ಆಡಿ ಲಗ್ಷುರಿ ಮೈಲೇಜ್ ಕಾರು ಎ8 ನೋಡಿದಿರಾ?
ದೇಶದ ಐಷಾರಾಮಿ ಕಾರು ಮಾರುಕಟ್ಟೆಯಲ್ಲಿ ಆಡಿ ಮೋಡಿ ಮಾಡಿದೆ. ಮರ್ಸಿಡಿಸ್ ಬೆಂಝ್, ಬಿಂಡಬ್ಲ್ಯು ಕಂಪನಿಗಳನ್ನು ಹಿಂದಿಕ್ಕಿ ಇಲ್ಲಿ ಆಡಿ ಪ್ರಥಮ ಸ್ಥಾನ ಪಡೆದಿದೆ. ಮೈಲೇಜ್ ವಿಷ್ಯದಲ್ಲಿ ಗಮನ ಸೆಳೆಯುವ ಆಡಿ ಕಾರಿನ ಹೆಸರು ಆಡಿ ಎ8.
ಜರ್ಮನಿಯ ಕಾರು ಕಂಪನಿ ಆಡಿಯ ಎ8 3.0 ಟಿಡಿಐ ಪ್ರೀಮಿಯಂ ಸಲೂನ್ 3.0 ಲೀಟರಿನ ಡೀಸೆಲ್ ಎಂಜಿನ್ ಹೊಂದಿದೆ. ಇದು 251 ಪಿಎಸ್ ಪವರ್ ಮತ್ತು 550 ಎನ್ಎಂ ಟಾರ್ಕ್ ಪವರ್ ನೀಡುತ್ತದೆ. ಈ ಕಾರು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಹೊಂದಿದೆ.
ಆಡಿ ಕಂಪನಿಯ ಇತರ ಕಾರುಗಳಿಗೆ ಹೋಲಿಸಿದರೆ ಎ8 ಮೈಲೇಜ್ ಪರವಾಗಿಲ್ಲವೆಂದೆನಿಸುತ್ತದೆ. ಇದು ಹೆದ್ದಾರಿಯಲ್ಲಿ ಪ್ರತಿಲೀಟರಿಗೆ 8 ಕಿ.ಮೀ. ಮತ್ತು ಸಿಟಿ ರಸ್ತೆಯಲ್ಲಿ ಸುಮಾರು 5.8 ಕಿ.ಮೀ. ಮೈಲೇಜ್ ನೀಡುತ್ತದೆ. 1,965 ಕೆ.ಜಿ. ತೂಕವಿರುವ ಕಾರೊಂದು ಇಷ್ಟು ಮೈಲೇಜ್ ನೀಡುವುದು ಸದ್ಯದ ಅಚ್ಚರಿ. ಇದರ ದರ ಸುಮಾರು 85.58 ಲಕ್ಷ ರುಪಾಯಿ ಆಸುಪಾಸಿನಲ್ಲಿದೆ.
ಪೊರ್ಷ್ ಪನಮೆರಾ ಕಾರು ನೋಡಿರಿ>>


Click it and Unblock the Notifications









