ಸೆಕೆಂಡ್ ಹ್ಯಾಂಡ್ ಪೆಟ್ರೋಲ್ ಕಾರಿಗೆ ಈಗ ರೆಟ್ ಕಮ್ಮಿ
ಪೆಟ್ರೋಲ್ ದರ ಹೆಚ್ಚಾಗಿದ್ದರೂ, ಡೀಸೆಲ್ ಕಾರುಗಳಿಗೆ ಬೇಡಿಕೆ ಹೆಚ್ಚಾಗಿದ್ದರೂ ಈಗ ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆಯಲ್ಲಿ ಪೆಟ್ರೋಲ್ ಆವೃತ್ತಿಗಳದ್ದೇ ಕಾರುಬಾರು. ಸೋಜಿಗವೆಂದರೆ ಈಗ ಪೆಟ್ರೋಲ್ ಇಂಧನ ಬಳಸುವ ಸೆಕೆಂಡ್ ಹ್ಯಾಂಡ್ ಕಾರುಗಳ ದರ ಗಮನಾರ್ಹವಾಗಿ ಕುಸಿತ ಕಂಡಿದೆ.
ಪೆಟ್ರೋಲ್ ಸೆಕೆಂಡ್ ಹ್ಯಾಂಡ್ ಕಾರು ಖರೀದಿಯಲ್ಲಿ ಗ್ರಾಹಕರು ಹೆಚ್ಚು ಹೆಚ್ಚು ಚೌಕಾಶಿ ಮಾಡುತ್ತಿದ್ದಾರೆ. ಬೆಂಗಳೂರು, ಮುಂಬೈ, ದೆಹಲಿ ಮುಂತಾದ ನಗರಗಳಲ್ಲಿ ಐದು ವರ್ಷ ಹಳೆಯದಾದ ಹೋಂಡಾ ಸಿವಿಕ್ ದರ 4 ಲಕ್ಷ ರು. ಇದೆ. ಈ ಮೊದಲು ಸಿವಿಕ್ ಸೆಕೆಂಡ್ ಹ್ಯಾಂಡ್ ದರ 5-6 ಲಕ್ಷ ರು. ಇತ್ತು.
ಸೆಕೆಂಡ್ ಹ್ಯಾಂಡ್ ಮಾರ್ಕೆಟ್ನಲ್ಲಿ ಟೊಯೊಟಾ ಕೊರೊಲಾ ಆಲ್ಟಿಸ್, ಫಿಯೆಟ್ ಲಿನಿಯಾ, ಮಾರುತಿ ಸುಜುಕಿ ಎಸ್ಎಕ್ಸ್4, ಫೋರ್ಡ್ ಫಿಯೆಸ್ಟಾ ಮತ್ತು ಷೆವರ್ಲೆ ಅವಿಯೊ ಸೆಡಾನ್ ಕಾರುಗಳ ದರ ಕೂಡ ಇಳಿಕೆ ಕಂಡಿದೆ. ಈ ಕಾರುಗಳ ಕಡಿಮೆ ಇಂಧನ ದಕ್ಷತೆ ಮತ್ತು ಹೆಚ್ಚು ರನ್ನಿಂಗ್ ವೆಚ್ಚ ದರ ಕುಸಿತಕ್ಕೆ ಪ್ರಮುಖ ಕಾರಣ.
ವಿಶೇಷವೆಂದರೆ ಇದೇ ಸಮಯದಲ್ಲಿ ಸೆಕೆಂಡ್ ಹ್ಯಾಂಡ್ ಡೀಸೆಲ್ ಕಾರುಗಳಿಗೆ ಬೇಡಿಕೆ ಹೆಚ್ಚಾಗಿದೆ. ಜೊತೆಗೆ ಇವುಗಳ ದರ ಕೂಡ ದುಬಾರಿಯಾಗುತ್ತಿದೆ. ಐದು ಕಾರುಗಳಲ್ಲಿ ಒಂದು ಡೀಸೆಲ್ ಕಾರು ಮಾರಾಟವಾಗುತ್ತಿದೆ ಎಂದು ಬೆಂಗಳೂರಿನ ಸೆಕೆಂಡ್ ಹ್ಯಾಂಡ್ ಕಾರು ಡೀಲರೊಬ್ಬರು ಹೇಳುತ್ತಾರೆ.


Click it and Unblock the Notifications









