ಲಿಮಿಟೆಡ್ ಮಾತ್ರ: ಹೊಸ ಟೊಯೊಟಾ ಲಿವಾ ಸ್ಪೋರ್ಟಿ ರಸ್ತೆಗೆ

ಟೊಯೊಟಾ ಕಿರ್ಲೊಸ್ಕರ್ ಮೋಟರ್(ಟಿಕೆಎಂ) ಕಂಪನಿಯು ನೂತನ ಲಿವಾ ಟಿಆರ್ಡಿ ಸ್ಪೋರ್ಟಿಯೊ ಎಂಬ ಲಿಮಿಟೆಡ್ ಅಡಿಷನ್ ಕಾರನ್ನು ಪರಿಚಯಿಸಿದೆ. ಟೊಯೊಟಾ ಎಟಿಯೋಸ್ ಲಿವಾ ಆಗಮಿಸಿ ಒಂದು ವರ್ಷವಾದ ಸಂಭ್ರಮಕ್ಕೆ ಕಂಪನಿಯು ಈ ಲಿಮಿಟೆಡ್ ಅಡಿಷನ್ ಕಾರನ್ನು ಹೊರತಂದಿದೆ.

ನೂತನ ಲಿಮಿಟೆಡ್ ಅಡಿಷನ್ ಲಿವಾ ಮಾರಾಟ 2012ರ ಅಕ್ಟೋಬರ್ ತಿಂಗಳವರೆಗಿರಲಿದೆ. ಇದು ಎಕ್ಸ್ ಕ್ಲೂಸಿವ್ ಕಾರಾಗಿದ್ದು, ಪ್ರಮುಖವಾಗಿ ಯುವಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಹೊರತರಲಾಗಿದೆ. ಟೊಯೊಟಾ ರೇಸಿಂಗ್ ಡೆವಲಪ್ ಮೆಂಟ್ ವಿಭಾಗವು ನೂತನ ಕಾರನ್ನು ವಿನ್ಯಾಸ ಮಾಡಿದೆ.

ನೂತನ Liva TRD Sportivo ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಇದರಲ್ಲಿ ಪೆಟ್ರೋಲ್ ಲಿವಾ ಆವೃತ್ತಿ ದರ 5.23 ಲಕ್ಷ ರುಪಾಯಿ ಆಗಿದೆ. ಡೀಸೆಲ್ ಲಿವಾ ಆವೃತ್ತಿ ದರ 6.32 ಲಕ್ಷ ರುಪಾಯಿ ಆಗಿದೆ. ಇವೆರಡು ದೆಹಲಿ ಎಕ್ಸ್ ಶೋರೂಂ ದರಗಳು.

ಟ್ರೆಂಡಿ ಸ್ಪೋರ್ಟ್ಸ್ ಲುಕ್ ಹಿನ್ನಲೆಯಲ್ಲಿ ಈ ಆವೃತ್ತಿಗೆ ಸ್ಪೋರ್ಟಿವೊ ಎಂದು ಹೆಸರಿಡಲಾಗಿದೆ. ಹಳೆಯ ಲಿವಾ ಕಾರಿಗಿಂತ ಹತ್ತು ಹಲವು ಹೊರವಿನ್ಯಾಸದೊಂದಿಗೆ ಈ ಕಾರು ಆಗಮಿಸಿದೆ. ಅಂದರೆ ಮುಂಭಾಗದ ಹೊಸ ಬಂಪರ್ ಸ್ಪ್ಯಾಲರ್, ಏರ್ ಡೈನಾಮಿಕ್ ಅಂಚುಗಳು, ಎರಡು ಟೋನ್ ರಿಯರ್ ಬಂಪರ್ ಸ್ಪ್ಯಾಲರ್ ಇತ್ಯಾದಿಗಳಿವೆ.

ನೂತನ ಲಿವಾ ಲಿಮಿಟೆಡ್ ಅಡಿಷನ್ ಕಾರು ಬಿಳಿ ಮತ್ತು ನೀಲಿ ಬಣ್ಣಗಳಲ್ಲಿ ದೊರಕುತ್ತದೆ. ನೂತನ ಹದಿನೈದು ಇಂಚಿನ ಅಲಾಯ್ ವೀಲ್ ಇದರ ಅಂದವನ್ನು ಹೆಚ್ಚಿಸಿದೆ. ಅಂದಹಾಗೆ ಇದು ಲಿಮೆಟೆಡ್ ಅಡಿಷನ್ ಕಾರು. ಅಂದ್ರೆ ಕೇವಲ 1200 ಕಾರುಗಳನ್ನು ಮಾತ್ರ ಕಂಪನಿ ಮಾರಾಟ ಮಾಡಲಿದೆ. ಸ್ಪೋರ್ಟಿ ವಿನ್ಯಾಸದ ಲಿವಾ ಬೇಕೆಂದ್ರೆ ಹತ್ತಿರದ ಟೊಯೊಟಾ ಶೋರೂಂಗೆ ಭೇಟಿ ನೀಡಿ.

More from DriveSpark

Article Published On: Wednesday, August 1, 2012, 12:03 [IST]
English summary
The Limited Edition Liva TRD Sportivo has been launched by Toyota Kirloskar Motor (TKM). Toyota has launched the Liva Sportivo, in order to mark the first anniversary of Etios Liva. The Liva TRD Sportivo will be offered in both petrol and diesel variants. The petrol variant is priced at INR 5.23 lakh and diesel at INR 6.32 lakh (ex-showroom, New Delhi).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+