ಬಜೆಟ್ ಕ್ಷಣಕ್ಷಣದ ಸುದ್ದಿ: ಆಟೋಮೊಬೈಲ್ಸ್

* ಬೃಹತ್ ಕಾರುಗಳಿಗೆ ಶೇಕಡ 5ರಷ್ಟು ಅಬಕಾರಿ ಸುಂಕ ಹೆಚ್ಚಳ.
ಇದರಿಂದ ಬೃಹತ್ ಕಾರುಗಳಿಗೆ ವಿಧಿಸಲಾಗಿದ್ದ ಅಬಕಾರಿ ಸುಂಕವು ಶೇಕಡ 22ರಿಂದ ಶೇಕಡ 27ರವರೆಗೆ ಹೆಚ್ಚಳವಾಗಲಿದೆ.
* ಸಣ್ಣಕಾರುಗಳ ಬೆಲೆ ಏರಿಕೆಯಾಗುವ ಸಾಧ್ಯತೆ. ಯಾಕೆಂದರೆ ಅಬಕಾರಿ ಸುಂಕ ಶೇಕಡ 10ರಿಂದ ಶೇಕಡ 12ಕ್ಕೆ ಏರಿಕೆ ಪ್ರಸ್ತಾಪ.
* ಲೀಥಿಯಂ ಐಯಾನ್ ಬ್ಯಾಟರಿಗಳಿಗೆ ಆಮದು ಸುಂಕ ಇಳಿಕೆ. ಇದರಿಂದ ಎಲೆಕ್ಟ್ರಿಕ್ ಕಾರು ಅಗ್ಗವಾಗಲಿದೆ.
* ಆಮದು ಮಾಡಿದ ಕಾರುಗಳಿಗೆ ಅಬಕಾರಿ ಸುಂಕ ಶೇಕಡ 60 ಇದ್ದದ್ದು, ಶೇಕಡ 75ರವರೆಗೆ ಹೆಚ್ಚಳವಾಗಿದೆ. ಹೀಗಾಗಿ ಕಾರುಗಳ ಆಮದು ದುಬಾರಿಯಾಗಲಿದೆ.
* ಬೈಸಿಕಲ್ ಬೆಲೆ ಏರಿಕೆ. ವಿದೇಶಿ ಸೈಕಲ್ ತೆರಿಗೆ ಶೇ 10 ರಿಂದ ಶೇ. 30ಕ್ಕೆ ಏರಿಕೆ.


Click it and Unblock the Notifications








