಮಾಡಲು ಬೇರೆ ಸಮಯ ವಿನಿಯೋಗಿಸಬೇಕಿಲ್ಲ. ಸೈಕಲ್ ಸವಾರಿ ಅತ್ಯುತ್ತಮ ವ್ಯಾಯಾಮ.

* ಸೈಕಲ್ ನಲ್ಲಿ ನಿಧಾನವಾಗಿ ಸವಾರಿ ಮಾಡುತ್ತ ಪರಿಸರವನ್ನು ಸಮಚಿತ್ತದಿಂದ ವೀಕ್ಷಿಸಬಹುದು. ಬೇರೆ ವಾಹನಗಳಲ್ಲಿ ವೇಗವಾಗಿ ಸಾಗುತ್ತಿದ್ದಾಗ ಇದೆಲ್ಲ ಸಾಧ್ಯವಿಲ್ಲ. ನಿಮಗಿಷ್ಟವಾದ ಹಾಡು ಗುನುಗುತ್ತ ಸೈಕಲ್ ಸವಾರಿ ಮಾಡಿದರೆ ಅದರ ಮಜನೇ ಬೇರೆ.

* ಮಾನಸಿಕವಾಗಿ ಮತ್ತು ದೈಹಿಕವಾಗಿ ಹೆಚ್ಚು ಉಲ್ಲಾಸದಿಂದ ಇರುತ್ತೀರಿ.

ಹೀಗೆ ಹತ್ತು ಹಲವು ಲಾಭವಿರುವ ಕಾರಣ ಬೈಕ್, ಕಾರು ಮರೆತು ನೀವು ಕೂಡ ಸೈಕಲ್ ಪಕ್ಷ ಸೇರಬಹುದು. (ಕನ್ನಡ ಡ್ರೈವ್ ಸ್ಪಾರ್ಕ್ )

More from DriveSpark

Article Published On: Wednesday, March 7, 2012, 11:30 [IST]
English summary
Akhilesh and Mulayam Singh Yadav Samajwadi Party's symbol bicycle. In transport Bicycle is best for environment, health, money saving. Read here top advantages of Riding Bicycle.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+