ಲಗ್ಷುರಿ ಮೈಲೇಜ್ ಕಾರುಲೋಕದಲ್ಲೊಂದು ಸುತ್ತು
ಐಷಾರಾಮಿ ಕಾರುಗಳ ದರ ದೇವರಿಗೆ ಪ್ರೀತಿ. ದರಕ್ಕೆ ವಿರುದ್ಧವಾಗಿ ಅದರ ಮೈಲೇಜ್ ಇರುತ್ತದೆ. ನಾಲ್ಕೈದು ಕಿ.ಮೀ. ಮೈಲೇಜ್ ನೀಡುವ ಈ ಕಾರುಗಳು ದುಡ್ಡು ಜಾಸ್ತಿಯಾದವರಿಗೆ ಮಾತ್ರ. ಇಂಧನ ದಕ್ಷತೆ ಪರೀಕ್ಷೆಯಲ್ಲಿ ಈ ಕಾರುಗಳು ಯಾವತ್ತಿಗೂ ಫೇಲು. ಆದರೆ ಲಗ್ಷುರಿ ಕಾರುಗಳಲ್ಲೂ ಅತ್ಯುತ್ತಮ ಮೈಲೇಜ್ ನೀಡುವ ಕಾರುಗಳಿವೆ. ಅಂತಹ ಕಾರುಲೋಕದಲ್ಲಿ ಒಂದು ಸುತ್ತು.
ಬಿಎಂಡಬ್ಲ್ಯು 730ಡಿ: ಜರ್ಮನಿಯ ಪ್ರೀಮಿಯಂ ಕಾರು ಕಂಪನಿ ಬಿಎಂಡಬ್ಲ್ಯು ಲಗ್ಷುರಿಗೆ ಅನ್ವರ್ಥನಾಮ. ಇದು ಭಾರತದ ಐಷಾರಾಮಿ ಕಾರು ಮಾರುಕಟ್ಟೆಯ ಪ್ರಸಕ್ತ ನಾಯಕ ಕಂಪನಿಯೂ ಹೌದು. ಆಡಿ ಮತ್ತು ಮರ್ಸಿಡಿಸ್ ಬೆಂಝ್ ಕಂಪನಿಗಳನ್ನು ಹಿಂದಿಕ್ಕಿ ಇದು ಅಗ್ರಸ್ಥಾನದಲ್ಲಿದೆ.
ಬಿಎಂಡಬ್ಲ್ಯು ಕಂಪನಿಯ ಅತ್ಯಧಿಕ ಇಂಧನ ದಕ್ಷತೆಯ ಕಾರೆಂದರೆ 730ಡಿ ಲಗ್ಷುರಿ ಸೆಡಾನ್. ಇದು 730ಡಿ ಕಾರು 3.0 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಹೊಂದಿದೆ. ಇದು ವಿಶ್ಷದ ಪ್ರಮುಖ ಶಕ್ತಿಶಾಲಿ ಎಂಜಿನ್ ಹೊಂದಿದೆ.
ಸುಮಾರು 1,865 ಕೆಜಿ ತೂಕದ ಈ ಕಾರಿನಲ್ಲಿ ಕೇವಲ 7.0 ಸೆಕೆಂಡಿನಲ್ಲಿ 0-62 ಕಿ.ಮೀ. ವೇಗ ಪಡೆಯಬಹುದು. ಅಂದಹಾಗೆ ಇದರ ಗರಿಷ್ಠ ವೇಗ ಗಂಟೆಗೆ 153 ಕಿ.ಮೀ. ಇದರ ಮೈಲೇಜ್ ಪ್ರತಿಲೀಟರಿಗೆ ಹೆದ್ದಾರಿಯಲ್ಲಿ 13.67 ಕಿ.ಮೀ. ಮತ್ತು ಸಿಟಿ ರಸ್ತೆಯಲ್ಲಿ 7 ಕಿ.ಮೀ. ಮೈಲೇಜ್ ನೀಡುತ್ತದೆ.
ಮರ್ಸಿಡಿಸ್ ಬೆಂಝ್ ಮೈಲೇಜ್ ಕಾರು ಯಾವುದು? ಮುಂದಿನ ಪುಟ ನೋಡಿ


Click it and Unblock the Notifications









