2014 ಟೊಯೊಟಾ ಎಟಿಯೋಸ್, ಲಿವಾ ಬಿಡುಗಡೆ

By Nagaraja

ಜಪಾನ್ ಮೂದಲ ಪ್ರಖ್ಯಾತ ವಾಹನ ತಯಾರಿಕ ಸಂಸ್ಥೆಯಾಗಿರುವ ಟೊಯೊಟಾ ಕಿರ್ಲೊಸ್ಕರ್ ಮೋಟಾರು ಪ್ರೈವೇಟ್ ಇಂಡಿಯಾ ಸಂಸ್ಥೆಯು ಈ ಹಬ್ಬದ ಆವೃತ್ತಿಯ ಸಂದರ್ಭದಲ್ಲಿ ಪರಿಷ್ಕೃತ ಎಟಿಯೋಸ್ ಸೆಡಾನ್ ಮತ್ತು ಎಟಿಯೋಸ್ ಲಿವಾ ಮಾದಿರಗಳನ್ನು ಬಿಡುಗಡೆ ಮಾಡಿದೆ.

ಎಟಿಯೋಸ್ ಪೆಟ್ರೋಲ್ ಮಾದರಿಗಳು ಅನುಕ್ರಮವಾಗಿ 5.74 ಲಕ್ಷ ರು. ಹಾಗೂ 7.06 ಲಕ್ಷ ರು.ಗಳು ಅಂತೆಯೇ ಡೀಸೆಲ್ ಮಾದರಿಗಳು 6.84 ಲಕ್ಷ ರು. ಹಾಗೂ 8.16 ಲಕ್ಷ ರು.ಗಳಷ್ಟು (ಎಕ್ಸ್ ಶೋ ರೂಂ ದೆಹಲಿ) ದುಬಾರಿಯೆನಿಸಲಿದೆ.


ಅದೇ ರೀತಿ ಲಿವಾ ಹ್ಯಾಚ್‌ಬ್ಯಾಕ್ ಪೆಟ್ರೋಲ್ ಮಾದರಿಗಳು ಅನುಕ್ರಮವಾಗಿ 4.76 ಲಕ್ಷ ರು. ಹಾಗೂ 6.57 ಲಕ್ಷ ರು.ಗಳು ಅಂತೆಯೇ ಡೀಸೆಲ್ ಮಾದರಿಗಳು 5.94 ಲಕ್ಷ ರು. ಹಾಗೂ 6.95 ಲಕ್ಷ ರು.ಗಳಷ್ಟು (ಎಕ್ಸ್ ಶೋ ರೂಂ ದೆಹಲಿ) ದುಬಾರಿಯಾಗಲಿದೆ.

ಈ ಎರಡು ಮಾದರಿಗಳು 'ನ್ಯೂ ಎಟಿಯೋಸ್' ಮತ್ತು 'ನ್ಯೂ ಎಟಿಯೋಸ್ ಲಿವಾ' ಎಂದು ಹೆಸರಿಸಿಕೊಳ್ಳಲಿದೆ. ಹೊಸ ಕ್ರೋಮ್‌ಯುಕ್ತವಾದ ಮುಂಭಾಗ, 'ಸಿಂಗಲ್ ಟೂತ್' ಗ್ರಿಲ್ ವಿನ್ಯಾಸವನ್ನು ಟೊಯೊಟಾ ಎಟಿಯೋಸ್ ಸೆಡಾನ್ ಪಡೆಯಲಿದೆ. ಅದೇ ಹೊತ್ತಿಗೆ ಟೊಯೊಟಾ ಲಿವಾ ಕ್ರೋಮ್ ರಹಿತ ಹೊಸ ಗ್ರಿಲ್ ಪಡೆಯಲಿದೆ. ಹಾಗಿದ್ದರೂ ಪಾರ್ಕಿಂಗ್ ಸೆನ್ಸಾರ್ ಹೊರತಾಗಿ ಕಾರಿನ ಬದಿ ಹಾಗೂ ಹಿಂಭಾಗದ ವಿನ್ಯಾಸದಲ್ಲಿ ಹೆಚ್ಚಿನ ಬದಲಾವಣೆಗಳು ಕಂಡುಬಂದಿಲ್ಲ.

new etios

ಇನ್ನು ಕಾರಿನೊಳಗೂ ಕೆಲವೊಂದು ಪರಿಷ್ಕರಣೆಗಳು ಕಂಡುಬಂದಿದ್ದು, ಡೋರ್ ಪ್ಯಾನೆಲ್‌ಗಳಲ್ಲೂ ಫ್ಯಾಬ್ರಿಕ್ ಅಪ್‌ಹೋಲ್‌ಸ್ಟ್ರೆ ಕಂಡುಬರಲಿದೆ. ಅದೇ ರೀತಿ ಫಾಕ್ಸ್ ಲೆಥರ್ ಸ್ಟೀರಿಂಗ್ ವೀಲ್ ಹೋದಿಗೆ, ಕ್ರೋಮ್ ಸ್ಪರ್ಶಿತ ಗೇರ್ ಸ್ಟಿಕ್, ಚಾಲಕ ಬದಿಯ ಏರ್ ಬ್ಯಾಗ್ ಸಹ ಸ್ಟಾಂಡರ್ಡ್ ಆಗಿ ದೊರಕಲಿದ್ದು, ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಔಟರ್ ರಿಯರ್ ವ್ಯೂ ಮಿರರ್ ಕೂಡಾ ಇರಲಿದೆ.

ಹಾಗಿದ್ದರೂ ಎಂಜಿನ್ ಮಾನದಂಡಗಳಲ್ಲಿ ಯಾವುದೇ ವ್ಯತ್ಯಾಸ ಕಂಡುಬರುವುದಿಲ್ಲ. ಇದು 1.2 ಹಾಗೂ 1.5 ಲೀಟರ್ ಪೆಟ್ರೋಲ್ ಮತ್ತು 1.4 ಲೀಟರ್ ಡೀಸೆಲ್ ಎಂಜಿನ್‌ಗಳನ್ನು ಪಡೆದುಕೊಳ್ಳಲಿದೆ.

ಇಲ್ಲಿ ಸ್ವಾಗತಾರ್ಹ ಸಂಗತಿಯೆಂದರೆ ಟೊಯೊಟಾ ಸಂಸ್ಥೆಯು ಸುರಕ್ಷತೆಗೆ ಅತಿ ಹೆಚ್ಚಿನ ಮಹತ್ವ ನೀಡುತ್ತಿದ್ದು, ತನ್ನೆಲ್ಲ ವೆರಿಯೆಂಟ್‌ಗಳಿಗೆ ಸ್ಟಾಂಡರ್ಡ್ ಆಗಿ ಡ್ಯುಯಲ್ ಫ್ರಂಟ್ ಏರ್ ಬ್ಯಾಗ್ ಒದಗಿಸಲಿದೆ. ಇದಕ್ಕೂ ಮೊದಲು ಫೋಕ್ಸ್‌ವ್ಯಾಗನ್ ಸಂಸ್ಥೆಯು ತನ್ನ ಜನಪ್ರಿಯ ಪೊಲೊ ವೆರಿಯಂಟ್‌ನಲ್ಲಿ ಇಂತಹದೊಂದು ವೈಶಿಷ್ಟ್ಯವನ್ನು ಆಳವಡಿಸಿತ್ತು.

Most Read Articles

Kannada
English summary
Toyota New Etios sedan, New Etios Liva hatchback launched
Story first published: Wednesday, October 15, 2014, 10:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X